ಶಾರೂಕ್‌ ಖಾನ್‌ ರಿಜೆಕ್ಟ್ ಮಾಡಿದ ಸಿನಿಮಾ, ಬಾಕ್ಸಾಫೀಸಿನಲ್ಲಿ ಬರೋಬ್ಬರಿ 3145 ಕೋಟಿ ಗಳಿಸಿ, ಆಸ್ಕರ್ ಪಡೆದಿತ್ತು!

Published : Oct 19, 2023, 12:59 PM IST

ಶಾರೂಕ್‌ ಸದ್ಯ ಬಾಲಿವುಡ್‌ನ ಸೂಪರ್‌ಸ್ಟಾರ್‌. ನಟಿಸಿದ ಸಿನಿಮಾಗಳೆಲ್ಲವೂ ಕೋಟಿ ಕೋಟಿ ಗಳಿಸುತ್ತಿವೆ. ಆದರೆ ಹಿಂದೊಮ್ಮೆ ಇದೇ ಕಿಂಗ್‌ ಖಾನ್‌ ಬಾಲಿವುಡ್‌ನ ಸೂಪರ್‌ ಸಕ್ಸಸ್‌ ಆದ ಸಿನಿಮಾವೊಂದರ ಆಫರ್‌ ಕೈ ಬಿಟ್ಟಿದ್ದರು ಅನ್ನೋದು ನಿಮ್ಗೆ ಗೊತ್ತಿದ್ಯಾ? ಯಾವುದು ಆ ಸಿನಿಮಾ? ಅದರಲ್ಲಿ ನಟಿಸಿದ್ದ ನಟ ಯಾರು?

PREV
19
ಶಾರೂಕ್‌ ಖಾನ್‌ ರಿಜೆಕ್ಟ್ ಮಾಡಿದ ಸಿನಿಮಾ, ಬಾಕ್ಸಾಫೀಸಿನಲ್ಲಿ ಬರೋಬ್ಬರಿ 3145 ಕೋಟಿ ಗಳಿಸಿ, ಆಸ್ಕರ್ ಪಡೆದಿತ್ತು!

ಶಾರೂಕ್‌ ಸದ್ಯ ಬಾಲಿವುಡ್‌ನ ಸೂಪರ್‌ಸ್ಟಾರ್‌. ನಟಿಸಿದ ಸಿನಿಮಾಗಳೆಲ್ಲವೂ ಕೋಟಿ ಕೋಟಿ ಗಳಿಸುತ್ತಿವೆ. ಆದರೆ ಹಿಂದೊಮ್ಮೆ ಇದೇ ಕಿಂಗ್‌ ಖಾನ್‌ ಬಾಲಿವುಡ್‌ನ ಸೂಪರ್‌ ಸಕ್ಸಸ್‌ ಆದ ಸಿನಿಮಾವೊಂದರ ಆಫರ್‌ ಕೈ ಬಿಟ್ಟಿದ್ದರು ಅನ್ನೋದು ನಿಮ್ಗೆ ಗೊತ್ತಿದ್ಯಾ? ಯಾವುದು ಆ ಸಿನಿಮಾ? ಅದರಲ್ಲಿ ನಟಿಸಿದ್ದ ನಟ ಯಾರು?

29

ಬಾಲಿವುಡ್ ನಟ ಇರ್ಫಾನ್ ಖಾನ್ ಅನಾರೋಗ್ಯದ ನಂತರ ಏಪ್ರಿಲ್ 29, 2020ರಂದು ನಿಧನರಾದರು. ಆದರೆ ಇವತ್ತಿಗೂ ಈ ಪ್ರತಿಭಾವಂತ ನಟನನ್ನು ಕೋಟ್ಯಾಂತರ ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ. ಬಾಲಿವುಡ್‌ನಲ್ಲಿ ಮಾತ್ರವಲ್ಲದೆ ಹಾಲಿವುಡ್‌ನಲ್ಲೂ ಯಶಸ್ಸು ಗಳಿಸಿದ ಬಾಲಿವುಡ್ ತಾರೆಗಳಲ್ಲಿ ಇರ್ಫಾನ್ ಖಾನ್ ಒಬ್ಬರು. 

39

ಇರ್ಫಾನ್ ಖಾನ್, ಇನ್ಫರ್ನೋ, ಲೈಫ್ ಆಫ್ ಪೈ ಮತ್ತು ಜುರಾಸಿಕ್ ವರ್ಲ್ಡ್‌ನಂತಹ ಅನೇಕ ಸೂಪರ್‌ಹಿಟ್ ಹಾಲಿವುಡ್ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅನೇಕ ಉತ್ತಮ ಬಾಲಿವುಡ್ ಚಲನಚಿತ್ರಗಳನ್ನು ಸಹ ನೀಡಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಸಕ್ಸಸ್‌ ಆದ ಇರ್ಫಾನ್ ಖಾನ್‌ ಸಿನಿಮಾಗಳಲ್ಲೊಂದು 'ಸ್ಲಮ್‌ಡಾಗ್ ಮಿಲಿಯನೇರ್'.

49

ಡ್ಯಾನಿ ಬೋಯ್ಲ್ ನಿರ್ದೇಶಿಸಿದ ಸ್ಲಮ್‌ಡಾಗ್ ಮಿಲಿನಿಯರ್ ಸಿನಿಮಾವನ್ನು 124 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾಯಿತು. ಆ ಸಮಯದಲ್ಲಿ ಚಿತ್ರದ ಶೀರ್ಷಿಕೆಯು ಚರ್ಚೆಯ ವಿಷಯವಾಗಿತ್ತು.

59

ಆದರೂ, ಅನೇಕ ವಿವಾದಗಳ ಹೊರತಾಗಿಯೂ, ಚಿತ್ರವು ಬ್ಲಾಕ್‌ಬಸ್ಟರ್‌ ಎಂದು ಸಾಬೀತಾಯಿತು. ಬಾಕ್ಸ್‌ ಆಫೀಸಿನಲ್ಲಿ ಬರೋಬ್ಬರಿ 3145 ಕೋಟಿ ಗಳಿಸುವ ಮೂಲಕ ಎಲ್ಲರನ್ನು ಬೆರಗುಗೊಳಿಸಿತು. 

69

'ಸ್ಲಮ್‌ಡಾಗ್ ಮಿಲಿಯನೇರ್' ಸಿನಿಮಾ, ಜನವರಿ 23, 2009ರಂದು ಬಿಡುಗಡೆಯಾಯಿತು. ಚಿತ್ರದಲ್ಲಿ ಇರ್ಫಾನ್ ಖಾನ್, ದೇವ್ ಪಟೇಲ್, ಫ್ರೀಡಾ ಪಿಂಟೋ, ಅನಿಲ್ ಕಪೂರ್ ಮತ್ತು ಮಧುರ್ ಮಿತ್ತಲ್ ಸೇರಿದಂತೆ ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ತಾರೆಯರು ನಟಿಸಿದ್ದರು.

79

ಈ ಸಿನಿಮಾದ ಬಗ್ಗೆ ಗಮನಿಸಬೇಕಾದ ಅಂಶವೆಂದರೆ ಡ್ಯಾನಿ ಬೋಯ್ಲ್ ಮೊದಲು ಅನಿಲ್ ಕಪೂರ್ (ಪ್ರೇಮ್ ಕುಮಾರ್) ಪಾತ್ರವನ್ನು ಶಾರೂಖ್ ಖಾನ್‌ಗೆ ನೀಡಿದ್ದರು. ಆರಂಭದಲ್ಲಿ ಶಾರುಖ್ ಖಾನ್ ಕೂಡಾ ಈ ಚಿತ್ರವನ್ನು ಮಾಡಲು ಸಿದ್ಧರಾಗಿದ್ದರು.

89

ಶಾರೂಕ್‌ ಸಹ ನಿರ್ದೇಶಕರೊಂದಿಗೆ ಸ್ಕ್ರಿಪ್ಟ್ ಕೆಲಸ ಮಾಡಲು ಪ್ರಾರಂಭಿಸಿದರು. ಆದರೆ ನಂತರ ಅವರು ಚಿತ್ರ ಮಾಡಲು ನಿರಾಕರಿಸಿದರು ಏಕೆಂದರೆ, ಅವರು ಪ್ರೇಮ್ ಪಾತ್ರ ಸಾಕಷ್ಟು ಕೆಟ್ಟದಾಗಿದೆ ಎಂದು ಭಾವಿಸಿದರು.

99

ಆದರೆ 124 ಕೋಟಿಯಲ್ಲಿ ತಯಾರಾದ 'ಸ್ಲಮ್‌ ಡಾಗ್‌ ಮಿಲಿಯನೇರ್‌' ಚಿತ್ರ 3145 ಕೋಟಿ ಗಳಿಸಿದೆ. ಶಾರುಖ್ ಖಾನ್ ಈ ಚಿತ್ರವನ್ನು ತಿರಸ್ಕರಿಸಿದರು, ಇರ್ಫಾನ್ ಖಾನ್ ಈ ಚಿತ್ರದಿಂದ ಸೂಪರ್‌ಸ್ಟಾರ್‌ ಕರೆಸಿಕೊಂಡರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories