Madhuri Dixit ಹೊಸ ಮನೆಯ ಬಾಡಿಗೆ ಕೇಳಿದ್ರೆ ತಲೆ ತಿರುಗುತ್ತೆ!

Published : Mar 23, 2022, 06:06 PM IST

ಬಾಲಿವುಡ್‌ನಲ್ಲಿ ಧಕ್-ಧಕ್ ಹುಡುಗಿ ಎಂದೇ ಖ್ಯಾತರಾಗಿರುವ ಮಾಧುರಿ ದೀಕ್ಷಿತ್ (Madhuri Dixit) ಶೀಘ್ರದಲ್ಲೇ ಹೊಸ ಮನೆಗೆ ಶಿಫ್ಟ್ ಆಗಲಿದ್ದಾರೆ. ಮಾಧುರಿ ದೀಕ್ಷಿತ್ ಅವರು ವರ್ಲಿಯಲ್ಲಿ  ಹೊಸ ಅಪಾರ್ಟ್ಮೆಂಟ್ ಅನ್ನು ತೆಗೆದುಕೊಂಡಿದ್ದಾರೆ, ಇದಕ್ಕಾಗಿ ಅವರು ತಿಂಗಳಿಗೆ ಸುಮಾರು 12 ಲಕ್ಷ ರೂ ಬಾಡಿಗೆ ನೀಡಲಿದ್ದಾರೆ. ಸದ್ಯ ಈ ಮನೆಯಲ್ಲಿ ನವೀಕರಣ ಕಾರ್ಯ ನಡೆಯುತ್ತಿದೆ. 

PREV
16
Madhuri Dixit ಹೊಸ ಮನೆಯ ಬಾಡಿಗೆ ಕೇಳಿದ್ರೆ ತಲೆ ತಿರುಗುತ್ತೆ!
ಮದುವೆಯ ನಂತರ, ಮಾಧುರಿ ತನ್ನ ಪತಿಯೊಂದಿಗೆ ಅಮೆರಿಕಕ್ಕೆ ತೆರಳಿದರು. ಈ ದಂಪತಿಗೆ ಅರಿನ್ ಮತ್ತು ರಯಾನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

ವರದಿಗಳ ಪ್ರಕಾರ, ಮಾಧುರಿ ದೀಕ್ಷಿತ್ ಇಲ್ಲಿ 29ನೇ ಮಹಡಿಯಲ್ಲಿ ತನ್ನ ಪತಿ ಶ್ರೀರಾಮ್ ನೆನೆ ಮತ್ತು ಇಬ್ಬರು ಮಕ್ಕಳಾದ ಅರಿನ್ ಮತ್ತು ರಿಯಾನ್ ಅವರೊಂದಿಗೆ ಇರಲಿದ್ದಾರೆ. 5500 ಚದರ ಅಡಿಗಳಷ್ಟು ವಿಸ್ತಾರವಾಗಿರುವ ಈ ಮನೆಯ ಒಳಭಾಗವನ್ನು ಮಾಧುರಿ ದೀಕ್ಷಿತ್ ಅವರೇ ತಮ್ಮ ಆಯ್ಕೆಯಂತೆ ನಿರ್ಧರಿಸಿದ್ದಾರೆ.

26

ಅವರ ಈ ಮನೆಯನ್ನು ಅಪೂರ್ವ ಶ್ರಾಫ್ ವಿನ್ಯಾಸಗೊಳಿಸಿದ್ದಾರೆ. ಮನರಂಜನಾ ಪೋರ್ಟಲ್‌ನೊಂದಿಗಿನ ಸಂಭಾಷಣೆಯಲ್ಲಿ, ಡಿಸೈನರ್ ಅಪೂರ್ವ ಶ್ರಾಫ್ 'ಈ ಮನೆಯ ಒಳಾಂಗಣವನ್ನು ವಿನ್ಯಾಸಗೊಳಿಸಲು ಮಾಧುರಿ ತನಗೆ ಹೆಚ್ಚು ಸಮಯವನ್ನು ನೀಡಲಿಲ್ಲ. ಆದರೆ ನಾನಂತೂ ಮಾಧುರಿಯ ಆಯ್ಕೆಗೆ ತಕ್ಕಂತೆ ಮನೆ ವಿನ್ಯಾಸ ಮಾಡಿ ಕೇವಲ 45 ದಿನದಲ್ಲಿ ಮುಗಿಸಿದೆ'  ಎಂದು ಹೇಳಿದರು. 

36

ಮುಂಬೈನ ವರ್ಲಿ ಪ್ರದೇಶದಲ್ಲಿ ಬಹುಮಹಡಿ ಕಟ್ಟಡದಲ್ಲಿ ಅವರ ಅಪಾರ್ಟ್ಮೆಂಟ್ ಇದೆ. ಮಾಧುರಿ ದೀಕ್ಷಿತ್ ಅವರ ಈ ಅಪಾರ್ಟ್ಮೆಂಟ್ ತುಂಬಾ ದೊಡ್ಡದಾಗಿದೆ. ಮನೆ ನವೀಕರಣಕ್ಕೂ ಮುಂಚಿನ ಫೋಟೋ ಇದಾಗಿದೆ. 

46
Madhuri Dixit

ವರದಿಗಳ ಪ್ರಕಾರ, ಮಾಧುರಿಯ ಈ ಮನೆ ಸಮುದ್ರದ ಸುಂದರ ನೋಟವನ್ನು ನೀಡುತ್ತದೆ. ಇದರೊಂದಿಗೆ, ಇಲ್ಲಿಂದ ಸೂರ್ಯಾಸ್ತ ಮತ್ತು ಸೂರ್ಯೋದಯದ ನೋಟವು ತುಂಬಾ ಸುಂದರವಾಗಿ ಕಾಣುತ್ತದೆ.

56

ಮಾಧುರಿ ದೀಕ್ಷಿತ್ ಕೆಲವು ದಿನಗಳ ಹಿಂದೆ 'ದಿ ಫೇಮ್ ಗೇಮ್' ವೆಬ್ ಸರಣಿಯಲ್ಲಿ ಕಾಣಿಸಿಕೊಂಡರು. ಅವರಲ್ಲದೆ ಸಂಜಯ್ ಕಪೂರ್ ಮತ್ತು ಮಾನವ್ ಕೌಲ್ ಕೂಡ ಅದರಲ್ಲಿದ್ದರು. ಈ ವೆಬ್‌ ಸೀರಿಸ್‌ನಲ್ಲಿ ಡ್ಯಾನ್ಸ್‌ ನಂಬರ್‌ ಸಹ ಇದೆ. ಇದರಲ್ಲಿ ಮಾಧುರಿ ದೀಕ್ಷಿತ್ ಕೆಂಪು ಬಣ್ಣದ ಲೆಹೆಂಗಾದಲ್ಲಿ ತುಂಬಾ ಸುಂದರವಾಗಿ ಕಾಣುತ್ತಾರೆ. 

66

ಮಾಧುರಿ ಕೊನೆಯದಾಗಿ ಕಲಾಂಕ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮಾಧುರಿ ಇದುವರೆಗೆ ತೇಜಾಬ್, ರಾಮ್ ಲಖನ್, ಕಿಶನ್ ಕನ್ಹಯ್ಯಾ, ಬೇಟಾ, ಖಲ್ನಾಯಕ್, ಕೊಯ್ಲಾ, ದಿಲ್ ತೋ ಪಾಗಲ್ ಹೈ, ಹಮ್ ಆಪ್ಕೆ ಹೈ ಕೌನ್, ಯಾರಾನಾ, ಪ್ರೇಮ್ ಗ್ರಂಥ್, ದೇವದಾಸ್ ಮುಂತಾದ ಹಲವು ಹಿಟ್‌  ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Read more Photos on
click me!

Recommended Stories