Bhumi Padnekar stunning look: ದಂಗಾದರು ಫ್ಯಾನ್ಸ್

Published : Nov 09, 2021, 05:02 PM ISTUpdated : Nov 09, 2021, 05:10 PM IST

ಬಾಲಿವುಡ್‌ನ (Bollywood) ಲೆಜೆಂಡ್‌  ಶ್ರೀದೇವಿ (Sridevi) ಅವರ ಕಿರಿಯ ಮಗಳು ಖುಷಿ ಕಪೂರ್ (Khushi kapoor)  ನವೆಂಬರ್ 5 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಖುಷಿ ಕಪೂರ್‌ 21ನೇ ಬರ್ತ್‌ಡೇಗೆ  ಗ್ರ್ಯಾಂಡ್ ಪಾರ್ಟಿ ಆಯೋಜಿಸಿದ್ದರು . ಇದರಲ್ಲಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಅನೇಕ ಸ್ಟಾರ್‌ಕಿಡ್‌ಗಳು ಭಾಗವಹಿಸಿದ್ದರು.  ನಟಿ ಭೂಮಿ ಪೆಡ್ನೇಕರ್ ( Bhumi Pednekar)ಸಖತ್‌ ಬೋಲ್ಡ್ ಸ್ಟೈಲ್ ನಲ್ಲಿ ಪಾರ್ಟಿಗೆ ಆಗಮಿಸಿದ್ದರು. ಖುಷಿ ಕಪೂರ್‌ ಬರ್ತ್‌ಡೇ ಪಾರ್ಟಿಯ ಕೆಲವು ಫೊಟೋ ಇಲ್ಲಿವೆ.  

PREV
19
Bhumi Padnekar stunning look: ದಂಗಾದರು ಫ್ಯಾನ್ಸ್

ಖುಷಿ ಕಪೂರ್‌ ಅವರ ಬರ್ತ್‌ಡೇ ಪಾರ್ಟಿಯಲ್ಲಿ ಅನೇಕ ಸ್ಟಾರ್ ಕಿಡ್‌ಗಳು ಭಾಗವಹಿಸಿದ್ದರು. ಆದರೆ, ಅಕ್ಕ ಜಾನ್ವಿ ಕಪೂರ್ (janhvi kapoor)ಈ ಪಾರ್ಟಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಯಾರಾರು ಖುಷಿ ಬರ್ತ್‌ಡೇ ಪಾರ್ಟಿಯಲ್ಲಿ ಹಾಜರಾಗಿದ್ದರು ಗೊತ್ತಾ?
 

29

ತಮ್ಮ ಬರ್ತ್‌ಡೇ ಪಾರ್ಟಿಯಲ್ಲಿ ಸ್ವತಃ ಖುಷಿ ಕಪೂರ್‌ ಸಖತ್‌ ಬೋಲ್ಡ್‌  ಔಟ್‌ಫಿಟ್‌ ಧರಿಸಿದ್ದರು ಮತ್ತು ತುಂಬಾ  ಸುಂದರವಾಗಿ ಕಾಣಿಸುತ್ತಿದ್ದರು. ಗೋಲ್ಡನ್ ಡ್ರೆಸ್ ಧರಿಸಿದ್ದ ಖುಷಿ ಕಪೂರ್‌ ಸ್ಟೈಲ್‌ ಎಲ್ಲರ ಗಮನ ಸೆಳೆಯಿತು. 

39

ಈ ಪಾರ್ಟಿಯಲ್ಲಿ  ಪಾಲ್ಗೊಳ್ಳಲು ಸ್ಟೈಲಿಶ್ ಆಗಿ ನಟಿ ಭೂಮಿ ಪೆಡ್ನಕರ್ ಆಗಮಿಸಿದ್ದರು. ಸಖತ್‌ ಬೋಲ್ಡ್‌ ಅವತಾರದಲ್ಲಿ ಎಂಟ್ರಿ ಕೊಟ್ಟ ಭೂಮಿ  ಪಾರ್ಟಿಯ ಕಳೆ ಇನ್ನಷ್ಟು ಹೆಚ್ಚಿಸಿದ್ದರು. ನೂಡಲ್-ಸ್ಟ್ರಾಪ್‌ ಟಾಪ್‌ ಧರಿಸಿದ್ದ  ಭೂಮಿ ಪೆಡ್ನಕರ್ ಅವರ ಸೆಕ್ಸಿ ಲುಕ್‌ ಸಖತ್‌ ವೈರಲ್‌ ಆಗಿದೆ.

49

ಖುಷಿ ಕಪೂರ್ ಅವರ ಸ್ಫೇಷಲ್‌ ಫ್ರೆಂಡ್‌ ಅಂಜನಿ ಧವನ್ ಈ ಪಾರ್ಟಿಯಲ್ಲಿ  ಭಾಗವಹಿಸಿದ್ದರು. ಈ ಸಮಯಲ್ಲಿ ವರುಣ್ ಧವನ್ ಅವರ  ಸಹೋದರ ಸೊಸೆ (niece) ಅಂಜನಿ ಧವನ್ ಗೋಲ್ಡನ್‌ ಕಲರ್‌ ಜಂಪ್‌ಸೂಟ್ ಧರಿಸಿದ್ದರು. ಈ ಉಡುಪಿನಲ್ಲಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದರು.


 

59

ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಂದರೆ  ಬಿಗ್‌ ಬಿ ಮಗಳು ಶ್ವೇತಾ ನಂದಾ ಅವರ ಮಗ ಆಗಸ್ತ್ಯ ನಂದಾ ಖುಷಿಯ ಫ್ರೆಂಡ್ಸ್‌ ಲಿಸ್ಟ್‌ನಲ್ಲಿ ಇದ್ದಾರೆ. ಅಗಸ್ತ್ಯ ನಂದಾ  ಕೂಡ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಮತ್ತು ನೀಲಿ ಬಣ್ಣದ ಶರ್ಟ್‌  ಧರಿಸಿದ್ದರು.  

69

ಖುಷಿಯ ಬರ್ತ್ ಡೇ ಪಾರ್ಟಿಯಲ್ಲಿ ಸಂಜಯ್‌ ಕಪೂರ್‌ ಪುತ್ರಿ ಶನಯಾ ಕಪೂರ್ ಕೂಡ ಕಾಣಿಸಿಕೊಂಡಿದ್ದಾರೆ. ಶನಯಾ ತನ್ನ ಕಸಿನ್‌ ಖುಷಿಗೆ ತುಂಬಾ ಕ್ಲೋಸ್‌ ಆಗಿದ್ದಾರೆ ಮತ್ತು ಉತ್ತಮ ಬಾಂಡಿಗ್‌ ಹಂಚಿಕೊಳ್ಳುವ ಇಬ್ಬರು  ಕಸಿನ್ಸ್‌ ಅನೇಕ ಕಡೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

79

ಸುನೀಲ್ ಶೆಟ್ಟಿ ಅವರ ಪುತ್ರ ಅಹಾನ್ ಶೆಟ್ಟಿ (Ahan Shetty)  ಕೂಡ ಪಾರ್ಟಿಗೆ ಆಗಮಿಸಿದ್ದರು. ಸದ್ಯದಲ್ಲೇ ತಡಪ್ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ. ತಡಪ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಜನರು ಅಹಾನ್ ಅವರನ್ನು ತುಂಬಾ ಹೊಗಳುತ್ತಿದ್ದಾರೆ.
 

89

ಮಗಳು ಖುಷಿ ಕಪೂರ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ತಂದೆ ಬೋನಿ ಕಪೂರ್ (Boney kapoor) ಕೂಡ ಭಾಗವಹಿಸಿದ್ದರು. ಎಲ್ಲಾ  ಸ್ಟಾರ್ ಕಿಡ್ಸ್ ಅವರನ್ನು ಭೇಟಿ ಮಾಡಿದ ಬೋನಿ ಕಪೂರ್‌ ಎಂದಿನಂತೆ ಸಿಂಪಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಬಿಳಿ ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿದ್ದರು.

99

ತಾನಿಯಾ ಶ್ರಾಫ್ (Tania Shroff)ಕೂಡ ಖುಷಿಯ ಪಾರ್ಟಿಗೆ ಬಂದರು. ತಾನಿಯಾ ಫ್ಯಾಷನ್ ಇನ್‌ಫ್ಲ್ಯೂಯೆನ್ಸರ್‌ ಮತ್ತು ಡ್ರೆಸ್‌ ಡಿಸೈನರ್‌. ತಾನಿಯಾ ಮತ್ತು ಅಹಾನ್ ಅವರ ಪ್ರಣಯದ ಕಥೆಗಳು ಬಾಲಿವುಡ್ ಕಾರಿಡಾರ್‌ಗಳಲ್ಲಿ ಸಖತ್‌ ಸುದ್ದಿಯಾಗಿದೆ. 

Read more Photos on
click me!

Recommended Stories