Bollywood News: ತಾನು ಮುಸ್ಲಿಂ ತಾಯಿಯ ಅಕ್ರಮ ಸಂತಾನ - ಮಹೇಶ್‌ ಭಟ್‌

Published : Sep 20, 2022, 05:05 PM IST

ಹಿರಿಯ ಚಲನಚಿತ್ರ ನಿರ್ಮಾಪಕ ಮಹೇಶ್ ಭಟ್ (Mahesh Bhatt) ಅವರಿಗೆ 74 ವರ್ಷ ತುಂಬಿದೆ. 20 ಸೆಪ್ಟೆಂಬರ್ 1948 ರಂದು ಜನಿಸಿದ ಮಹೇಶ್ ಭಟ್ ಅವರ ಜೀವನವು ಯಾವಾಗಲೂ ವಿವಾದಗಳಿಂದ ಸುತ್ತುವರೆದಿದೆ. ಅವರ ಜನ್ಮದ ಕಥೆಯೂ ವಿವಾದಕ್ಕಿಂತ ಕಡಿಮೆಯಿಲ್ಲ. ತಾನು ಮುಸ್ಲಿಂ ತಾಯಿಯ ಅಕ್ರಮ ಸಂತಾನ ಎಂಬುದನ್ನು ಸ್ವತಃ ಮಹೇಶ್ ಭಟ್ ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲ, ತನಗೆ ನೆನಪಿಲ್ಲದ ತಂದೆಯ ಹೆಸರು ತನಗೆ ಇಷ್ಟವಿಲ್ಲ ಎಂದು ಭಟ್ ಹೇಳಿದ್ದಾರೆ. ಮಹೇಶ್ ಭಟ್ ತನ್ನ ಬಗ್ಗೆ  ಮತ್ತು ತನ್ನ ತಾಯಿ ಏನು ಹೇಳಿದ್ದಾರೆ ನೋಡಿ.

PREV
16
Bollywood News: ತಾನು ಮುಸ್ಲಿಂ ತಾಯಿಯ ಅಕ್ರಮ ಸಂತಾನ - ಮಹೇಶ್‌ ಭಟ್‌

 ನನಗೆ ತಂದೆ ಇರಲಿಲ್ಲ. ನನಗೆ ತಂದೆಯ ಅರ್ಥಪೂರ್ಣ ಸ್ಮರಣೆ ಇಲ್ಲ. ಹಾಗಾಗಿ ತಂದೆಯ ಪಾತ್ರ ಏನು ಎಂದು ನನಗೆ ತಿಳಿದಿಲ್ಲ.  ವಾಸ್ತವದಲ್ಲಿ ತಂದೆ ಏನು ಎಂದು ನನಗೆ ತಿಳಿದಿಲ್ಲ' ಎಂದು  2018 ರಲ್ಲಿ ಹಿಂದೂಸ್ತಾನ್ ಟೈಮ್ಸ್ ಜೊತೆಗಿನ ಸಂವಾದದಲ್ಲಿ ಮಹೇಶ್ ಭಟ್ ಹೇಳಿದರು.

26

ನಾನು ಶಿರೀನ್ ಮೊಹಮ್ಮದ್ ಅಲಿ, ಒಂಟಿ ಮುಸ್ಲಿಂ ತಾಯಿಯ ಅಕ್ರಮ ಸಂತಾನ ಎಂದು ಮಹೇಶ್ ಭಟ್‌ ಹೇಳಿಕೊಂಡಿದ್ದಾರೆ. ಮತ್ತು ಈ ಸಂಭಾಷಣೆಯಲ್ಲಿ ಭಟ್ಟರಿಗೆ ಮಹೇಶ್ ಎಂಬ ಹೆಸರನ್ನು ಇಟ್ಟವರು ಯಾರು ಎಂದು ಕೇಳಲಾಯಿತು. ಏಕೆಂದರೆ ಅವರ ತಾಯಿ ಈ ಹೆಸರನ್ನು ಇಡಲು ಸಾಧ್ಯವಿಲ್ಲ.


 

36

ಅದಕ್ಕೆ ಉತ್ತರವಾಗಿ,  'ಅಮ್ಮನಿಗೆ ನನ್ನ ಹೆಸರಿನ ಅರ್ಥ ಕೇಳಿದ್ದು ನೆನಪಿದೆ. ಅಪ್ಪನ ಬಳಿ ಕೇಳಿ ಹೇಳುತ್ತೇನೆ ಎಂದಳು. ಏಕೆಂದರೆ ಹೆಸರಿಟ್ಟಿದ್ದು ಅವರೇ. ಹಾಗಾಗಿ ಕಾಯುತ್ತಿದ್ದೆ ಎಂದು ಮಹೇಶ್‌ ಭಟ್‌ ಉತ್ತರಿಸಿದ್ದರು. ಮಹೇಶ ಎಂದರೆ ಮಹಾ-ಈಶ್. ದೇವತೆಗಳ ದೇವರು ಎಂದು ಮುಂದಿನ ಬಾರಿ ತಂದೆಯಿಂದ ಕೇಳಿ ಹೇಳಿದ್ದರು. ಆದರೆ ಬಾಲ್ಯದಲ್ಲಿ, ತನ್ನ ಸ್ವಂತ ಮಗನ ಕತ್ತು ಸೀಳಿದ ಈ ಕೋಪಗೊಂಡ ದೇವರನ್ನು ನಾನು ಇಷ್ಟಪಡಲಿಲ್ಲ ಎಂದು ಮಹೇಶ್ ಭಟ್ ಹೇಳಿದ್ದಾರೆ 

46

ನನಗೆ ಗಣೇಶ ಎಂಬ ಹೆಸರು ಬಹಳ ಇಷ್ಟವಾಯಿತು. ಬಾಲ್ಯದಲ್ಲಿ ನಾನು ಪುಟ್ಟ ಗಣೇಶನಂತೆ ತಲೆದಿಂಬಿನಲ್ಲಿ ಮಲಗಿದ್ದೆ. ಅವನು ನನ್ನ ನೆಚ್ಚಿನವನು. ಗಣೇಶನ ತಂದೆಯಂತೆ ನನ್ನ ತಂದೆ ನನಗೆ ಅಪರಿಚಿತರು. ಅವರು ಗೈರುಹಾಜರಾಗಿದ್ದರು ಎಂದು ಹೇಳಿದ್ದರು.

56

ಚಲನಚಿತ್ರ ನಿರ್ಮಾಪಕರಾದ ನಂತರ, ಮಹೇಶ್ ಭಟ್ ಅವರು ತಮ್ಮ ಮತ್ತು ತಮ್ಮ ತಾಯಿಯ ಕಥೆಯನ್ನು ಚಲನಚಿತ್ರಗಳಲ್ಲಿ ತೋರಿಸಲು ಪ್ರಯತ್ನಿಸಿದ್ದಾರೆ. ಇವುಗಳಲ್ಲಿ ಅಜಯ್ ದೇವಗನ್, ಪೂಜಾ ಭಟ್ ಮತ್ತು ನಾಗಾರ್ಜುನ ಅಕ್ಕಿನೇನಿ ಅಭಿನಯದ 'ಝಕ್ಮ್' ಮತ್ತು ಇಮ್ರಾನ್ ಹಶ್ಮಿ, ವಿದ್ಯಾ ಬಾಲನ್ ಮತ್ತು ರಾಜ್‌ಕುಮಾರ್ ರಾವ್ ಅಭಿನಯದ 'ಹಮಾರಿ ಅಧುರಿ ಕಹಾನಿ' ಚಿತ್ರಗಳು ಸೇರಿವೆ.


 

66

ಮಹೇಶ್ ಭಟ್ ಅವರ ತಾಯಿಯ ಅವರು ಗುಜರಾತಿ ಚಲನಚಿತ್ರಗಳ ಜನಪ್ರಿಯ ನಟಿ. ಅವರ ತಂದೆ ನಾನಾ ಭಾಯಿ ಭಟ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಚಲನಚಿತ್ರಗಳ ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರು. ನಾನಾ ಭಾಯಿ ಭಟ್ ಅವರು ಶಿರಿನ್ ಮೊಹಮ್ಮದ್ ಅಲಿಯನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಸಮಾಜದ ಒತ್ತಡದಿಂದ ಆಕೆಯನ್ನು ಮದುವೆಯಾಗಲು ಸಾಧ್ಯವಾಗಲಿಲ್ಲ. 
 

Read more Photos on
click me!

Recommended Stories