Sussanne Khan ಮಗನ ಬರ್ತ್‌ಡೇ ಪೋಸ್ಟ್‌ಗೆ ಬಾಯ್‌ಫ್ರೆಂಡ್ Arslan Goniಯಿಂದ ಪ್ರತಿಕ್ರಿಯೆ
First Published | May 3, 2022, 6:05 PM ISTಹೃತಿಕ್ ರೋಷನ್ (Hrithik Roshan) ಅವರ ಪತ್ನಿ ಸುಸ್ಸೇನ್ ಖಾನ್ (Sussanne Khan) ಅವರಿಂದ ಬೇರ್ಪಟ್ಟು ವರ್ಷಗಳೇ ಕಳೆದಿವೆ, ಆದರೆ ಮಕ್ಕಳ ಸಂತೋಷ ಮತ್ತು ಅವರೊಂದಿಗೆ ಸೆಲೆಬ್ರೆಟ್ ಮಾಡುವ ಅವಕಾಶ ಬಂದಾಗ ಇಬ್ಬರೂ ಒಟ್ಟಿಗೆ ನಿಲ್ಲುತ್ತಾರೆ. ಭಾನುವಾರವೂ ಅದೇ ಘಟನೆ ನಡೆದಿದೆ. ವಾಸ್ತವವಾಗಿ, ಹೃತಿಕ್ ಅವರ ಮಗ ಹೃದನ್ ರೋಷನ್ 14 ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರ ಮಗನ ಹುಟ್ಟುಹಬ್ಬದ ಸಂದರ್ಭದಲ್ಲಿ, ಸುಸ್ಸಾನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹೃದನ್‌ನ ಹಲವಾರು ಬಾಲ್ಯದ ಫೋಟೋಗಳ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ಅವರಿಗೆ ಶುಭ ಹಾರೈಸಿದ್ದರು.