ಸಮಂತಾಗೆ ಮಾನಸಿಕ ಆರೋಗ್ಯ ಸಮಸ್ಯೆ? ತನ್ನ ಹೋರಾಟ, ಖಿನ್ನತೆ ಬಗ್ಗೆ ನಟಿ ಹೇಳಿದ್ದಷ್ಟು!

Suvarna News   | Asianet News
Published : Jan 10, 2022, 08:04 PM IST

ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ತಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿಪರ ಜೀವನದಿಂದಾಗಿ ಭಾರತದಾದ್ಯಂತಕಳೆದ ವರ್ಷ ಸುದ್ದಿ ಮಾಡಿದರು. 2021ರಲ್ಲಿ, ಸಮಂತಾ ತನ್ನ ಪತಿ, ನಟ ನಾಗ ಚೈತನ್ಯದಿಂದ (Naga Chaitanya) ಬೇರ್ಪಟ್ಟರು ಮತ್ತು ದಿ ಫ್ಯಾಮಿಲಿ ಮ್ಯಾನ್ 2 ನಲ್ಲಿನ ಅವರ ಅಭಿನಯಕ್ಕಾಗಿ ಪ್ರಶಂಸೆ, ಪ್ರಶಸ್ತಿ ಪಡೆದರು.ಇತ್ತೀಚೆಗೆ ಸಮಂತಾ ನಟಿ ತನ್ನ ಹೋರಾಟ, ಖಿನ್ನತೆಯ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ 2021 ರಲ್ಲಿ  ಸಮಂತಾ ರುತ್ ಪ್ರಭು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದರಾ?

PREV
17
ಸಮಂತಾಗೆ ಮಾನಸಿಕ ಆರೋಗ್ಯ ಸಮಸ್ಯೆ? ತನ್ನ ಹೋರಾಟ, ಖಿನ್ನತೆ ಬಗ್ಗೆ ನಟಿ ಹೇಳಿದ್ದಷ್ಟು!

ಟಾಲಿವುಡ್‌ನ ಟಾಪ್‌ ನಟಿ ಸಮಂತಾ ರುತ್ ಪ್ರಭು ಇತ್ತೀಚೆಗೆ ಮಾನಸಿಕ ಆರೋಗ್ಯ ಸಮಸ್ಯೆಗಳ (Mental Health Issues) ಬಗ್ಗೆ ಮಾತನಾಡಿದರು ಮತ್ತು ಪವರ್‌ ಮತ್ತು ಸೌಂದರ್ಯದ ಬಗ್ಗೆ  ಸಹ ನಟಿ ಟಿಪ್ಸ್‌ ನೀಡಿದ್ದಾರೆ.

27

ವಿಚ್ಛೇದನದ ನಂತರ, ಅವಳು ಸ್ವಯಂ ಅನ್ವೇಷಣೆಗೆ ಹೊರಟಿದ್ದಾರೆ. ಸ್ನೇಹಿತರೊಂದಿಗೆ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದರು ಮತ್ತು ಕೆಲಸದಲ್ಲಿ ತೊಡಗಿಸಿ ಕೊಂಡಿದ್ದಾರೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು (Challenges) ಹೇಗೆ ಎದುರಿಸಬೇಕೆಂದು ತನಗೆ ತಿಳಿದಿದೆ ಎಂದು ಸ್ಯಾಮ್ ನಿರೂಪಿಸಿದ್ದಾರೆ. 

37

ಇಷ್ಟೇ ಅಲ್ಲ ಸಮಂತಾ ಅವರು ಮಹಿಮಾ ದಾಟ್ಲಾ, ಶಿಲ್ಪಾ ರೆಡ್ಡಿ ಅವರೊಂದಿಗೆ ಹೊಸ ಸೇವೆಯನ್ನು ಪ್ರಾರಂಭಿಸಿದರು ಮತ್ತು ಈ  ವೀಕೆಂಡ್‌ನಲ್ಲಿ ಅವರು ರೋಶ್ನಿ ಟ್ರಸ್ಟ್‌ ನೀಡುತ್ತಿರುವ ಮಾನಸಿಕ ಆರೋಗ್ಯ ಸೇವೆಗಳನ್ನು ಶ್ಲಾಘಿಸಿದರು.

47

ರೋಶ್ನಿ ಟ್ರಸ್ಟ್ ಒಂದು ಲಾಭರಹಿತ ಸಂಸ್ಥೆ. 1997ರಲ್ಲಿ ಸಮಾಜದ ಬಗ್ಗೆ ಕಾಳಜಿ ಹೊಂದಿರುವ ಸ್ವಯಂ ಸೇವಕರಿಂದ ಸ್ಥಾಪಿಸಲ್ಪಟ್ಟ ಈ ಟ್ರಸ್ಟ್‌  24 ವರ್ಷಗಳಿಂದ ಮಾನಸಿಕ ಆರೋಗ್ಯ ಸೇವೆಯನ್ನು ನೀಡುತ್ತಿದೆ. 
 

57

ಈವೆಂಟ್‌ನಲ್ಲಿ, ಸಮಂತಾ ಮಾನಸಿಕ ಆರೋಗ್ಯದ ಮಹತ್ವದ ಬಗ್ಗೆ ಮಾತನಾಡಿದರು ಮತ್ತು ತಮ್ಮ ನಿಕಟ ಸ್ನೇಹಿತರು ಮತ್ತು ಸಲಹೆಗಾರರ ​​ಸಹಾಯದಿಂದ ಮಾತ್ರ ತಮ್ಮ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯ ಎಂದು ಹೇಳಿದರು. 

67

'ನೀವು ಮಾನಸಿಕವಾಗಿ ನೊಂದಿರುವಾಗ ಸಹಾಯ ಪಡೆಯಲು ಯಾವುದೇ ನಿರ್ಬಂಧಗಳು ಇರಬಾರದು. ನನ್ನ ವಿಷಯದಲ್ಲಿ, ನನ್ನ ವೈದ್ಯರು, ಸಲಹೆಗಾರರು ಮತ್ತು ಸ್ನೇಹಿತರ ಸಹಾಯದಿಂದ ಮಾತ್ರ ನನ್ನ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಾಯಿತು,' ಎಂದು ನಟಿ ಹೇಳಿದರು.
 

77

ಮನೋವೈದ್ಯರ (Psychiatrics) ಸಹಾಯವನ್ನು ನಾರ್ಮಲ್‌ ಮಾಡಬೇಕು ಎಂಬ ಅಂಶವನ್ನು ಸಮಂತಾ ಎತ್ತಿ ತೋರಿಸಿದ್ದಾರೆ, 'ನಾವು ದೈಹಿಕ ನೋವಿಗೆ ವೈದ್ಯರ ಬಳಿಗೆ ಹೋಗುವಂತೆಯೇ, ನಮ್ಮ ಮನಸ್ಸಿಗೆ ನೋವಾಗಿದ್ದರೆ, ನಾವು ಮನೋವೈದ್ಯರನ್ನು ಭೇಟಿ ಮಾಡಬೇಕು,' ಎಂದು ಸಮಂತಾ ಹೇಳಿದ್ದಾರೆ.

Read more Photos on
click me!

Recommended Stories