Samantha: ಕಷ್ಟದ ಸಮಯದಲ್ಲಿ ನಿಜ ಸ್ನೇಹಿತರು: ಫ್ರೆಂಡ್ಸ್ ಜೊತೆ ಫೋಟೊ ಶೇರ್ ಮಾಡಿದ ಸಮಂತಾ

Published : Nov 09, 2021, 03:26 PM ISTUpdated : Nov 09, 2021, 03:56 PM IST

Samantha: ನಿಜ ಸ್ನೇಹಿತರ ಬಗ್ಗೆ ಸೌತ್ ನಟಿಯ ಮಾತು ನಿಜ ಸ್ನೇಹಿತರು ಯಾರೆಂಬುದನ್ನು ರಿವೀಲ್ ಮಾಡಿದ ಕಷ್ಟಗಳು

PREV
17
Samantha: ಕಷ್ಟದ ಸಮಯದಲ್ಲಿ ನಿಜ ಸ್ನೇಹಿತರು: ಫ್ರೆಂಡ್ಸ್ ಜೊತೆ ಫೋಟೊ ಶೇರ್ ಮಾಡಿದ ಸಮಂತಾ

ನಟಿ ಸಮಂತಾ ರುತ್ ಪ್ರಭು(Samantha Ruth Prabhu) ಅವರು ಸೋಮವಾರ ತಮ್ಮ ಆತ್ಮೀಯ ಸ್ನೇಹಿತೆ ಮಂಜುಳಾ ಅನಾಗ ಅವರಿಗೆ ಹುಟ್ಟುಹಬ್ಬದಂದು ಶುಭ ಹಾರೈಕೆ ತಿಳಿಸಿದ್ದಾರೆ. Instagramನಲ್ಲಿ ನಟಿ ಆತ್ಮೀಯ ಸ್ನೇಹಿತೆ ಮಂಜುಳಾ ಅನಾಗನಿಗೆ ಅವರ ಜನ್ಮದಿನದಂದು ಶುಭ ಹಾರೈಸಿದ್ದಾರೆ.

 

27

ಕಷ್ಟದ ಸಮಯಗಳು ನಿಜವಾದ ಸ್ನೇಹಿತರನ್ನು(Friends) ಬಹಿರಂಗಪಡಿಸುತ್ತವೆ ಎಂದು ಅವರು ಬರೆದಿದ್ದಾರೆ. ಮಂಜುಳಾ ಅವರು ಎಷ್ಟು ಪ್ರೀತಿಸುತ್ತಿದ್ದಾರೆಂದು ತಿಳಿದಿದೆ ಎಂದು ಅವರು ಬರೆದಿದ್ದಾರೆ. ಅವರು ಕಷ್ಟದ ಸಮಯಗಳು ನಿಜವಾದ ಸ್ನೇಹಿತರನ್ನು ಬಹಿರಂಗಪಡಿಸುತ್ತವೆ ಎಂದಿದ್ದಾರೆ.

37

ಸಮಂತಾ ರುತ್ ಪ್ರಭು ಅವರು ಹುಟ್ಟುಹಬ್ಬದ ಮುನ್ನಾ ದಿನ ರಾತ್ರಿಯ ಡಿನ್ನರ್‌ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ, ಸಮಂತಾ ಕಪ್ಪು ಮತ್ತು ಬಿಳಿ ಪಟ್ಟಿಯ ಉಡುಪನ್ನು ಧರಿಸಿ ಪೋಸ್ ನೀಡಿದ್ದರು. ಚಿತ್ರ ನಿರ್ಮಾಪಕಿ ಬಿವಿ ನಂದಿನಿ ರೆಡ್ಡಿ ಮತ್ತು ನಟಿ ಮಾಳವಿಕಾ ನಾಯರ್ ಕೂಡ ಫೋಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

47

ಜನ್ಮದಿನದ ಶುಭಾಶಯಗಳು. ನಿಮ್ಮಂತಹ ಸ್ನೇಹಿತೆಯಪಡೆದಿರುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ. ಕಷ್ಟದ ಸಮಯಗಳು ನಿಜವಾದ ಸ್ನೇಹಿತರನ್ನು ಬಹಿರಂಗಪಡಿಸುತ್ತವೆ ಎಂದು ಅವರು ಹೇಳುತ್ತಾರೆ. ಜನ್ಮದಿನದ ಶುಭಾಶಯಗಳು ಎಂದಿದ್ದಾರೆ

57

ವರದಿಗಳ ಪ್ರಕಾರ, ನಂದಿನಿ ಮತ್ತು ಸಮಂತಾ ಹೊಸ ಯೋಜನೆಗಾಗಿ ಮತ್ತೆ ಒಂದಾಗುತ್ತಿದ್ದಾರೆ. ಅವರು ಈ ಹಿಂದೆ ಜಬರ್ದಸ್ತ್ ಮತ್ತು ಓಹ್! ತೆಲುಗು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

67

ನಾಗ ಚೈತನ್ಯ ಜೊತೆಗಿನ ಬೇರ್ಪಟ್ಟ ನಂತರ ಸಮಂತಾ ಪ್ರಯಾಣದಲ್ಲಿ ಬ್ಯುಸಿಯಾಗಿದ್ದಾರೆ. ಅವರು ಮೊದಲು ಋಷಿಕೇಶಕ್ಕೆ ಪ್ರಯಾಣ ಬೆಳೆಸಿದರು, ಅಲ್ಲಿ ಅವರು ಚಾರ್ ಧಾಮ್ ಯಾತ್ರೆಯ ಭಾಗವಾಗಿ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥಕ್ಕೆ ಭೇಟಿ ನೀಡಿದರು.

77

ಇತ್ತೀಚೆಗೆ ನಟಿ ತನ್ನ ತಂಡದೊಂದಿಗೆ ದುಬೈಗೂ ಪ್ರಯಾಣ ಬೆಳೆಸಿದ್ದರು. ಅವರು ತಮ್ಮ ಪ್ರವಾಸದ ಚಿತ್ರಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಬುರ್ಜ್ ಖಲೀಫಾ, ಅಲ್ಲಿ ಅವರು ಆನಂದಿಸಿದ ಆಹಾರ ಮತ್ತು ಅವರ ಹೋಟೆಲ್ ಕೊಠಡಿಯಿಂದ ಒಂದು ನೋಟವನ್ನು ಶೇರ್ ಮಾಡಿದ್ದಾರೆ.

Read more Photos on
click me!

Recommended Stories