ಸಂಗೀತಾಳನ್ನು ಸಲ್ಮಾನ್ ಮದುವೆಯಾಗಲು ಬಯಸಿದ್ದರು. ಮದುವೆಯ ದಿನಾಂಕವೂ ಡಿಸೈಡ್ ಆಗಿತ್ತು, ಆದರೆ ಅದು ನೆಡೆಯಲಿಲ್ಲ ಎಂದು ಹಳೆಯ ಸಂದರ್ಶನವೊಂದರಲ್ಲಿ, ಸಲ್ಮಾನ್ ತಮ್ಮ ಮತ್ತು ಸಂಗೀತಾ ಅವರ ಸಂಬಂಧದ ಬಗ್ಗೆ ಮಾತನಾಡುತ್ತಾ ಬಹಿರಂಗ ಪಡಿಸಿದ್ದರು. ಮತ್ತೊಬ್ಬ ಮಹಿಳೆಯೊಂದಿಗೆ ಸಲ್ಮಾನ್ ಅವರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಕ್ಕಾಗಿ ಸಂಗೀತಾ ಮದುವೆಯನ್ನು ರದ್ದುಗೊಳಿಸಿದ್ದರು ಎಂದು ವರದಿಯಾಗಿದೆ.