Sara Ali Khan: ಸಾರಾ ಆಲಿ ಖಾನ್ ಜೊತೆ ನಟಿಸೋ ನಟರಿಗೆ ಶಾದಿ ಭಾಗ್ಯ ಗ್ಯಾರಂಟಿ

Published : Jun 02, 2025, 08:46 PM IST

ನಿಮಗೆ ಗೊತ್ತಾ ನಟಿ ಸಾರಾ ಆಲಿ ಖಾನ್ ಯಾವ ನಟರ ಜೊತೆಗೆ ನಟಿಸಿದ್ದಾರೋ ಅ ನಟರಿಗೆ ಶೀಘ್ರದಲ್ಲೇ ಮದ್ವೇ ಆಗುತ್ತೆ ಅಂತೆ, ಹಾಗಂತ ಸ್ವತಃ ಸಾರಾ ಆಲಿ ಖಾನ್ ಹೇಳಿದ್ದಾರೆ.

PREV
16

ಬಾಲಿವುಡ್ ನ ಖ್ಯಾತ ನಟಿ ಸಾರಾ ಆಲಿ ಖಾನ್ (Sara Ali Khan). ಆಕೆ ಇಲ್ಲಿವರೆಗೆ ಹಲವು ಸ್ಟಾರ್ ನಟರ ಜೊತೆ ನಟಿಸಿದ್ದಾರೆ. ಇದರಲ್ಲಿ ಹಲವು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಆದರೆ ನಿಮಗೆ ಗೊತ್ತೆ? ನಟಿ ಯಾವ ನಟರ ಜೊತೆಗೆ ನಟಿಸಿದ್ದಾರೋ? ಅವರಿಗೆ ಶೀಘ್ರದಲ್ಲೆ ಮದುವೆಯಾಗುತ್ತಂತೆ. ಹಾಗಂತ ನಟಿಯೇ ಸ್ವತಃ ತಿಳಿಸಿದ್ದಾರೆ.

26

ಕಾರ್ಯಕ್ರಮವೊಂದರಲ್ಲಿ ಸಾರಾ ಆಲಿ ಖಾನ್ ಮಾತನಾಡುತ್ತಾ, ನಾನು ಯಾರ ಜೊತೆಗೆಲ್ಲಾ ನಟಿಸಿದ್ದೇನೋ? ಆ ನಟರಿಗೆ ನಮ್ಮ ಸಿನಿಮಾ ಮುಗಿದ ತಕ್ಷಣ ಮದುವೆಯಾಗಿದೆ. ನಿಮಗೂ ಬೇಗನೆ ಮದುವೆಯಾಗಬೇಕು ಎಂದು ಅಂದುಕೊಂಡರೆ, ನನ್ನ ಜೊತೆ ನಟನೆ ಮಾಡಿ ಸಾಕು ಎಂದಿದ್ದಾರೆ.

36

ರಣವೀರ್ ಸಿಂಗ್

ಸಾರಾ ಆಲಿ ಖಾನ್ 2018ರಲ್ಲಿ ರಣವೀರ್ ಸಿಂಗ್ (Ranveer Singh) ಜೊತೆ ಸಿಂಬಾ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಬಿಡುಗಡೆಯಾದ ವರ್ಷವೇ ದೀಪಿಕಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

46

ವರುಣ್ ಧವನ್

ವರುಣ್ ಧವನ್ (Varun Dhawan) ಜೊತೆ ಸಾರಾ ಕೂಲಿ ನಂ 1 ಸಿನಿಮಾದಲ್ಲಿ ನಟಿಸಿದ್ದರು, ಈ ಸಿನಿಮಾ 2020ರಲ್ಲಿ ಬಿಡುಗಡೆಯಾಗಿತ್ತು, ಈ ಸಿನಿಮಾ ಬಿಡುಗಡೆಯಾದ ಸ್ವಲ್ಪ ಸಮಯದಲ್ಲೇ ವರುಣ್ ಧವನ್ ಮದುವೆ ನತಾಶ ಜೊತೆ ನಡೆದಿತ್ತು.

56

ವಿಕ್ರಾಂತ್ ಮೆಸ್ಸಿ

ವಿಕ್ರಾಂತ್ ಮೆಸ್ಸಿ (Vikrant Massey) ಮತ್ತು ಸಾರಾ ಆಲಿ ಖಾನ್ ಗ್ಯಾಸ್ ಲೈಟ್ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಈ ಸಿನಿಮಾ ಶೂಟಿಂಗ್ ವೇಳೆ ವಿಕ್ರಾಂತ್ ಮೆಸ್ಸಿ ಶೀತಲ್ ಠಾಕೂರ್ ಜೊತೆ ಸಪ್ತಪದಿ ತುಳಿದಿದ್ದರು.

66

ವಿಕ್ಕಿ ಕೌಶಲ್

ವಿಕ್ಕಿ ಕೌಶಲ್ (Vicky Kaushal) ಮತ್ತು ಸಾರಾ ಆಲಿ ಖಾನ್ ಜೊತೆಯಾಗಿ ಝರ ಅಟ್ಕೆ, ಝರ ಬಚ್ಕೆ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಸೆಟ್ ಏರಿದ ಕೆಲವೇ ಸಮಯದಲ್ಲಿ ವಿಕ್ಕಿ ಕೌಶಲ್ ಮತ್ತು ಕೈತ್ರೀನಾ ಕೈಫ್ ಮದುವೆಯಾಗಿದ್ದರು.

Read more Photos on
click me!

Recommended Stories