Mother's Day 2022: ಮಗನ ಮೊದಲ ಫೋಟೋ ಶೇರ್‌ ಮಾಡಿದ Kajal Agarwal

Published : May 08, 2022, 07:56 PM IST

2022 ರ ತಾಯಂದಿರ ದಿನವನ್ನು (Mother's Day 2022) ದೇಶ ಮತ್ತು ಪ್ರಪಂಚದಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತಿದೆ.  ಈ ಸಂದರ್ಭದಲ್ಲಿ   ಅನೇಕ ಸೆಲೆಬ್ರಿಟಿಗಳು  ತಮ್ಮ ಪೋಷಕರು ಮತ್ತು ಮಕ್ಕಳೊಂದಿಗೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ನಡುವೆ ನ್ಯೂ ಮಮ್ಮಿ  ಕಾಜಲ್ ಅಗರ್ವಾಲ್ (Kajal Agarwal)  ಈ ವಿಶೇಷ ಸಂದರ್ಭದಲ್ಲಿ ತಮ್ಮ ಮಗ ನೀಲ್ ಕಿಚ್ಲು  (Mother's Day 2022)  ಅವರ ಮೊದಲ ಫೋಟೋವನ್ನು ಹಂಚಿಕೊಂಡಿದ್ದಾರೆ. 

PREV
15
Mother's Day 2022: ಮಗನ ಮೊದಲ ಫೋಟೋ ಶೇರ್‌ ಮಾಡಿದ Kajal Agarwal
Mothers Day 2022, Kajal Agarwal shares first photo of son Neil Kitchlu on mothers day have a look

ಹೊರಬಿದ್ದಿರುವ ಈ ಫೋಟೋದಲ್ಲಿ ಕಾಜಲ್ ಮಲಗಿದ್ದು ಮಗನನ್ನು ತನ್ನ ಎದೆಯ ಮೇಲೆ ಮಲಗಿಸಿರುವುದು ಕಂಡು ಬರುತ್ತಿದೆ. ಆದರೆ ಕಾಜಲ್ ತನ್ನ ಮಗ ನೀಲ್  ಮುಖ ತೋರಿಸಲಿಲ್ಲ. ಫೋಟೋವನ್ನು ಶೇರ್ ಮಾಡುವ ಮೂಲಕ ಕಾಜಲ್ ಸುದೀರ್ಘ ಪೋಸ್ಟ್ ಅನ್ನು ಸಹ ಹಂಚಿಕೊಂಡಿದ್ದಾರೆ.

25
Mothers Day 2022, Kajal Agarwal shares first photo of son Neil Kitchlu on mothers day have a look

ಮದರ್ಸ್‌ ಡೇ ಸಮಯದಲ್ಲಿ, ಕಾಜಲ್ ತನ್ನ ಮಗನ ಮೊದಲ ನೋಟವನ್ನು ತೋರಿಸುವ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಕಾಜಲ್ ಅಗರ್ವಾಲ್ ಮಗನ ಬಗ್ಗೆ ಭಾವುಕರಾಗಿದ್ದಾರೆ. ಕಾಜಲ್ ಅವರ ಪೋಸ್ಟ್‌ಗೆ ಅಭಿಮಾನಿಗಳೊಂದಿಗೆ  ಸೆಲೆಬ್ರಿಟಿಗಳು ಕೂಡ  ಕಾಮೆಂಟ್ ಮಾಡುತ್ತಿದ್ದಾರೆ.

35
Kajal Agarwal and Gautam Kitchlu

ಪ್ರಸ್ತುತ  ಕಾಜಲ್ ಅಗರ್ವಾಲ್ ಮಗನಿಗೆ 18 ದಿನಗಳು. ಕಾಜಲ್ ಅಗರ್ವಾಲ್ ಏಪ್ರಿಲ್ 19 ರಂದು ಮಗನಿಗೆ ಜನ್ಮ ನೀಡಿದರು. ಮಗನ ಜನನದ ನಂತರ ಅವರ ಪತಿ ಗೌತಮ್ ಕಿಚ್ಲೆವ್ ಅವರು ಇನ್ಸ್ಟಾಗ್ರಾಮ್ ಮೂಲಕ ಈ ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ. 

45

ಕಾಜಲ್ ಅಗರ್ವಾಲ್ ಮತ್ತು ಗೌತಮ್ ಕಿಚ್ಲು ಮುಂಬೈನಲ್ಲಿ ಅಕ್ಟೋಬರ್ 30, 2020 ರಂದು ಆತ್ಮೀಯ ಸಮಾರಂಭದಲ್ಲಿ ವಿವಾಹವಾದರು. ಇಬ್ಬರೂ ಏಳು ವರ್ಷಗಳ ಕಾಲ ಉತ್ತಮ ಸ್ನೇಹಿತರಾಗಿದ್ದರು ಮತ್ತು ಮದುವೆಗೂ ಮೊದಲು ಮೂರು ವರ್ಷಗಳ ಕಾಲ ಡೇಟಿಂಗ್ ಮಾಡಿದರು.

55

ಕಾಜಲ್ ಅಗರ್ವಾಲ್ ಅವರ ಪತಿ ಗೌತಮ್ ಕಿಚ್ಲೂ ವೃತ್ತಿಯಲ್ಲಿ ಉದ್ಯಮಿ ಮತ್ತು ಡಿಸೆರ್ನ್ ಲಿವಿಂಗ್ ಡಿಸೈನ್ ಶಾಪ್‌ನ ಸ್ಥಾಪಕ ಮತ್ತು ಒಳಾಂಗಣ ವಿನ್ಯಾಸಕಾರ. ಮನೆಯ ವಿನ್ಯಾಸದ ಹೊರತಾಗಿ, ಅವರ ಕಂಪನಿಯು ಪೀಠೋಪಕರಣಗಳು, ಅಲಂಕಾರಿಕ ವಸ್ತುಗಳು, ವರ್ಣಚಿತ್ರಗಳು ಮತ್ತು ಇತರ ಗೃಹೋಪಯೋಗಿ ವಸ್ತುಗಳನ್ನು ಮಾರುತ್ತಾರೆ.

Read more Photos on
click me!

Recommended Stories