400 ಸಿನಿಮಾದಲ್ಲಿ ನಟನೆ, ಒಂದೇ ಒಂದು ಮೂವಿ 100 ಕೋಟಿ ಕ್ಲಬ್ ಸೇರಿಲ್ಲ, ಆದ್ರೂ ಜನ ಸೂಪರ್​ಸ್ಟಾರ್ ಅಂತಾರೆ!

First Published | Oct 19, 2023, 11:23 AM IST

ಈ ನಟ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತುಂಬಾ ಫೇಮಸ್. 100 ಕೋಟಿ ಕ್ಲಬ್ ಸೇರಿದ ಒಂದೇ ಒಂದೂ ಮೂವಿ ಮಾಡದಿದ್ದರೂ ಅಭಿಮಾನಿಗಳು ಇವರಿಗೆ ಸೂಪರ್​ಸ್ಟಾರ್ ಪಟ್ಟ ಕೊಟ್ಟಿದ್ದಾರೆ  ಯಾರು ಆ ನಟ?

ಭಾರತೀಯ ಚಿತ್ರರಂಗವೆಂದರೆ ಬಾಲಿವುಡ್‌ ಸಿನಿಮಾ ಎಂಬಂಥಾ ದಿನಗಳಿದ್ದವು. ಆದರೆ ಸೌತ್‌ನ ಹಲವು ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ಗುರುತಿಸಿಕೊಳ್ಳುತ್ತಿವೆ. ತೆಲುಗು, ತಮಿಳು, ಮಲಯಾಳಂ, ಕನ್ನಡದ ಹಲವು ನಟರು ಸೂಪರ್‌ಸ್ಟಾರ್ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ. 

ಈ ನಟ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತುಂಬಾ ಫೇಮಸ್. 100 ಕೋಟಿ ಕ್ಲಬ್ ಸೇರಿದ ಒಂದೇ ಒಂದೂ ಮೂವಿ ಮಾಡದಿದ್ದರೂ ಅಭಿಮಾನಿಗಳು ಇವರಿಗೆ ಸೂಪರ್​ಸ್ಟಾರ್ ಪಟ್ಟ ಕೊಟ್ಟಿದ್ದಾರೆ 

Tap to resize

ಸೌತ್ ಇಂಡಸ್ಟ್ರಿಯ ಮೆಗಾಸ್ಟಾರ್ ಎಂದೇ ಕರೆಸಿಕೊಳ್ಳುವ ಈ ನಟನ ಕುರಿತು ಬಹಳಷ್ಟು ಆಸಕ್ತಿದಾಯಕ ಸಂಗತಿಗಳಿವೆ. ಸೆಪ್ಟೆಂಬರ್ 7, 1951ರಂದು ಜನಿಸಿದ ಮುಹಮ್ಮದ್ ಕುಟ್ಟಿ ಪಾನಪರಂಬಿಲ್ ಇಸ್ಮಾಯಿಲ್ ಅವರನ್ನು ಪ್ರೀತಿಯಿಂದ 'ಮಾಮುಕ್ಕ' ಎಂದು ಕರೆಯುತ್ತಾರೆ.

ಮಮ್ಮುಟ್ಟಿ 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಅವರ ಯಾವುದೇ ಚಿತ್ರವು 100 ಕೋಟಿ ರೂಪಾಯಿಗಳನ್ನು ದಾಟಿಲ್ಲ ಎಂಬುದು ಕುತೂಹಲಕಾರಿಯಾಗಿದೆ. 

ಮಮ್ಮುಟ್ಟಿ ಅವರು ಮಲಯಾಳಂ ಮತ್ತು ತಮಿಳು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮಮ್ಮುಟ್ಟಿ ಸುಮಾರು ಐದು ದಶಕಗಳ ಹಿಂದೆ ನಟನೆಗೆ ಪಾದಾರ್ಪಣೆ ಮಾಡಿದರು. ಇಲ್ಲಿಯವರೆಗೆ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇವೆಲ್ಲವೂ ಅಭಿಮಾನಿಗಳ ಫೇವರಿಟ್. ಆದರೆ ಯಾವುದರ ಬಜೆಟ್ ಸಹ ಇದುವರೆಗೂ 100 ಕೋಟಿ ರೂ. ದಾಟಿಲ್ಲ.

ಮಮ್ಮುಟ್ಟಿ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಏಳು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಹದಿಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು  ಗೆದ್ದಿದ್ದಾರೆ. ಅವರಿಗೆ ಭಾರತ ಸರ್ಕಾರವು 1998 ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತು. 2022 ರಲ್ಲಿ ಅವರಿಗೆ ಕೇರಳ ಪ್ರಭಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಮಮ್ಮುಟ್ಟಿ ವೃತ್ತಿಯಲ್ಲಿ ವಕೀಲರಾಗಿದ್ದು, ಎರಡು ವರ್ಷಗಳ ಕಾಲ ವಕೀಲಿ ವೃತ್ತಿಯನ್ನೂ ಮಾಡಿದ್ದಾರೆ. 1971ರಲ್ಲಿ ಜೂನಿಯರ್ ಕಲಾವಿದರಾಗಿ ನಟನೆಯ ಜಗತ್ತನ್ನು ಪ್ರವೇಶಿಸಿದರು. ಅವರು ತಮ್ಮ ಮೊದಲ ಕೆಲವು ಚಿತ್ರಗಳಲ್ಲಿ ಸಜಿನ್ ಹೆಸರಿನಲ್ಲಿ ಕೆಲಸ ಮಾಡಿದರು. ಅವರು 1980ರಲ್ಲಿ ಸುಲ್ಫತ್ ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ, ಮಗ ದುಲ್ಕರ್ ಸಲ್ಮಾನ್ ಮತ್ತು ಮಗಳು ಸುರುಮಿ.

ಮಮ್ಮುಟ್ಟಿ ಅವರು ಮಲಯಾಳಂ ಕಮ್ಯುನಿಕೇಷನ್ಸ್‌ನ ಅಧ್ಯಕ್ಷರಾಗಿದ್ದಾರೆ, ಇದು ಮಲಯಾಳಂ ದೂರದರ್ಶನ ಚಾನೆಲ್‌ಗಳಾದ ಕೈರಲಿ ಟಿವಿ, ಕೈರಲಿ ನ್ಯೂಸ್ ಮತ್ತು ಕೈರಲಿ ವೀ ಅನ್ನು ನಡೆಸುತ್ತಿದೆ.

ಇದಲ್ಲದೆ ಮಮ್ಮುಟ್ಟಿ ವಿತರಣಾ ನಿರ್ಮಾಣ ಬ್ಯಾನರ್ ಪ್ಲೇಹೌಸ್ ಮತ್ತು ಮಮ್ಮುಟ್ಟಿ ಕಂಪೆನಿ ಸೇರಿದಂತೆ ನಿರ್ಮಾಣ ಉದ್ಯಮಗಳನ್ನು ಹೊಂದಿದ್ದಾರೆ. ಮಮ್ಮುಟ್ಟಿ ಅವರ ಕಾಥಲ್, ಬಾಜೂಕಾ ಮತ್ತು ಬ್ರಹ್ಮಯುಗಂ ಚಿತ್ರಗಳು ಇನ್ನಷ್ಟೇ ರಿಲೀಸ್ ಆಗಬೇಕಿದೆ.

Latest Videos

click me!