Mother’s Day 2022: ಅಮ್ಮಂದಿರ ಜೊತೆಯ ಫೋಟೋ ಹಂಚಿಕೊಂಡು ವಿಶ್‌ ಮಾಡಿದ ಬಾಲಿವುಡ್‌ ಸೆಲೆಬ್ರೆಟಿಗಳು!

Published : May 08, 2022, 07:54 PM IST

ಇಂದು  ಭಾನುವಾರ, ಮೇ 8 ರಂದು ತಾಯಂದಿರ ದಿನವನ್ನು (Mother’s Day 2022) ಆಚರಿಸಲಾಗುತ್ತಿದೆ.  ಈ ವಿಶೇಷ ದಿನದ ಸಂದರ್ಭದಲ್ಲಿ ಬಾಲಿವುಡ್‌ ಸೆಲೆಬ್ರೆಟಿಗಳು ತಮ್ಮ ತಾಯಂದಿರ ಜೊತೆಗಿರುವ ಅಡರೋಬಲ್‌ ಪೋಟೋಗಳನ್ನು ಹಂಚಿಕೊಳ್ಳುವ ಮೂಲಕ ಶುಭ ಹಾರೈಸಿದ್ದಾರೆ. ಈ ಫೋಟೋಗಳು ಸಖತ್‌ ವೈರಲ್‌ ಆಗಿದ್ದು ಫ್ಯಾನ್ಸ್‌ ತಮ್ಮ ನೆಚ್ಚಿನ ನಟ ನಟಿಯರು ತಾಯಿಯ ಜೊತೆಯಿರುವ ಫೋಟೋಗೆ ಫಿದಾ ಆಗಿದ್ದಾರೆ.

PREV
17
Mother’s Day 2022: ಅಮ್ಮಂದಿರ ಜೊತೆಯ  ಫೋಟೋ ಹಂಚಿಕೊಂಡು ವಿಶ್‌ ಮಾಡಿದ ಬಾಲಿವುಡ್‌ ಸೆಲೆಬ್ರೆಟಿಗಳು!
Image: Alia Bhatt/Instagram

ಆಲಿಯಾ ಭಟ್‌:
ಆಲಿಯಾ ತನ್ನ ತಾಯಿ ಸೋನಿ ರಜ್ದಾನ್ ಮತ್ತು ಅವರ ಅತ್ತೆ ನೀತು ಕಪೂರ್ ಅವರ ಜೊತೆಗಿರು ಸಖತ್‌ ಕ್ಯೂಟ್‌ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋವು  ಏಪ್ರಿಲ್ 15 ರಂದು ನಡೆದ ಆಲಿಯಾ ಮತ್ತು ರಣಬೀರ್ ಕಪೂರ್ ಅವರ ವಿವಾಹದ ಪಾರ್ಟಿಯಿಂದ ಬಂದಿದೆ.

27
Image: Vicky Kaushal/Instagram

ವಿಕ್ಕಿ ಕೌಶಲ್ :
ವಿಕ್ಕಿ ಅವರು ತಮ್ಮ ತಾಯಿ ವೀಣಾ ಕೌಶಲ್ ಮತ್ತು ಅತ್ತೆ ಸುಝೇನ್ ಟರ್ಕೋಟ್ ಅವರೊಂದಿಗೆ 3 ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟ ಪಂಜಾಬಿ ಭಾಷೆಯಲ್ಲಿ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಒಂದು ಚಿತ್ರದಲ್ಲಿ, ವಿಕ್ಕಿಯ ತಾಯಿ  ನಟನ ಮದುವೆಯ ಬಾರಾತ್ ಮೆರವಣಿಗೆಯಲ್ಲಿ ಮಗನೊಂದಿಗೆ ನೃತ್ಯ ಮಾಡುತ್ತಿದ್ದಾರೆ ಮತ್ತು ಇನ್ನೊಂದರಲ್ಲಿ ಅವರು ಮಗನಿಗೆ ಕಿಸ್‌ ಮಾಡುತ್ತಿದ್ದಾರೆ. ಮತ್ತು ಅವರು ಕತ್ರಿನಾ ಕೈಫ್ ಅವರ ತಾಯಿಯೊಂದಿಗೆ ಹಂಚಿಕೊಂಡ ಫೋಟೋ, ಸುಝೇನ್ ನವ ದಂಪತಿಗಳನ್ನು ಆಶೀರ್ವದಿಸುತ್ತಿರುವುದನ್ನುಕಾಣ ಬಹುದು. ಎಲ್ಲಾ ಮೂರು ಫೋಟೋಗಳು ವಿಕ್ಕಿ ಮತ್ತು ಕತ್ರಿನಾ ಮದುವೆಯದು.


 

37
Image: Katrina Kaif/Instagram

ಕತ್ರಿನಾ ಕೈಫ್:
ತನ್ನ ಗಂಡ ವಿಕ್ಕಿ ಕೌಶಲ್‌ನಂತೆಯೇ, ಕತ್ರಿನಾ ಕೂಡ ತಾಯಂದಿರ ದಿನದಂದು ಒಂದೆರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ ಹಚ್ಚ ಹಸಿರಿನ ಉದ್ಯಾನದಲ್ಲಿ ಕ್ಯಾಟ್ ಮತ್ತು ಅವರ ತಾಯಿಯನ್ನು ಕಾಣಬಹುದು. ಇನ್ನೊಂದು, ಅತ್ತೆ ವೀಣ ಕೌಶಲ್ ಮತ್ತು ಪತಿ ವಿಕ್ಕಿ ಕೌಶಲ್ ಅವರೊಂದಿಗಿನ ಫೋಟೋವಾಗಿದೆ.

47
Image: Karan Johar/Instagram

ಕರಣ್ ಜೋಹರ್‌:
'ಎಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು..... #blessedwiththebest❤️' ಎಂದು ಕರಣ್ ಅವರು ತಮ್ಮ ತಾಯಿ ಹಿರೂ ಜೋಹರ್ ಅವರೊಂದಿಗೆ ಫೋಟೋ  ಕೊಲಾಜ್ ಅನ್ನು ಹಂಚಿಕೊಳ್ಳುವಾಗ ಶೀರ್ಷಿಕೆಯಲ್ಲಿ ಬರೆದಿದ್ದಾರೆ.


 


 

57
Image: Farhan Akhtar/Instagram

ಫರ್ಹಾನ್ ಅಖ್ತರ್:
ತನ್ನ ತಾಯಿ ಹನಿ ಇರಾನಿಯೊಂದಿಗೆ  ಕಪ್ಪು ಮತ್ತು ಬಿಳಿ ಫೋಟೋವನ್ನು ಹಂಚಿಕೊಂಡ ಫರ್ಹಾನ್ ಅಖ್ತರ್, ತಾಯಂದಿರ ದಿನದ ಸಂದರ್ಭದಲ್ಲಿ ತನ್ನ ತಾಯಿಗೆ ಶುಭ ಹಾರೈಸಿದ್ದಾರೆ.

67
Image: Sara Ali Khan/Instagram

ಸಾರಾ ಅಲಿ ಖಾನ್‌:
ಸಾರಾ ಅವರ ತಾಯಿ ಅಮೃತಾ ಸಿಂಗ್ ಅವರ ಕಾರ್ಬನ್ ಕಾಪಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಸಾರಾ ಕೆಲವು ಬಾಲ್ಯದ ಫೋಟೋಗಳು ಹಾಗೂ  ತನ್ನ ಮಮ್ಮಿಯೊಂದಿಗೆ ಟ್ವೀನ್‌ ಮಾಡಿರುವ   ಇತ್ತೀಚಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

77
Image: Kangana Ranaut/Instagram

ಕಂಗನಾ ರಣಾವತ್:
ಕಂಗನಾ ತನ್ನ ತಾಯಿ ಮತ್ತು ಸಹೋದರಿ ರಂಗೋಲಿಯೊಂದಿಗೆ ಥ್ರೋಬ್ಯಾಕ್ ಫೋಟೊವನ್ನು ಹಂಚಿಕೊಂಡಿದ್ದಾಳೆ. ಫೋಟೋದಲ್ಲಿ ಎಲ್ಲಾ ಮೂವರು ರಾಣವಾತ್‌  ಮಹಿಳೆಯರು ಕೆಂಪು ಔಟ್‌ಫಿಟ್‌ನಲ್ಲಿದ್ದಾರೆ. 'ಎಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು" ಎಂದು ಕಂಗನಾ ಅವರು ವಿಶ್‌ ಮಾಡಿದ್ದಾರೆ.

Read more Photos on
click me!

Recommended Stories