ಮಾಜಿ ಪ್ರಿಯಕರ Rohaman ಜೊತೆ Sushmita Sen; ಏನ್ ನಡಿತಿದೆ ಎಂದ ನೆಟಿಜನ್ಸ್

First Published | Mar 23, 2022, 6:02 PM IST

ಸುಶ್ಮಿತಾ ಸೇನ್ (Sushmita Sen) ಕಳೆದ ವರ್ಷ ಡಿಸೆಂಬರ್ 2021 ರಲ್ಲಿ ಗೆಳೆಯ ರೋಹ್ಮನ್ ಶಾಲ್ (Rohman Shawl) ಜೊತೆ ಬ್ರೇಕಪ್‌ ಮಾಡಿಕೊಂಡರು. ಈ ಮಾಹಿತಿಯನ್ನು ಸ್ವತಃ ಸುಶ್ಮಿತಾ ಸೇನ್ ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ, ಈಗ ಸುಶ್ಮಿತಾ ಸೇನ್ ಅವರ ವೀಡಿಯೊ ವೈರಲ್ ಆಗುತ್ತಿದೆ, ಇದರಲ್ಲಿ ಅವರು ತಮ್ಮ ಮಾಜಿ ಗೆಳೆಯ ರೋಹ್ಮನ್ ಶಾಲ್ ಅವರೊಂದಿಗೆ ಒಂದೇ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. 

ಬ್ರೇಕಪ್ ಆದ ನಂತರವೂ ಸುಶ್ಮಿತಾ ಸೇನ್ ಅವರನ್ನು ಎಕ್ಸ್‌ ಬಾಯ್‌ ಫ್ರೆಂಡ್‌ ಜೊತೆ ಒಂದೇ ಕಾರಿನಲ್ಲಿ ನೋಡಿದ ಸಾಮಾಜಿಕ ಜಾಲತಾಣ ಬಳಕೆದಾರರು ವಿವಿಧ ರೀತಿಯ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಇವರು ಬೇರೆಯಾಗಿದ್ದರು ಅಲ್ಲವೇ? ಎಂದು ಒಬ್ಬ ಯೂಸರ್‌ ಕಾಮೆಂಟ್‌ ಮಾಡಿದ್ದಾರೆ. ಅದೇ ಸಮಯದಲ್ಲಿ, ಇನ್ನೊಬ್ಬ ವ್ಯಕ್ತಿ 'ಇದು ಚೆನ್ನಾಗಿದೆ ಫ್ರೆಂಡ್‌ ವಿಥ್‌ ಬೆನಿಫಿಟ್‌' ಎಂದು ಕಾಮೆಂಟ್‌ ಮಾಡಿದ್ದಾರೆ.

Tap to resize

 'ಮತ್ತೆ ಒಟ್ಟಿಗೆ ಈಗ ಈ ಕಥೆ ಏನು? ಎಂದು ಮತ್ತೊಬ್ಬರು ಕೇಳಿದರೆ, 'ಅವರು ನಿಜವಾಗಿಯೂ ಬ್ರೇಕಪ್‌ ಆಗಿದ್ದಾರೆ ಅಥವಾ ಪ್ರಚಾರಕ್ಕೆ ಬರಲು ಅವರು ಹಾಗೆ ಹೇಳಿದ್ದಾರೆಯೇ?' ಎಂದು ಇನ್ನೊಬ್ಬರು ಅಪಹಾಸ್ಯ ಮಾಡಿದರು.

ಬ್ರೇಕಪ್‌ ಮೊದಲು, ರೋಹ್ಮನ್ ಸುಶ್ಮಿತಾ ಸೇನ್ ಅವರ ಮನೆಯಲ್ಲಿಯೇ ಇರುತ್ತಿದ್ದರು. ಇಬ್ಬರ ಅನೇಕ ವೀಡಿಯೊಗಳು ಮತ್ತು ಫೋಟೋಗಳು ಹೊರಬಂದಿದ್ದವು ಮತ್ತು ಇದರಲ್ಲಿ ರೋಹ್ಮನ್ ಸುಶ್ಮಿತಾ ಅವರ ಹೆಣ್ಣುಮಕ್ಕಳೊಂದಿಗೆ ಆಟವಾಡುತ್ತಿದ್ದಾರೆ.

ಸುಶ್ಮಿತಾ ಸೇನ್ ಮತ್ತು ರೋಹ್ಮನ್ ಶಾಲ್ ಅವರ ವಯಸ್ಸಿನಲ್ಲಿ 15 ವರ್ಷಗಳ ಅಂತರವಿದೆ. ಸುಶ್ಮಿತಾ ಸೇನ್‌ಗೆ 46 ವರ್ಷವಾಗಿದ್ದರೆ, ರೋಹ್ಮನ್‌ಗೆ ಈಗ 31 ವರ್ಷ. ಫ್ಯಾಷನ್ ಗಾಲಾ ಸಂದರ್ಭದಲ್ಲಿ ಇಬ್ಬರೂ ಮೊದಲ ಬಾರಿಗೆ ಭೇಟಿಯಾದರು. 

ಬ್ರೇಕಪ್ ಆಗುವ ಮುನ್ನ ಇಬ್ಬರೂ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂಬ ಸುದ್ದಿಯೂ ಬಂದಿತ್ತು. ಆದರೆ, ಸುಶ್ಮಿತಾ ಸೇನ್ ನಂತರ ಇದನ್ನು ನಿರಾಕರಿಸಿದ್ದರು ಮತ್ತು ಸುಶ್ಮಿತಾ ಸೇನ್ ಅವರೊಂದಿಗಿನ ಅವರ ವಿವಾಹದ ಬಗ್ಗೆ ಸಂದರ್ಶನವೊಂದರಲ್ಲಿ ರೋಹ್ಮನ್ ಅವರನ್ನು ಕೇಳಿದಾಗ, ನಾವಿಬ್ಬರೂ ಮದುವೆಯಾದಾಗ, ನಿಮಗೆ ಸುದ್ದಿ ಸಿಗುತ್ತದೆ ಎಂದಿದ್ದರು.

ರೋಹ್ಮನ್ ಶಾಲ್ ನೋಯ್ಡಾ ನಿವಾಸಿ. ಅವರು ವೃತ್ತಿಯಲ್ಲಿ ಸ್ವತಂತ್ರ ಮಾಡೆಲ್‌. ನೋಯ್ಡಾದಲ್ಲಿ  ಓದಿದ ನಂತರ,ರೋಹ್ಮನ್ ಮುಂಬೈಗೆ ತೆರಳಿದರು ಮತ್ತು ಮಾಡೆಲಿಂಗ್ ವೃತ್ತಿಯಲ್ಲಿ ತೊಡಗಿದರು. ಸುಶ್ಮಿತಾ ಸೇನ್ ಮತ್ತು ರೋಹ್ಮನ್  ಫ್ಯಾಷನ್ ಶೋ ವೇಳೆ ಭೇಟಿಯಾಗಿದ್ದರು ಎನ್ನಲಾಗಿದೆ.  

Latest Videos

click me!