ರಶ್ಮಿಕಾ ಮಂದಣ್ಣ ಬಾಕ್ಸ್ ಆಫೀಸ್‌ನ ಹಿಟ್ ಮಷಿನ್, 6 ವರ್ಷಗಳಲ್ಲಿ 2 ಸಿನಿಮಾ ಮಾತ್ರ ಫ್ಲಾಪ್
First Published Sep 7, 2022, 5:38 PM ISTದಕ್ಷಿಣ ಭಾರತದ ಸೆನ್ಸೇಷನ್ ರಶ್ಮಿಕಾ ಮಂದಣ್ಣ ಅವರ ಮೊದಲ ಬಾಲಿವುಡ್ ಚಿತ್ರ 'ಗುಡ್ ಬೈ' (Good Bye) ಟ್ರೇಲರ್ (Trailer) ಮಂಗಳವಾರ ಬಿಡುಗಡೆಯಾಗಿದೆ. 26 ವರ್ಷದ ರಶ್ಮಿಕಾ ಮಂದಣ್ಣ ಮೂಲತಃ ತೆಲುಗು ಮತ್ತು ಕನ್ನಡ ಚಲನಚಿತ್ರ (Kannada Movie) ನಟಿ ಮತ್ತು ಅವರು 2016 ರಲ್ಲಿ ನಟನೆಗೆ ಪಾದಾರ್ಪಣೆ ಮಾಡಿದರು. ವಿಶೇಷವೆಂದರೆ ಅವರ 6 ವರ್ಷಗಳ ವೃತ್ತಿಜೀವನದಲ್ಲಿ (Career) ಇದುವರೆಗೆ 13 ಚಿತ್ರಗಳಲ್ಲಿ ಕೆಲಸ ಮಾಡಿದ್ದು, ಅದರಲ್ಲಿ 10 ಬ್ಲಾಕ್ ಬಸ್ಟರ್ (Black Buster) ಮತ್ತು ಹಿಟ್ ಆಗಿವೆ. ಆಲಿಯಾ ಭಟ್ ಬಾಲಿವುಡ್ ನ ಅತ್ಯಂತ ಯಶಸ್ವಿ ನಟಿ. ಆದರೆ ರಶ್ಮಿಕಾ ಮಂದಣ್ಣಗೆ ಹೋಲಿಸಿದರೆ ಅವರ ಮುಂದೆ ಕಡಿಮೆಯೇ. ಆಲಿಯಾ ಭಟ್ 10 ವರ್ಷಗಳ ವೃತ್ತಿ ಜೀವನದಲ್ಲಿ 16 ಚಿತ್ರಗಳನ್ನು (ಅತಿಥಿ ಪಾತ್ರವನ್ನು ಹೊರತುಪಡಿಸಿ) ಮಾಡಿದ್ದಾರೆ, ಆದರೆ ರಶ್ಮಿಕಾ ಮಂದಣ್ಣ ಕೇವಲ 6 ವರ್ಷಗಳ ವೃತ್ತಿಜೀವನದಲ್ಲಿ 13 ಚಿತ್ರಗಳನ್ನು ಮಾಡಿದ್ದಾರೆ. ಆಲಿಯಾ ಭಟ್ ಕೇವಲ ಒಂದು ಬ್ಲಾಕ್ ಬಸ್ಟರ್ (RRR) ಅನ್ನು ನೀಡಿದರು, ಅದು ಕೂಡ ದಕ್ಷಿಣದ ಸಿನಮಾ. ಆದರೆ ರಶ್ಮಿಕಾ ಮಂದಣ್ಣ 4 ಬ್ಲಾಕ್ ಬಸ್ಟರ್ ಮತ್ತು 1 ಆಲ್ ಟೈಮ್ ಬ್ಲಾಕ್ ಬಸ್ಟರ್ ಚಿತ್ರ ನೀಡಿದ್ದಾರೆ.