Malaika Arora: ಬ್ಯಾಕ್ ಲೆಸ್ ಗೌನ್, ಬೋಲ್ಡ್ ಮಿರರ್ ಸೆಲ್ಫಿ ಮೂಲಕ ಕಿಚ್ಚು ಹಚ್ಚಿದ ಮಲೈಕಾಗೆ ಛೀಮಾರಿ ಹಾಕಿದ ಜನ!

Published : Jun 03, 2025, 03:12 PM ISTUpdated : Jun 03, 2025, 03:42 PM IST

ಬಾಲಿವುಡ್ ನಟಿ ಮತ್ತು ಡ್ಯಾನ್ಸರ್ ಮಲೈಕಾ ಅರೊರಾ ಸಖತ್ ಬೋಲ್ಡ್ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಅಭಿಮಾನಿಗಳು ಈ ಕುರಿತು ಕುಡಿ ಕಾರಿದ್ದಾರೆ.

PREV
17

ಸ್ಟೈಲ್ ವಿಷಯದಲ್ಲಿ ಮಲೈಕಾ ಅರೋರಾ (Malaika Arora) ಅವರನ್ನು ಬೀಟ್ ಮಾಡಲು ಯಾರಿಂದಲೂ ಸಾಧ್ಯ ಇಲ್ಲ ಅನಿಸುತ್ತೆ. ಮಲೈಕಾ ಇತ್ತೀಚೆಗೆ ಪೋಸ್ಟ್ ಮಾಡಿದ ಫೋಟೊಗಳಲ್ಲಿ, ಅವರ ಬೋಲ್ಡ್ ನೆಸ್, ಹಾಟ್ನೆಸ್ ಜೊತೆಗೆ ಸ್ಟೈಲಿಶ್ ಲುಕ್ ನೋಡಿ ಅಭಿಮಾನಿಗಳು ಶಾಕ್ ಜೊತೆಗೆ ಛೀಮಾರಿ ಕೂಡ ಹಾಕಿದ್ದಾರೆ.

27

ಮಲೈಕಾ ಅರೋರಾ ಹೆಸರು ಬಂದ ತಕ್ಷಣ ಜನರು ಅವರ ಫಿಟ್ನೆಸ್ ಮತ್ತು ಫ್ಯಾಶನ್ (fitness and fashion) ಸ್ಟೈಲ್ ಬಗ್ಗೆ ಚರ್ಚಿಸಲು ಪ್ರಾರಂಭಿಸುತ್ತಾರೆ. 51 ವರ್ಷದಲ್ಲೂ ಅವರ ಸೌಂದರ್ಯ ನೋಡಿದ್ರೆ, ಇವರಿಗೆ ವಯಸ್ಸೇ ಆಗುತ್ತಿಲ್ಲವೆನೋ ಅನಿಸುತ್ತೆ. ಅಷ್ಟೊಂದು ಫಿಟ್ ಹಾಗೂ ಸುಂದರವಾಗಿದ್ದಾರೆ ಬಾಲಿವುಡ್ ಬೆಡಗಿ. ಫಿಟ್ನೆಸ್ ವಿಷಯಕ್ಕೆ ಬಂದರೆ, ಮಲೈಕಾ ಫಿಟ್ನೆಸ್ ಜೊತೆ ರಾಜಿ ಮಾಡೋ ಮಾತೇ ಇಲ್ಲ. ಹರೆಯದ ಹುಡುಗಿಯರು ಕೂಡ ಇವರ ಮುಂದೆ ಏನೂ ಇಲ್ಲ ಅಂತಾನೆ ಹೇಳಬಹುದು.

37

ಇತ್ತೀಚಿನ ಮಲೈಕಾ ಅರೋರ ಸೋಶಿಯಲ್ ಮೀಡಿಯಾದಲ್ಲಿ ಒಂದಿಷ್ಟು ಫೋಟೊಗಳನ್ನು ಶೇರ್ ಮಾಡಿದ್ದಾರು, ಅದರಲ್ಲಿ ಅವರು ಒಂದು ಅಥವಾ ಎರಡಲ್ಲ, ನಾಲ್ಕು ವಿಭಿನ್ನ ಗ್ಲಾಮರಸ್ ಲುಕ್ (glamorous look) ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರನ್ನು ನೋಡಿದರೆ, ಅವರು 50 ವರ್ಷ ದಾಟಿದ್ದಾರೆಂದು ತೋರುತ್ತಿಲ್ಲ ಮತ್ತು ಅವರಿಗೆ 22 ವರ್ಷದ ಮಗ ಕೂಡ ಇದ್ದಾನೆ ಅಂದ್ರೆ ನಂಬೋದಕ್ಕೆ ಸಾಧ್ಯ ಆಗಲ್ಲ. ಮಲೈಕಾ ಬೋಲ್ಡ್ ಲುಕ್ ನೋಡಿ ಕೆಲವು ಅಭಿಮಾನಿಗಳು ಫಿದಾ ಆಗಿದ್ರೆ, ಇನ್ನೂ ಕೆಲವರು ಕಿಡಿ ಕಾರಿದ್ದಾರೆ.

47

ಮಲೈಕಾಳ ಆಕರ್ಷಕ ನೋಟ ಯಾವಾಗಲೂ ಸುದ್ದಿಯಲ್ಲಿರುತ್ತೆ. ಆದರೆ ಈ ಬಾರಿ ಆಕೆ ಸೋಶಿಯಲ್ ಮೀಡಿಯಾದಲ್ಲಿ ಒಂದಾದ ನಂತ್ರ ಒಂದು ಬೋಲ್ಡ್ ಫೋಟೊ ಶೇರ್ ಮಾಡುವ ಮೂಲಕ, ಇಂಟರ್ನೆಟ್ಟಲ್ಲಿ ಕಿಚ್ಚು ಹಚ್ಚಿದ್ದಾರೆ. ಒಂದು ಫೋಟೊದಲ್ಲಿ ಮಲೈಕಾ ಮಿರರ್ ಸೆಲ್ಫಿ (mirror selfie) ಶೇರ್ ಮಾಡಿದ್ದಾರೆ, ಅದರಲ್ಲಿ ಆಕೆ ವೈಟ್ ಆಂಡ್ ವೈಟ್ ಶರ್ಟ್ ಪ್ಯಾಂಟ್ ಧರಿಸಿದ್ದಾರೆ. ಅಲ್ಲದೇ ತನ್ನ ಶರ್ಟ್‌ನ ಬಟನ್ ಓಪನ್ ಆಗಿ ಬಿಡುವ ಮೂಲಕ ತನ್ನ ಗುಲಾಬಿ ಮತ್ತು ನೀಲಿ ಬಣ್ಣದ ಬಿಕಿನಿಯನ್ನು ಪ್ರದರ್ಶಿಸಿದ್ದಾರೆ.

57

ಇನ್ನೊಂದರಲ್ಲಿ ಮಲೈಕಾ ಕೆಂಪು ಬಣ್ಣದ ಬ್ಯಾಕ್‌ಲೆಸ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಮುಂಭಾಗದಲ್ಲಿ ಸ್ಟ್ರಾಪಿ ಟಚ್‌ನೊಂದಿಗೆ ಹಾಲ್ಟರ್ ನೆಕ್ ಅನ್ನು ಹೊಂದಿದ್ದು, ಹಿಂಭಾಗದಲ್ಲಿ ದಾರಗಳನ್ನು ಕ್ರಿಸ್-ಕ್ರಾಸ್ ಆಗಿ ಕಟ್ಟಲಾಗಿದೆ. ಸ್ಲಿಟ್ ಕಟ್ ಗೌನ್‌ನಲ್ಲಿ ಮಲೈಕಾ ಸೌಂದರ್ಯ ಎದ್ದು ಕಾಣುತ್ತಿದೆ. ಮಲೈಕಾ ಅವರ ಗ್ಲಾಮರಸ್ ಲುಕ್ ಸಖತ್ ಆಗಿದೆ.

67

ತನ್ನ ಅದ್ಭುತ ಚಿತ್ರಗಳ ಜೊತೆಗೆ, ಮಲೈಕಾ ಯೋಗದ ಮೂಲಕ ತನ್ನ ಪರಿಪೂರ್ಣ ದೇಹದ ಆಕಾರವನ್ನು ಹೇಗೆ ಕಾಪಾಡಿಕೊಳ್ಳುತ್ತಾಳೆ ಎಂಬುದನ್ನು ಸಹ ತೋರಿಸಿದರು. ಇಲ್ಲಿ, ಹೊಳೆಯುವ ಮೆರೂನ್ ಬ್ರಾಲೆಟ್ ಮತ್ತು ಅದಕ್ಕೆ ಹೊಂದಿಕೆಯಾಗುವ ಬಿಗಿಯುಡುಪುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ಕೂದಲನ್ನು ಬನ್‌ನಲ್ಲಿ ಕಟ್ಟಿಕೊಂಡು ಕಪ್ಪು ಕನ್ನಡಕ ಧರಿಸಿದ್ದರು.

77

ಮಲೈಕಾ ಅರೋರ ಈ ಲುಕ್ ಬಗ್ಗೆ ಜನರಿಂದ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿದೆ. ಈ ವಯಸ್ಸಿನಲ್ಲಿ ಅವರ ಹಾಟ್‌ನೆಸ್ ಅನ್ನು ಕೆಲವರು ಹೊಗಳುತ್ತಿದ್ದರೆ, ಇನ್ನೂ ಕೆಲವರು ಗಮನ ಸೆಳೆಯಲು ಸಣ್ಣ ಬಟ್ಟೆಗಳನ್ನು ಧರಿಸಿದ್ದಾರೆ ಎಂದು ಟೀಕಿಸಿದ್ದಾರೆ. ಇನ್ನೂ ಕೆಲವರು ಹರೆಯದ ಮಗ ಇರೋವಾಗ ಈ ರೀತಿಯಾಗಿ ಬೋಲ್ಡ್ ಡ್ರೆಸ್ ಧರಿಸೋದು ತಪ್ಪು ಎಂದು ಛೀಮಾರಿ ಹಾಕಿದ್ದಾರೆ.

Read more Photos on
click me!

Recommended Stories