ಮಗಳು ಆಲಿಯಾ ಭಟ್ ಸ್ಮಿತಾ ಪಾಟೀಲ್‌ಗೆ ಹೋಲುತ್ತಾಳೆಂದ ತಂದೆ ಮಹೇಶ್‌ ಭಟ್‌

First Published Sep 21, 2022, 2:24 PM IST

ಈ ದಿನಗಳಲ್ಲಿ ಬಾಲಿವುಡ್‌ ನಟಿ ಆಲಿಯಾ ಭಟ್‌ (Alia Bhatt) ಸಖತ್‌ ನ್ಯೂಸ್‌ನಲ್ಲಿದ್ದಾರೆ. ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಸಿನಿಮಾಗಳ ಜೊತೆ ಆಲಿಯಾರ ಪರ್ಸನಲ್‌ ಲೈಫ್‌ ಸಹ ಟ್ರೆಂಡ್‌ನಲ್ಲಿದೆ. ರಣಬೀರ್‌ ಕಪೂರ್‌ ಜೊತೆ ಮದುವೆ ನಂತರ ಪ್ರೆಗ್ನೆಂಸಿ ಹೀಗೆ ಒಂದರ ಹಿಂದೆ ಗುಡ್‌ ನ್ಯೂಸ್‌ ನೀಡುತ್ತಿರುವ ಆಲಿಯಾರ ನಟನೆಯ ವಿಷಯಕ್ಕೆ ಬಂದರೆ ಅವರು ಬಾಲಿವುಡ್‌ನ ಮೊಸ್ಟ್‌ ಟ್ಯಾಲೆಂಟೆಡ್‌ ನಟಿ ಎಂಬುದರಲ್ಲಿ ಎರಡು ಮಾತಿಲ್ಲ. ಕೆಲವು ವರ್ಷಗಳ ಹಿಂದೆ ಆಲಿಯಾರ ತಂದೆ ತಮ್ಮ ಮಗಳನ್ನು ದಿವಗಂತ ನಟಿ ಸ್ಮಿತಾ ಪಾಟೀಲ್‌ ಅವರಿಗೆ ಹೋಲಿಸಿದ್ದರು.

ತಮ್ಮ ಕೆರಿಯರ್‌ನ ಟಾಪ್‌ನಲ್ಲಿರುವ ಆಲಿಯಾ ಭಟ್ ಇತ್ತೀಚೆಗೆ ಅತ್ಯುತ್ತಮ ನಟರಿಗಾಗಿ ಸ್ಮಿತಾ ಪಾಟೀಲ್ ಸ್ಮಾರಕ ಪ್ರಶಸ್ತಿಯನ್ನು ಪಡೆದರು. ಕಾಕತಾಳಿಯವೆಂದರೆ ಈ ಹಿಂದೆ  ಮಹೇಶ್ ಭಟ್ ತಮ್ಮ ಮಗಳು ಅಲಿಯಾ ಅವರನ್ನು ದಿವಂಗತ ನಟಿ ಸ್ಮಿತಾ ಪಾಟೀಲ್‌ ಅವರಿಗೆ ಹೋಲಿಸಿದ್ದರು.

2016 ರಲ್ಲಿ ನಿರ್ದೇಶಕರು ಭಾಗವಹಿಸಿದ ಕಾರ್ಯಕ್ರಮವೊಂದರಲ್ಲಿ,ತಮ್ಮ ಮಗಳು ಆಲಿಯಾ ಭಟ್‌ ಅವರನ್ನು ಮೋಸ್ಟ್‌ ಟ್ಯಾಲೆಂಟೆಡ್‌ ನಟಿ ದಿವಗಂತ ಸ್ಮಿತಾ ಪಾಟೀಲ್‌ ಅವರಿಗೆ ಹೋಲಿಸಿ ಹೀಗೆ ಹೇಳಿದ್ದರು.

 'ಹೊಸ ಹುಟ್ಟು ಮತ್ತು ಹೊಸ ಶಕ್ತಿ ಇದೆ. ಹೊಸ ಆರಂಭವಿದೆ ಎಂದು ನಾನು ಹೇಳಲೇಬೇಕು. ಕೆಲವು ಪ್ರಾದೇಶಿಕ ಮತ್ತು ಸಮಾನಾಂತರ ಸಿನೆಮಾ ನಟಿಯರು ಮತ್ತು ನನ್ನ ಮಗಳು ಆಲಿಯಾ ಭಟ್ ಸೇರಿ ಹೆಚ್ಚಿನ ನಟಿಯರು ಅದ್ಭುತ ನಟಿ ಸ್ಮಿತಾ ಪಾಟೀಲ್‌ ನಡೆದ ದಾರಿಯಲ್ಲಿ ನಡೆಯುತ್ತಿದ್ದಾರೆ. ಅವಳು commercial and Artistic moviesನಲ್ಲಿ ನಟಿಸಬಲ್ಲಳು. ಅಂಥ ಚಿತ್ರಗಳು ಯಾವತ್ತೂ ತಮ್ಮ ಛಾಪು ಮಾಸಲು ಬಿಡುವುದಿಲ್ಲ, ಮಹೇಶ್‌ ಭಟ್‌ ಹೇಳಿದ್ದಾರೆ.

ಚಲನಚಿತ್ರ ನಿರ್ಮಾಪಕ ಮಹೇಶ್‌ ಭಟ್‌ ತಮ್ಮ ಈ ಅಭಿಫ್ರಾಯ ಕೇವಲ ಆಲಿಯಾ ಅವರಿಗೆ  ಮಾತ್ರ ಸೀಮಿತವಾಗಿರುವುದನ್ನು ಅವರು ಬಯಸಲಿಲ್ಲ, ಪ್ರಾದೇಶಿಕ ಸಿನೆಮಾದಲ್ಲೂ ಉತ್ತಮ ಸಾಧನೆ ನೀಡುವ ಇತರ ನಟಿಯರ ಇದೇ ರೀತಿ  ಇದ್ದಾರೆ ಎಂದು ಒಪ್ಪಿಕೊಂಡರು. 
 

ಭಟ್ ಅವರ ಪ್ರಕಾರ, ಸ್ಮಿತಾ ಪಾಟೀಲ್ ಅವರು contemporary ಚಲನಚಿತ್ರ ನಿರ್ಮಾಪಕರಿಗೆ ಚಲನಚಿತ್ರಗಳಿಗೆ ತಮ್ಮ ಮೌಲ್ಯವನ್ನು ತರುವ ಮೂಲಕ ಪ್ರಯೋಜನವನ್ನು ನೀಡಿದರು ಮತ್ತು ‘ನಮಕ್ ಹಲಾಲ್’ ಮತ್ತು ‘ಶಕ್ತಿ’ ನಂತಹ ವಾಣಿಜ್ಯ ಹಿಟ್‌ಗಳಿಗೆ ಸಹ ಒಪ್ಪಿದ್ದರು  ಎಂದು ಹೇಳುತ್ತಾರೆ. 

ಈ ದಿನಗಳಲ್ಲಿ ತಮ್ಮ ಪ್ರೆಗ್ನಂಸಿಯನ್ನು ಎಂಜಾಯ್‌ ಮಾಡುತ್ತಿರವುದರ ಜೊತೆಗೆ ತಮ್ಮ ಇತ್ತೀಚಿನ ಸಿನಿಮಾ ಬ್ರಹ್ಮಾಸ್ತ್ರದ ಯಶಸ್ಸನ್ನು ಪೂರ್ತಿಯಾಗಿ ಪತಿ ರಣಬೀರ್‌ ಜೊತೆ ನಟಿ ಆಲಿಯಾ ಭಟ್‌  ಆನಂದಿಸುತ್ತಿದ್ದಾರೆ. 

ಮೂಲಗಳ ಪ್ರಕಾರ ಆಲಿಯಾ ಭಟ್‌ ಮತ್ತು ರಣಬೀರ್‌ ಕಪೂರ್‌ ಜೊತೆಯಾಗಿ ಮೊದಲ ಬಾರಿಗೆ ತೆರೆ ಹಂಚಿಕೊಂಡ  ಬ್ರಹ್ಮಾಸ್ತ್ರ ಚಿತ್ರ ಇದು ವರೆಗೆ  410 ಕೋಟಿ ರೂ ಗಳಿಸಿದೆ. ಈ ಚಿತ್ರ ಇದುವರೆಗೆ ವಿಶ್ವದಾದ್ಯಂತ ಸುಮಾರು 300 ಕೋಟಿ ಗಳಿಸಿದೆ. ಭಾರತದಲ್ಲಿ ಚಿತ್ರವು ಸುಮಾರು 200 ಕೋಟಿ ಗಳಿಸಿದೆ. 

click me!