ಕನ್ನಡಿಗ ಕೆಎಲ್‌ ರಾಹುಲ್‌ ಮದುವೆ ಫಿಕ್ಸ್‌, ಐಪಿಎಲ್‌ ಬೆನ್ನಲ್ಲೇ ಅದ್ದೂರಿ ಮದುವೆ

First Published | May 4, 2022, 4:56 PM IST

ಅಥಿಯಾ ಶೆಟ್ಟಿ (Athiya Shetty)  ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್  (KL Rahul) ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅವರ ವಿವಾಹದ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅಥಿಯಾ ತಂದೆ ಸುನೀಲ್ ಶೆಟ್ಟಿ (KL Rahul) ಅವರ ಅದ್ಧೂರಿ ಮದುವೆಗೆ ತಯಾರಿ ಆರಂಭಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಸುನೀಲ್ ಶೆಟ್ಟಿ ತನ್ನ ಮಗಳ ಮದುವೆಯ ಬಗ್ಗೆ ತುಂಬಾ ಭಾವುಕರಾಗಿದ್ದಾರೆ. ಶೆಟ್ಟಿ ಮನೆತನದವರಿಗೆ ಇದು ಮೊದಲ ಮದುವೆ ಆದುದರಿಂದ ಮಗಳ ಮದುವೆಯಲ್ಲಿ ಎಲ್ಲವೂ ಚೆನ್ನಾಗಿ ನಡೆಯಲಿ ಎಂದು ಬಯಸುತ್ತಾರೆ. 

ಮಗಳ ವಿಶೇಷ ದಿನಕ್ಕಾಗಿ ನಟ ಸುನೀಲ್ ಶೆಟ್ಟಿ ಈಗಾಗಲೇ ಬೆಸ್ಟ್ ಹೋಟೆಲ್‌ಗಳು, ಕ್ಯಾಟರರ್‌ಗಳು ಮತ್ತು ಡಿಸೈನರ್‌ಗಳನ್ನು ಬುಕ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ವರದಿಗಳನ್ನು ನಂಬುವುದಾದರೆ, ಅಥಿಯಾ ಮತ್ತು ಕೆಎಲ್ ರಾಹುಲ್ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸುನೀಲ್ ಶೆಟ್ಟಿ ಅದ್ಧೂರಿ ಮದುವೆಗೆ ತಯಾರಿ ನಡೆಸುತ್ತಿದ್ದಾರೆ.

Bollywoodlife.com ವರದಿಗಳ ಪ್ರಕಾರ ಸುನೀಲ್ ಶೆಟ್ಟಿ ಮಗಳ ಮದುವೆ ಅದ್ಧೂರಿಯಾಗಿ ನಡೆಯಲಿದೆ. ಇದರಲ್ಲಿ ಬಾಲಿವುಡ್‌ಗೆ ಸಂಬಂಧಿಸಿದ ಎಲ್ಲಾ ಸೆಲೆಬ್ರಿಟಿಗಳನ್ನು ಕರೆಯಲಾಗುವುದು. ಇದರೊಂದಿಗೆ ಕ್ರಿಕೆಟ್ ಲೋಕಕ್ಕೆ ಸಂಬಂಧಿಸಿದ ತಾರೆಗಳೂ ಭಾಗಿಯಾಗಲಿದ್ದಾರೆ.

Tap to resize

ಜುಹುದಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ ಅಥಿಯಾ ಶೆಟ್ಟಿ  ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ವಿವಾಹ ಕಾರ್ಯಕ್ರಮಗಳು ನಡೆಯಲಿವೆ. ನಟ ತನ್ನ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕೆಂದು ಬಯಸುತ್ತಾರೆ ಎಂದು ವರದಿಯಲ್ಲಿ ಹೇಳಿದೆ.

ಸುನೀಲ್ ಶೆಟ್ಟಿ ಅವರು ತಮ್ಮ ಮಗಳು ಮತ್ತು ಭಾವಿ ಅಳಿಯನಿಗೆ ಐಷಾರಾಮಿ ಫ್ಲಾಟ್ ಖರೀದಿಸಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ ಮತ್ತು ಮನೆಯ  ದುರಸ್ತಿ ಕಾರ್ಯ ನಡೆಯುತ್ತಿದೆ. ಮದುವೆಯ ನಂತರ ಇಬ್ಬರೂ ಒಂದೇ ಜಾಗಕ್ಕೆ ಶಿಫ್ಟ್ ಆಗುತ್ತಾರೆ. 

ಇದರೊಂದಿಗೆ ಅಥಿಯಾ ಮತ್ತು ಕೆಎಲ್ ರಾಹುಲ್ ಸದ್ಯಕ್ಕೆ ಲೈವ್-ಇನ್ ರಿಲೆಷನ್‌ಶಿಪ್‌ನಲ್ಲಿ ಇರಲಿದ್ದಾರೆ ಎಂಬ ಮತ್ತೊಂದು ಸುದ್ದಿ ಬರುತ್ತಿದೆ. ಅವರು ಆಲಿಯಾ ಮತ್ತು ರಣಬೀರ್ ಕಪೂರ್ ಅವರ ವಾಸ್ತು ಅಪಾರ್ಟ್‌ಮೆಂಟ್ ಪಕ್ಕದಲ್ಲಿ ಫ್ಲಾಟ್ ಅನ್ನು ಬಾಡಿಗೆಗೆ ಪಡೆದಿದ್ದಾರೆ. ಇದರ ಬಾಡಿಗೆ ಪ್ರತಿ ತಿಂಗಳು 10 ಲಕ್ಷ ರೂಪಾಯಿಗಳು.
 

ಅಥಿಯಾ ಮತ್ತು ಕೆಎಲ್ ರಾಹುಲ್ ಕಳೆದ 3 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಅಹಾನ್ ಶೆಟ್ಟಿ ಅವರ ಚೊಚ್ಚಲ ಚಿತ್ರ 'ತಡಪ್' ನ ಪ್ರಥಮ ಪ್ರದರ್ಶನದಲ್ಲಿ ಒಟ್ಟಿಗೆ ಬರುವ ಮೂಲಕ ಅವರು ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು. ಅಹಾನ್ ಅಥಿಯಾ ಶೆಟ್ಟಿಯ ಸಹೋದರ.

Latest Videos

click me!