ನ್ಯೂಡ್ ಕ್ಲಿಪ್‌ಗಳಿಂದ ಹಿಡಿದು ಬಾತ್ರೂಮ್ ಸೆಲ್ಫಿ ಲೀಕ್‌ಗಳವರೆಗೂ ಇವೆ ಈ ನಟಿಯ ವಿವಾದ

Published : Sep 07, 2022, 05:18 PM IST

ತಮಿಳುನಾಡಿನ ವೆಲ್ಲೂರಿನಲ್ಲಿ 7 ಸೆಪ್ಟೆಂಬರ್ 1985 ರಂದು ಜನಿಸಿದ ನಟಿ ರಾಧಿಕಾ ಆಪ್ಟೆ (Radhika Apte) ಅವರ ತಂದೆ ಡಾ. ಚಾರುದ್ದತ್ ಆಪ್ಟೆ ಪುಣೆಯ ಪ್ರಸಿದ್ಧ ನ್ಯೂರೋ ಸರ್ಜನ್‌ ರಾಧಿಕಾ ಆಪ್ಟೆ 2005ರಲ್ಲಿ ಶಾಹಿದ್ ಕಪೂರ್ ಮತ್ತು ಸಂಜಯ್ ದತ್ ಅಭಿನಯದ ವಾಹ್ ಲೈಫ್ ಹೋ ತೋ ಐಸಿ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರೂ, ಅವರು 'ಬದ್ಲಾಪುರ್', 'ಹಂಟರ್' ಮತ್ತು 'ಮಾಂಝಿ - ದಿ ಮೌಂಟೇನ್ ಮ್ಯಾನ್' ಚಿತ್ರಗಳಿಂದ ಮನ್ನಣೆ ಪಡೆದರು. ಇದರ ನಂತರ ಅವರು ಅನೇಕ ವೆಬ್ ಸರಣಿಗಳಲ್ಲಿ (Web Series) ಕಾಣಿಸಿಕೊಂಡರು ಮತ್ತು ಕೆಲವು ಅಂತಾರಾಷ್ಟ್ರೀಯ ಪ್ರಾಜೆಕ್ಟ್‌ಗಳನ್ನು ಸಹ ಮಾಡಿದರು. ರಾಧಿಕಾ ಹಲವು ಹಿಂದಿ ಹಾಗೂ ಮಲಯಾಳಂ, ಬೆಂಗಾಲಿ, ಮರಾಠಿ, ತಮಿಳು ಮತ್ತು ಇಂಗ್ಲಿಷ್ ಭಾಷೆಯ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ, ಸಿನಿಮಾಗಳಿಗಿಂತ ಹೆಚ್ಚಾಗಿ, ರಾಧಿಕಾ ತಮ್ಮ ವೈಯಕ್ತಿಕ ಜೀವನದಲ್ಲಿ ವಿವಾದಗಳು ಮತ್ತು ಅವರ ವೃತ್ತಿಪರ ಜೀವನದಲ್ಲಿ ವಿವಾದಾತ್ಮಕ ದೃಶ್ಯಗಳಿಂದ ಸುದ್ದಿಯಲ್ಲಿದ್ದಾರೆ. 

PREV
17
ನ್ಯೂಡ್ ಕ್ಲಿಪ್‌ಗಳಿಂದ ಹಿಡಿದು ಬಾತ್ರೂಮ್ ಸೆಲ್ಫಿ ಲೀಕ್‌ಗಳವರೆಗೂ ಇವೆ ಈ ನಟಿಯ ವಿವಾದ
radhika apte

ಕಾಸ್ಟಿಂಗ್ ಕೌಚ್ (Costing Couch) ಘಟನೆಯನ್ನು ಬಹಿರಂಗಪಡಿಸಿದಾಗ ರಾಧಿಕಾ ಕೂಡ ಬೆಳಕಿಗೆ ಬಂದಿದ್ದರು. ಹೀರೋ ಜೊತೆ ಮಲಗಲು ನಿರ್ಮಾಪಕರೊಬ್ಬರು ಕೇಳಿದ್ದರೆಂದು ರಾಧಿಕಾ ಬಹಿರಂಗ ಪಡಿಸಿದ್ದು, ದೊಡ್ಡ ಸುದ್ದಿಯಾಗಿತ್ತು. ಅದೇ ಸಮಯದಲ್ಲಿ, ಮತ್ತೊಂದು ಸಂದರ್ಶನದಲ್ಲಿಯೂ ಅವರು ಚಿತ್ರದ ಆಡಿಷನ್ ಸಮಯದಲ್ಲಿ ಫೋನ್‌ನಲ್ಲಿ ಅಶ್ಲೀಲವಾಗಿ ಮಾತನಾಡ ಬೇಕಾಯಿತು ಎಂದು ಹೇಳಿದ್ದರು. 

27

ಮತ್ತೊಂದು ಘಟನೆಯನ್ನು ಉಲ್ಲೇಖಿಸಿ, ರಾಧಿಕಾ ಅವರು ಚಿತ್ರೀಕರಣದ ಮೊದಲ ದಿನದ ಸೆಟ್‌ನಲ್ಲಿ ದಕ್ಷಿಣದ ಪ್ರಸಿದ್ಧ ನಟರೊಬ್ಬರು ತಮ್ಮ ಪಾದಗಳನ್ನು ಮುದ್ದಿಸಿದ್ದಾರೆ ಎಂದು ಹೇಳಿದ್ದರು. ಈ ಕೃತ್ಯವನ್ನು ಕಂಡು ಶಾಕ್‌ ಆದ ಆಕೆ ಆ ನಾಯಕನಿಗೆ ಕಪಾಳಮೋಕ್ಷ ಮಾಡಿದರು. ಈ ಘಟನೆಯ ನಂತರ ರಾಧಿಕಾ ಟಾಲಿವುಡ್ ಅನ್ನು ಪುರುಷ ಪ್ರಧಾನ ಸಮಾಜ (Male Dominating) ಎಂದು ಹೀಯಾಳಿಸಿದ್ದರು.

37

2016 ರ 'ಪರ್ಚ್ಡ್' ಚಿತ್ರದಿಂದ ಆಕೆಯ ನಗ್ನ ದೃಶ್ಯ ಸೋರಿಕೆಯಾದಾಗ ಸಾಕಷ್ಟು ಗಲಾಟೆ ನಡೆದಿತ್ತು. ಇದಾದ ನಂತರ ಆಕೆ ಟ್ರೋಲರ್‌ಗಳ ಕೆಂಗಣ್ಣಿಗೆ ಗುರಿಯಾದರು. ರಾಧಿಕಾ ಆಪ್ಟೆ ಅವರ ನ್ಯೂಡ್ ವಿಡಿಯೋ ಲೀಕ್ (Nude Video) ಆದ ಘಟನೆ ಹಲವು ಬಾರಿ ನಡೆದಿದೆ. 2017 ರಲ್ಲಿ 'ಕ್ಲೀನ್ ಶೇವ್' (Clean Shave) ಚಿತ್ರದ ಶೂಟಿಂಗ್ ಸಮಯದಲ್ಲಿ, ಅವರ ವೀಡಿಯೊ ಕೂಡ ವೈರಲ್ ಆಗಿತ್ತು. ಮನೆಯಿಂದ ಹೊರ ಬರುವುದೇ ಕಷ್ಟವಾಗಿತ್ತು.

47

ರಾಧಿಕಾ ಆಪ್ಟೆ 'ಪರ್ಚೆಡ್' ಚಿತ್ರವಲ್ಲದೆ ಇನ್ನೂ ಹಲವು ಚಿತ್ರಗಳಲ್ಲಿ ಬೋಲ್ಡ್ ದೃಶ್ಯಗಳನ್ನು ನೀಡಿದ್ದಾರೆ. ಚಿತ್ರವೊಂದರ ವಿಡಿಯೋ ಕ್ಲಿಪ್ ವೈರಲ್ ಆದ ನಂತರ ಮನೆಯಿಂದ ಹೊರಬರಲು ಕಷ್ಟವಾಯಿತು ಎಂದು ಅವರೇ ಹೇಳಿದ್ದರು. ಈ ವೀಡಿಯೋ 'ಕ್ಲೀನ್ ಶೇವನ್‌'ನಲ್ಲಿನ ದೃಶ್ಯವಾಗಿದೆ. ಆ ವಿಡಿಯೋ ಕ್ಲಿಪ್ ಮತ್ತು ವೈರಲ್ ಆಗಿರುವ ಚಿತ್ರಗಳಿಂದ ತನ್ನ ಚಾಲಕ, ವಾಚ್‌ಮ್ಯಾನ್ ಮತ್ತು ಸ್ಟೈಲಿಸ್ಟ್‌ನ ಚಾಲಕರು ಕೂಡ ಅವರನ್ನು ಗುರುತಿಸಲು ಪ್ರಾರಂಭಿಸಿದರು ಎಂದು ಅವರು ಹೇಳಿದ್ದರು.


 

57

2017 ರಲ್ಲಿ, ರಾಧಿಕಾ ಮತ್ತೆ ವಿವಾದಗಳಲ್ಲಿ ಸಿಲುಕಿಕೊಂಡರು. ಈ ವೇಳೆ ರಾಧಿಕಾ ಬಾತ್ ರೂಂನಲ್ಲಿ ಸ್ನಾನ ಮಾಡುತ್ತಿರುವ ಸೆಲ್ಫಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಧಿಕಾ ಆಪ್ಟೆ, ಚಿತ್ರದಲ್ಲಿ ಕಾಣುತ್ತಿರುವ ಮಹಿಳೆ ನಾನಲ್ಲ.ಮದುವೆಯ ದಿನ ಯಾವುದೇ ಫೋಟೋ ತೆಗೆದುಕೊಂಡಿಲ್ಲ ಎಂದು ಹೇಳಿಕೆ ನೀಡಿದ್ದರು

67

ರಾಧಿಕಾ ಬ್ರಿಟೀಷ್ ಪಿಟೀಲು ವಾದಕ ಮತ್ತು ಗಾಯಕ ಬೆನೆಡಿಕ್ಟ್ ಟೇಲರ್ ಅವರನ್ನು 2012 ರಲ್ಲಿ ವಿವಾಹವಾದರು, ಸುಮಾರು ಒಂದು ವರ್ಷಗಳ ಕಾಲ ಜೊತೆಗಿದ್ದರು. ತಮಾಷೆಯೆಂದರೆ ರಾಧಿಕಾ ಬಳಿ ಈ ಮದುವೆಯ ಯಾವುದೇ ಫೋಟೋಗಳಿಲ್ಲ. 

77

ಬೆನೆಡಿಕ್ಟ್ ಜೊತೆ ಮದುವೆಯಾದಾಗ ಫೋಟೋ ಕ್ಲಿಕ್ಕಿಸಲು ಮರೆತಿದ್ದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ನಾವು ಇಂಗ್ಲೆಂಡ್‌ನಲ್ಲಿ ಮದುವೆಯಾದೆವು, ಅಲ್ಲಿ ನಾವು ನಮ್ಮ ಸ್ನೇಹಿತರನ್ನು ಆಹ್ವಾನಿಸಿದ್ದೇವೆ, ನಮ್ಮದೇ ಆದ ಅಡುಗೆಯನ್ನು ತಯಾರಿಸಿದ್ದೇವೆ ಮತ್ತು ಭರ್ಜರಿ ಪಾರ್ಟಿ ಮಾಡಿದೆವು. ಆದರೆ ನಮ್ಮ ಬಳಿ ಯಾವುದೇ ಮದುವೆಯ ಫೋಟೋಗಳಿಲ್ಲ ಎಂದು ನಟಿ ಹೇಳಿಕೊಂಡಿದ್ದಾರೆ.

Read more Photos on
click me!

Recommended Stories