ಅಕ್ರಮ ಸಂಬಂಧ ಇದೆ ಎಂದ ಪತ್ನಿ ಆರೋಪಕ್ಕೆ ಫಸ್ಟ್‌ ಟೈಮ್‌ ತಿರುಗೇಟು ಕೊಟ್ಟ Actor Ravi Mohan

Published : May 15, 2025, 04:34 PM ISTUpdated : May 15, 2025, 04:42 PM IST

ವಿಚ್ಛೇದನ ವಿವಾದದ ನಡುವೆ, ನಟ ರವಿ ಮೋಹನ್ ಅವರು ಗಾಯಕಿ ಕೆನಿಷಾ ಜೊತೆಗಿನ ಸಂಬಂಧವನ್ನು ಬಹಿರಂಗಪಡಿಸಿದ್ದಾರೆ ಮತ್ತು ಆರತಿಯ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.

PREV
14
ಅಕ್ರಮ ಸಂಬಂಧ ಇದೆ ಎಂದ ಪತ್ನಿ ಆರೋಪಕ್ಕೆ ಫಸ್ಟ್‌ ಟೈಮ್‌ ತಿರುಗೇಟು ಕೊಟ್ಟ Actor Ravi Mohan
ರವಿ ಮೋಹನ್ ಹೇಳಿಕೆ

ವರ್ಷಗಳಿಂದ ಮೋಸ ಹೋಗಿದ್ದೇನೆ. ಈಗ ನನ್ನ ಮೇಲೆ ಇನ್ನಷ್ಟು ದಾಳಿ ಆಗುತ್ತಿದೆ. ಕಷ್ಟಪಟ್ಟು ಜೀವನ ಕಟ್ಟಿಕೊಂಡಿದ್ದೇನೆ. ಹಳೆಯ ವಿಚಾರಗಳನ್ನಿಟ್ಟುಕೊಂಡು ಅನುಕಂಪ ಗಿಟ್ಟಿಸಿಕೊಳ್ಳಲು ಬಿಡಲ್ಲ. ಮಾನಸಿಕ, ದೈಹಿಕ, ಭಾವನಾತ್ಮಕವಾಗಿ ಹಿಂಸೆ ಅನುಭವಿಸಿದ್ದೇನೆ ಎಂದು ರವಿ ಮೋಹನ್‌ ಹೇಳಿದ್ದಾರೆ. 

24
ಹಣ ಮಾಡುವ ಯಂತ್ರದಂತೆ ನೋಡಿದ್ರು

ಹೆಂಡತಿಯಿಂದ ದೂರ ಆಗಿದ್ದೇನೆ, ಮಕ್ಕಳಿಂದ ಅಲ್ಲ. ಮಕ್ಕಳನ್ನ ಬಳಸಿಕೊಂಡು ಹಣ ಮಾಡಲು ನೋಡ್ತಿದ್ದಾರೆ. ಆರತಿ ಜೊತೆ ಜೀವನ ಮುಂದುವರಿಸಲು ಪ್ರಯತ್ನಿಸಿದೆ. ಆದರೆ ನನ್ನನ್ನು ಹಣ ಮಾಡುವ ಯಂತ್ರದಂತೆ ನೋಡಿದ್ರು. ಗಂಡನಾಗಿ ಗೌರವ ಕೊಡಲಿಲ್ಲ. ಮಕ್ಕಳನ್ನ ನೋಡಲು ಬಿಡುತ್ತಿಲ್ಲ. 5 ವರ್ಷದಿಂದ ನನ್ನ ದುಡಿಮೆಯನ್ನೆಲ್ಲಾ ಆರತಿ ಮತ್ತು ಅವರ ಕುಟುಂಬ ಉಪಯೋಗಿಸಿಕೊಂಡಿದೆ ಎಂದು ರವಿ ಮೋಹನ್‌ ಹೇಳಿದ್ದಾರೆ.

34
ವಿಚ್ಛೇದನದಿಂದ ಖುಷಿಯಾಗಿದ್ದೇನೆ

ಇಷ್ಟು ದಿನ ಸುಮ್ಮನಿದ್ದೆ. ಆದರೆ ನನ್ನ ತಾಳ್ಮೆಗೂ ಒಂದು ಮಿತಿ ಇದೆ. ನನ್ನ ನೋವನ್ನ ಅರ್ಥ ಮಾಡಿಕೊಳ್ಳದೆ ನನ್ನ ಮೇಲೆ ಆರೋಪ ಮಾಡ್ತಿದ್ದಾರೆ. ಈಗ ತೆಗೆದುಕೊಂಡಿರುವ ನಿರ್ಧಾರದಿಂದ ಖುಷಿಯಾಗಿದ್ದೇನೆ. ನನ್ನ ಮಕ್ಕಳು ನನ್ನ ಹೆಮ್ಮೆ, ಅವರಿಗಾಗಿ ಎಲ್ಲವನ್ನೂ ಮಾಡ್ತೇನೆ. 16 ವರ್ಷದ ದುಃಖದ ಜೀವನಕ್ಕಿಂತ ಈಗಿನ ನೋವು ದೊಡ್ಡದಲ್ಲ ಎಂದು ರವಿ ಮೋಹನ್‌ ಹೇಳಿದ್ದಾರೆ. 

44
ಕೆನಿಷಾ ನನ್ನ ಜೀವನದ ಬೆಳಕು

ನನ್ನ ಜೀವನಕ್ಕೆ ಬೆಳಕು ತಂದವರು ಕೆನಿಷಾ. ಮನೆಯಿಂದ ಏನೂ ಇಲ್ಲದೆ ಹೊರ ಬಂದಾಗ ನನಗೆ ಜೊತೆಯಾಗಿದ್ದವರು ಕೆನಿಷಾ. ನನ್ನ ಜೀವನದ ಸುಂದರ ಸಂಗಾತಿ. ನಾನು ಎದುರಿಸಿದ ಕಾನೂನು, ಭಾವನಾತ್ಮಕ, ಆರ್ಥಿಕ ಸಮಸ್ಯೆಗಳಲ್ಲಿ ನನ್ನ ಜೊತೆಗಿದ್ದರು. ನನ್ನ ಕಷ್ಟ ಕೇಳಿ, ಮನಃಶಾಸ್ತ್ರಜ್ಞೆಯಾಗಿ ಮತ್ತು ಗೆಳತಿಯಾಗಿ ನನಗೆ ಸಹಾಯ ಮಾಡಿದರು ಎಂದು ರವಿ ಮೋಹನ್‌ ಹೇಳಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories