ಪ್ರೀತಿಸಿದವರಿಂದಲೇ ಮೋಸ ಹೋದ ನಟಿ ಮಧುಬಾಲಾಗೆ ಕೊನೆಯವರೆಗೂ ಪ್ರೀತಿ ಸಿಗಲೇ ಇಲ್ಲ!

Suvarna News   | Asianet News
Published : Feb 23, 2022, 06:29 PM IST

ಬಾಲಿವುಡ್‌ನ ಅತಿ ಸುಂದರ ನಟಿಯರಲ್ಲಿ ಒಬ್ಬರಾದ ಮಧುಬಾಲಾ (Madhubala) ಅವರ 53 ನೇ ಪುಣ್ಯತಿಥಿ. ಅವರು 23 ಫೆಬ್ರವರಿ 1969 ರಂದು ಮುಂಬೈನಲ್ಲಿ ನಿಧನರಾದರು. ತಮ್ಮ ಕಡಿಮೆ ಅವಧಿಯ ವೃತ್ತಿ ಜೀವನದಲ್ಲಿ ಒಂದಕ್ಕಿಂತ ಹೆಚ್ಚು ಹಿಟ್ ಚಿತ್ರಗಳನ್ನು ನೀಡಿದ ಮಧುಬಾಲಾ ಅವರ ವೈಯಕ್ತಿಕ ಜೀವನವು ಚೆನ್ನಾಗಿರಲಿಲ್ಲ. ತಾವು ಪ್ರೀತಿಸಿದವರಿಂದ ಮೋಸ ಹೋಗಿದ್ದಾರೆ. ಮಧುಬಾಲಾ ತಮ್ಮ ಸಹ ನಟ ದಿಲೀಪ್ ಕುಮಾರ್ ಅವರನ್ನು ತುಂಬಾ ಪ್ರೀತಿಸುತ್ತಿದ್ದರು. ಆದರೆ ದಿಲೀಪ್ ಕುಮಾರ್  (Dilip Kumar) ಅವರ ಒಂದು ತಪ್ಪು ನಿರ್ಧಾರ, ಎಲ್ಲವನ್ನೂ ಹಾಳು ಮಾಡಿತು. ದಿಲೀಪ್ ಕುಮಾರ್ ಮಾಡಿದ ತಪ್ಪಿನಿಂದಾಗಿ ಇಬ್ಬರ ನಡುವೆ ಸಾಯುವವರೆಗೂ ಮನಸ್ತಾಪವಿತ್ತು. ದಿಲೀಪ್ ಜೊತೆ ಬ್ರೇಕಪ್‌ ಆದ ನಂತರ ಮಧುಬಾಲಾ ಕಿಶೋರ್ ಕುಮಾರ್ (Kishore Kumar) ಅವರನ್ನು ಮದುವೆಯಾದರು. ಆದರೆ, ಕಿಶೋರ್ ಜೊತೆಗೂ ಪ್ರೀತಿ ಸಿಗಲಿಲ್ಲ. ಮಧುಬಾಲಾ ಅವರ ಹೃದಯದಲ್ಲಿ ರಂಧ್ರವಿತ್ತು ಮತ್ತು ಅವರು 36ನೇ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದರು. ಮಧುಬಾಲಾ ಮತ್ತು ದಿಲೀಪ್ ಕುಮಾರ್ ಸಂಬಂಧ ಕ್ಷಣಮಾತ್ರದಲ್ಲಿ ಮುರಿದು ಬಿದ್ದ ನಂತರ ಏನಾಯಿತು ಎಂಬುದನ್ನು ಕೆಳಗೆ ಓದಿ

PREV
17
ಪ್ರೀತಿಸಿದವರಿಂದಲೇ ಮೋಸ ಹೋದ ನಟಿ ಮಧುಬಾಲಾಗೆ ಕೊನೆಯವರೆಗೂ ಪ್ರೀತಿ ಸಿಗಲೇ ಇಲ್ಲ!

ಮಧುಬಾಲಾ ಮತ್ತು ದಿಲೀಪ್ ಕುಮಾರ್ ನಡುವೆ ಜಗಳ ಶುರುವಾಗಿದ್ದು, ಇಬ್ಬರೂ ಒಟ್ಟಿಗೆ ಚಿತ್ರಕ್ಕೆ ಸಹಿ ಹಾಕಿದಾಗ. ಈ ಚಿತ್ರದಿಂದ ಬಿಆರ್ ಚೋಪ್ರಾ ಅವರ ಹೊಸ ಯುಗ ಆರಂಭವಾಗಿತ್ತು. ಈ ಚಿತ್ರದ ಚಿತ್ರೀಕರಣವನ್ನು ಹೊರಾಂಗಣದಲ್ಲಿ ನಡೆಯಬೇಕಿತ್ತು.

27

ಇದಕ್ಕಾಗಿ ಮಧುಬಾಲಾ ಸುಮಾರು 40 ದಿನಗಳ ಕಾಲ ಮುಂಬೈನಿಂದ ದೂರ ಉಳಿಯ ಬೇಕಾಯಿತು, ಆದರೆ ಮಧುಬಾಲಾ ತಂದೆ ಇದಕ್ಕೆ ಸಿದ್ಧರಿರಲಿಲ್ಲ. ಮಧುಬಾಲಾ ಈ ಚಿತ್ರದ ಸಾಕಷ್ಟು ಭಾಗವನ್ನು ಚಿತ್ರೀಕರಿಸಿದ್ದರು. ಮಧುಬಾಲಾ ಕೂಡ ತನ್ನ ತಂದೆಯ ಆಸೆಗೆ ವಿರುದ್ಧವಾಗಿ ಹೋಗಲಿಲ್ಲ ಮತ್ತು ಅಂತಿಮವಾಗಿ ಅವರು ಚಿತ್ರದಲ್ಲಿ ನಟಿಸಲು ನಿರಾಕರಿಸಿ ಬಿಟ್ಟರು.. 

37

ಇದಾದ ನಂತರ ಈ ಚಿತ್ರಕ್ಕೆ ವೈಜಯಂತಿಮಾಲಾ ಸಹಿ ಹಾಕಿದ್ದರು. ಮಧುಬಾಲಾ ಬದಲಿಗೆ ವೈಜಯಂತಿಮಾಲಾಗೆ ಸಹಿ ಹಾಕುವ ವಿಚಾರ ಕೋರ್ಟ್ ಮೆಟ್ಟಿಲೇರಿತು. ಈ ವೇಳೆ ದಿಲೀಪ್ ಕುಮಾರ್ ಚಿತ್ರದ ನಿರ್ದೇಶಕರನ್ನು ಬೆಂಬಲಿಸಿ ಮಧುಬಾಲಾ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ್ದರು. ದಿಲೀಪ್ ಕುಮಾರ್ ಅವರ ಸಾಕ್ಷ್ಯದಿಂದ ಮಧುಬಾಲಾ ಅವರ ಹೃದಯ ಒಡೆದಿದ್ದಲ್ಲದೇ, ಅವರ ಸಂಬಂಧದವೂ ಹಾಳಾಯಿತು.

47

ಈ ಪ್ರಕರಣದ ನಂತರ ದಿಲೀಪ್ ಕುಮಾರ್ ಮಧುಬಾಲಾರನ್ನು ಮದುವೆಯಾಗುವ ಬಗ್ಗೆಯೂ ಪ್ರಸ್ತಾಪಿಸಿದರು. ತಮ್ಮ ತಂದೆಯ ಬಳಿ ಕ್ಷಮೆಯಾಚಿಸುವಂತೆ ಕೇಳಿದ್ದರು ಮಧುಬಾಲಾ. ಆದರೆ ಅವರು ಇದಕ್ಕೆ ಸಿದ್ಧರಿಲ್ಲ. ಅಲ್ಲಿಗೆ ಈ ಪ್ರೇಮಕಥೆ ಸುಖಾಂತ್ಯ ಕಾಣಲೇ ಇಲ್ಲ.

57

ದಿಲೀಪ್ ಕುಮಾರ್ ಅವರ ಸಾಕ್ಷ್ಯದ ನಂತರ, ಅವರಿಬ್ಬರ ಪ್ರೀತಿಯಲ್ಲಿ ಎಂದಿಗೂ ಸರಿಯಾದ ಕಂದಕ ಸೃಷ್ಯಿಯಾಯಿತು. ಆಗ ಮೊಘಲ್-ಎ-ಅಜಮ್ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಶೂಟಿಂಗ್ (Shooting) ಮಾಡುತ್ತಿದ್ದರೂ, ಒಟ್ಟಿಗೆ ಇದ್ದ , ಇಬ್ಬರೂ ಪರಸ್ಪರ ಸಂಪೂರ್ಣವಾಗಿ ಅಪರಿಚಿತರಂತೆ ಇದ್ದರು.

67

ಮಧುಬಾಲಾ ನೀಲ್ ಕಮಲ್ ಚಿತ್ರದ ಮೂಲಕ ನಾಯಕಿ ನಟಿಯಾಗಿ ಪಾದಾರ್ಪಣೆ ಮಾಡಿದರು. ಮಧುಬಾಲಾ ಅವರ ಚಲನಚಿತ್ರ ವೃತ್ತಿಜೀವನವು ಅತ್ಯಂತ ಯಶಸ್ವಿಯಾಯಿತು ಆದರೆ ಅವರ ವೈಯಕ್ತಿಕ ಜೀವನವು ತೊಂದರೆಗಳಿಂದ ತುಂಬಿತ್ತು. 

77

ಮಧುಬಾಲಾ 1949 ರಲ್ಲಿ ಕಮಲ್ ಅಮ್ರೋಹಿಯವರ ಮಹಲ್ ಚಿತ್ರದಲ್ಲಿ ಕೆಲಸ ಮಾಡಿದರು, ಇದು ಅವರ ವೃತ್ತಿ ಜೀವನದ ಮಹತ್ವದ ತಿರುವು ಎಂದು ಸಾಬೀತಾಯಿತು  ಮಧುಬಾಲ ಅವರು ಚಲ್ತಿ ಕಾ ನಾಮ್‌ ಗಾಡಿ, ಮಹಲ್, ಮಿಸ್ಟರ್ ಅಂಡ್ ಮಿಸೆಸ್ 55, ಕಾಲಾ ಪಾನಿ, ಹಾಫ್ ಟಿಕೆಟ್, ತರಾನಾ, ರೈನಿ ನೈಟ್, ಫಗುನ್, ಜುಮ್ರು,ಬಸಂತ್, ನೀಲ್ ಕಮಲ್, ಜ್ವಾಲಾ, ಬಾದಲ್, ದಿಲ್‌ ಕಾ ರಾಣಿ, ದೋ ಉಸ್ತಾದ್‌, ನಾಥಾ, ಶರಾಬಿಯಂತಹ ಅನೇಕ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

 

Read more Photos on
click me!

Recommended Stories