Poonam Pandey Divorce; ನನ್ನಿಬ್ಬರು ಮಕ್ಕಳೊಂದಿಗೆ ಖುಷಿಯಾಗಿದ್ದೇನೆ

First Published | Jan 10, 2022, 7:45 PM IST

ವಿವಾದಿತ ಕ್ವಿನ್ ಪೂನಂ ಪಾಂಡೆ (Poonam Pandey) ಪತಿ ಸ್ಯಾಮ್ ಬಾಂಬೆ (Sam Bombay) ಜೊತೆಗಿನ ಸಂಬಂಧ ಮುರಿದುಬಿದ್ದಿದೆ. ಮದುವೆ ಕಾನೂನುಬಾಹಿರ ಹಾಗೂ ಮದುವೆಯನ್ನು ಮುರಿದು ಕೊಂಡಿದ್ದೇವೆ, ಎನ್ನುವ ಮೂಲಕ ಪಡ್ಡೆ ಹುಡುಗರ ಹೃದಯ ಕದ್ದ ಮಾಡೆಲ್ ಪೂನಂ ಎಲ್ಲರಿಗೂ ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಪೂರ್ತಿ ವಿವರಕ್ಕಾಗಿ ಮುಂದೆ ಓದಿ.

ಪೂನಂ ಪಾಂಡೆ ಅವರು ಯಾವಾಗಲೂ ಗಮನ ಸೆಳೆಯುವಂತೆ ಏನಾದಲೂ ಕೆಲಸ ಮಾಡುತ್ತಲೇ ಇರುತ್ತಾರೆ. ಪೂನಂ ಸ್ಯಾಮ್ ಬಾಂಬೆಯನ್ನು ಮದುವೆಯಾದಾಗಿನಿಂದ, ಅವರು ಆಗಾಗ ಸುದ್ದಿಯಾಗುತ್ತಲೇ ಇದ್ದರು. ಮದುವೆಯಾಗುತ್ತಿದ್ದಂತೆ ಪತಿ ವಿರುದ್ಧವೇ ದೌರ್ಜನ್ಯ ದೂರು ದಾಖಲಿಸಿದ್ದರು.

ಪೂನಂ ಪತಿ ಸ್ಯಾಮ್ ಬಾಂಬೆ ಜೊತೆಗಿನ ದಾಂಪತ್ಯವನ್ನು ಪೂನಂ ಮುರಿದುಕೊಂಡಿದ್ದಾರೆ ಎಂಬ ವರದಿಗಳಿವೆ. ಅಷ್ಟೇ ಅಲ್ಲ, ಈ ಮದುವೆಯನ್ನು ಕಾನೂನು ಬಾಹಿರ ಎಂದೂ ಹೇಳಿದ್ದಾರೆ. ಒಟ್ಟಿನಲ್ಲಿ ಗೊಂದಲದ ಗೂಡಾಗಿದ್ದ ಮದುವೆಗೆ ಡಿವೋರ್ಸ್ ಎಂಬ ಮುದ್ರಯೊತ್ತಿ ನಿರಾಳವಾಗಿದ್ದಾರೆ ಎನಿಸುತ್ತೆ.

Tap to resize

ಪೂನಂ ತನ್ನ ಪತಿಯೊಂದಿಗೆ ಮದುವೆ ಮುರಿದುಕೊಂಡಿದ್ದಾರೆ ಎಂಬ ವರದಿಗಳಿವೆ. ಅಷ್ಟೇ ಅಲ್ಲ ಮದುವೆಯನ್ನು ಅಕ್ರಮ ಎಂದೂ ಹೇಳಿದ್ದಾರೆ. ಮದುವೆಯಾದ ಕೇವಲ ಎರಡು ವಾರಗಳ ನಂತರ, ಹನಿಮೂನ್‌ನಲ್ಲಿ ಪತಿ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೂನಂ ಆರೋಪಿಸಿದ್ದರು ಮತ್ತು  ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು. 
 

ಕಳೆದ ವರ್ಷ ಸೆಪ್ಟೆಂಬರ್ 10 ರಂದು ಪೂನಂ ಪಾಂಡೆ ಗೆಳೆಯ ಸ್ಯಾಮ್ ಬಾಂಬೆಯನ್ನು ವಿವಾಹವಾಗಿದ್ದರು. ಆದರೆ ಮದುವೆಯಾದ ಒಂದು ವಾರದೊಳಗೆ ಪತಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾಗಿ ಆರೋಪಿಸಿ ದೂರು ಸಲ್ಲಿಸಿದ್ದರು. ಈ ಜೋಡಿ ನಡುವೆ ಮತ್ತೇನು ಆಯಿತೋ ಗೊತ್ತಿಲ್ಲ. ಎಲ್ಲವೂ ಸರಿ ಹೋಯಿತೆಂದು ಮತ್ತೆ ಒಂದಾಗಿದ್ದರು.

ಪೂನಂ ಸ್ಯಾಮ್ ವಿರುದ್ಧ ದೈಹಿಕ ಕಿರುಕುಳ, ಬೆದರಿಕೆ ಮತ್ತು ಹಲ್ಲೆ ಆರೋಪಗಳನ್ನು ಹೊರಿಸಿದ್ದರು. ಇಷ್ಟೇ ಅಲ್ಲ ಪೂನಂ ಮದುವೆಯನ್ನು ಮುರಿಯುವ ಬಗ್ಗೆ ಸಹ ಮಾತನಾಡಿದ್ದರು. ಈ ಬಾರಿ ಮತ್ತೆ ಅವರ ಬಳಿ ಹೋಗಲು ಮನಸ್ಸಿಲ್ಲ. ಯೋಚಿಸದೆ ಮೃಗದಂತೆ ಹೊಡೆದವರ ಬಳಿಗೆ ಹಿಂದಿರುಗುವುದು ಬುದ್ಧಿವಂತ ನಿರ್ಧಾರವಲ್ಲವೆಂದು ಪೂನಂ ಹೇಳಿ ಕೊಂಡಿದ್ದರು. ಇಷ್ಟೆಲ್ಲಾ ಆದರೂ ಮತ್ತೆ ಅದು ಹೇಗೆ ಒಂದಾದರೋ ಗೊತ್ತಿಲ್ಲ.

ವಾಸ್ತವವಾಗಿ, ಪೂನಂ ಅವರು ತಮ್ಮ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ  ವಿಚ್ಛೇದನದ (Divorce) ಪ್ರಶ್ನೆ ಉದ್ಭವಿಸುವುದಿಲ್ಲ. ಏಕೆಂದರೆ ಅವರ ಮದುವೆ ಎಂದಿಗೂ ಕಾನೂನುಬದ್ಧವಾಗಿಲ್ಲ, ಎಂದು ಪ್ರಸಿದ್ಧ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಪೂನಂ ಹೇಳಿದ್ದಾರೆ. ಅಲ್ಲದೆ, ಪೂನಂ ತಮ್ಮ ಮಕ್ಕಳೊಂದಿಗೆ (ಎರಡು ನಾಯಿಗಳು) ತುಂಬಾ ಸಂತೋಷದ ಜೀವನವನ್ನು ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಅಂದ ಹಾಗೆ, ಪೂನಂ ಜೀವನದಲ್ಲಿ ಇದು ಮೊದಲ ವಿವಾದವಲ್ಲ. ಅವರ ಜೀವನವು ವಿವಾದಗಳಿಂದಲೇ ತುಂಬಿದೆ. ಕರೋನಾ ಲಾಕ್‌ಡೌನ್ ಸಮಯದಲ್ಲಿ ಮನೆ ಹೊರಗೆ ತಿರುಗಾಡುವಾಗ ಪೂನಂ ಅವರನ್ನು ಪೊಲೀಸರು ಲಾಕ್‌ಡೌನ್ ನಿಮಯ ಉಲ್ಲಂಘನೆ ಆರೋಪದ ಮೇಲೆ ಬಂಧಿಸಿದ್ದರು.

2011ರ ವಿಶ್ವಕಪ್‌ನಲ್ಲಿ ಭಾರತ ಗೆದ್ದರೆ ವಿವಸ್ತ್ರಳಾಗುತ್ತೇನೆ ಎಂದು ಹೇಳುವ ಮೂಲಕ ಪೂನಂ ಸಂಚಲನ ಮೂಡಿಸಿದ್ದರು. ಇದಾದ ಬಳಿಕ ಅವರು ಸಾಕಷ್ಟು ಟೀಕೆಗಳಿಗೂ ಗುರಿಯಾಗಿದ್ದರು. ಅಷ್ಟೇ ಅಲ್ಲ ಪೂನಂ ತಮ್ಮ ಬಾತ್ ರೂಂ ಸೀಕ್ರೆಟ್ ಡ್ಯಾನ್ಸ್ ಅನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದರು. ಇಂಥ ಅಶ್ಲೀಲ ವೀಡಿಯೋಸ್ ಪೋಸ್ಟ್ ಮಾಡೋ ಕಾರಣ YouTube ಅವರನ್ನು ಬ್ಲಾಕ್‌ ಮಾಡಿದೆ.

Latest Videos

click me!