ಲೈಗರ್‌ ಫ್ಲಾಫ್‌ ; ಹಾಲಿಡೇ ಎಂಜಾಯ್‌ ಮಾಡುತ್ತಿರುವ ಅನನ್ಯಾ ಪಾಂಡೆ ಟ್ರೋಲ್‌

Published : Sep 08, 2022, 03:33 PM IST

ಆಗಸ್ಟ್ 25 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಲೈಗರ್ (Liger) ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಫ್ಲಾಪ್ ಎಂದು ಸಾಬೀತಾಯಿತು. ಸೌತ್ ಸ್ಟಾರ್ ವಿಜಯ್ ದೇವರಕೊಂಡ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು, ಆದರೆ ವಿಫಲರಾದರು. ಚಿತ್ರ ವಿಫಲವಾದ ತಕ್ಷಣ ನಟಿ ಅನನ್ಯಾ ಪಾಂಡೆ (Anannya Panday) ರಜೆಯ ಮೇಲೆ ತೆರಳಿದ್ದರು. ಮೊದಲು ಮಥುರಾಗೆ ಹೋಗಿ ಅಲ್ಲಿಂದ ಇಟಲಿಗೆ ಹೋಗಿದ್ದಾರೆ. ಅವರು ತಮ್ಮ ಹಾಲಿಡೇಯ ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಅನನ್ಯಾ ಪಾಂಡೆ ಅವರ  ಹಾಲಿಡೇ ಎಂಜಾಯ್‌ ಮಾಡುತ್ತಿರುವ  ಫೋಟೋಗಳನ್ನು  ನೋಡಿದ  ಜನರು ಅವರನ್ನು ಟ್ರೋಲ್‌ ಮಾಡುತ್ತಿದ್ದಾರೆ. ಅಷ್ಟಕ್ಕೂ ಕಾರಣವೇನು ಗೊತ್ತಾ?

PREV
15
ಲೈಗರ್‌ ಫ್ಲಾಫ್‌ ; ಹಾಲಿಡೇ ಎಂಜಾಯ್‌ ಮಾಡುತ್ತಿರುವ ಅನನ್ಯಾ ಪಾಂಡೆ ಟ್ರೋಲ್‌

ಅನನ್ಯಾ ಪಾಂಡೆ ಹಂಚಿಕೊಂಡ ಫೋಟೋಗಳಲ್ಲಿ, ಅವರು ಹಸಿರು ಬಿಕಿನಿಯನ್ನು ಧರಿಸಿ ಬೀಚ್‌ನಲ್ಲಿ ಸನ್‌ ಬಾತ್‌ ಮಾಡುವುದನ್ನು ಕಾಣಬಹುದು. ಅವರ ಕೂದಲು ತೆರೆದಿದೆ ಮತ್ತು ಕೂಲಿಂಗ್‌ ಧರಿಸಿದ್ದಾರೆ.


 

25

ಲೈಗರ್ ಚಿತ್ರದ ಫ್ಲಾಪ್ ನಂತರ ಅನನ್ಯಾ ಪಾಂಡೆ ಮೋಜು ಮಾಡುತ್ತಿರುವುದನ್ನು ನೋಡಿ, ಜನರು ಅವರನ್ನುಗೇಲಿ ಮಾಡುತ್ತಿದ್ದಾರೆ. 'ಫ್ಲಾಪ್ ಚಿತ್ರಗಳನ್ನು ನೀಡಿದ ನಂತರ ಒಬ್ಬರು ಹೇಗೆ ಆನಂದಿಸಬಹುದು' ಎಂದು ಕಾಮೆಂಟ್‌ ಮಾಡಿದ್ದಾರೆ.

35

'ಮತ್ತೊಂದು ಫ್ಲಾಪ್ ನೀಡಲು ಸಿದ್ಧತೆಗಳು ನಡೆಯುತ್ತಿವೆ' ಎಂದು ಇನ್ನೊಬ್ಬರು ಬರೆದಿದ್ದಾರೆ. 'ನಿರ್ಮಾಪಕರ ಹಣವನ್ನು ಮುಳುಗಿಸಿದ ನಂತರ ಫನ್‌' ಎಂದು ಮತ್ತೊಬ್ಬ ಯೂಸರ್‌ ಕಾಮೆಂಟ್‌ ಮಾಡಿದರೆ, 'ಫ್ಲಾಪ್ ಚಲನಚಿತ್ರಗಳ ರಾಣಿ' ಎಂದು ನಟಿಯನ್ನು ಟ್ರೋಲ್‌ ಮಾಡುತ್ತಿದ್ದಾರೆ.ಆದರೆ, ಕೆಲವರು ಅನನ್ಯಾಳ ಲುಕ್‌ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.
 


 

 

45

ಕರಣ್ ಜೋಹರ್ ಅವರ ಸ್ಟೂಡೆಂಟ್ ಆಫ್ ದಿ ಇಯರ್  2 ಚಿತ್ರದ ಮೂಲಕ ಅನನ್ಯಾ ಪಾಂಡೆ ಪಾದಾರ್ಪಣೆ ಮಾಡಿದರು. ಟೈಗರ್ ಶ್ರಾಫ್ ಮತ್ತು ತಾರಾ ಸುತಾರಿಯಾ ನಟಿಸಿದ ಈ ಚಿತ್ರವು ಫ್ಲಾಪ್ ಎಂದು ಸಾಬೀತಾಯಿತು.
 
 

55

ಚಂಕಿ ಪಾಂಡೆ ಅವರ ಮಗಳು ಅನನ್ಯಾ ಪಾಂಡೆ ಇದುವರೆಗೆ 5-6 ಚಿತ್ರಗಳಲ್ಲಿ ಕೆಲಸ ಮಾಡಿರಬಹುದು, ಆದರೆ ಅವರ ಯಾವುದೇ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಮ್ಯಾಜಿಕ್‌ ಮಾಡಲು ಸಾಧ್ಯವಾಗಲಿಲ್ಲ .
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories