ಅಪ್ಪನಿಗೆ 5 ಮದುವೆ, ಮಗಳಿಗೆ 3 ಮದುವೆ; ಆದರೂ ದಕ್ಷಿಣ ಭಾರತದಲ್ಲಿ ಭಾರೀ ಫೇಮಸ್ ನಟಿ ಈಕೆ!

Published : May 15, 2025, 12:31 PM IST

ಬಣ್ಣದ ಕ್ಷೇತ್ರವಾಗಿರುವ ಚಿತ್ರರಂಗದಲ್ಲಿ ಪ್ರೀತಿ ಪ್ರೇಮ, ಮದುವೆ, ವಿಚ್ಛೇದನ ಸಾಮಾನ್ಯ. ಆದರೆ ಕೆಲವೊಬ್ಬ ನಟ-ನಟಿಯರ ಜೀವನ ಕಥೆಗಳು ಯಾವಾಗಲೂ ಜನರಲ್ಲಿ ಕುತೂಹಲ ಮೂಡಿಸುತ್ತವೆ. ಆದರೆ, ಈ ದಕ್ಷಿಣ ಭಾರತದ ಪ್ರಸಿದ್ಧ ನಟಿಗೆ 3 ಮದುವೆ, ಆಕೆಯ ತಂದೆ 5 ಮದುವೆ ಆಗಿದ್ದಾರೆ. ಇವರು ಯಾರು?

PREV
15
ಅಪ್ಪನಿಗೆ 5 ಮದುವೆ, ಮಗಳಿಗೆ 3 ಮದುವೆ; ಆದರೂ ದಕ್ಷಿಣ ಭಾರತದಲ್ಲಿ ಭಾರೀ ಫೇಮಸ್ ನಟಿ ಈಕೆ!

ಸಾಮಾನ್ಯವಾಗಿ ಚಿತ್ರರಂಗದಲ್ಲಿ ಇರುವವರ ಬದುಕು ಕೂಡ ಬಣ್ಣದ ಲೋಕದಂತೆ ಅನೇಕ ತಿರುವುಗಳನ್ನು ಹೊಂದಿರುತ್ತದೆ. ಕೆ;ವೊಬ್ಬರ ಜೀವನ ಸಿನಿಮಾ ಸ್ಟೋರಿಗಿಂತಲೂ ಹೆಚ್ಚು ಟ್ವಿಸ್ಟ್ ಹೊಂದಿರುತ್ತದೆ. ಅದೇ ರೀತಿ ದಕ್ಷಿಣ ಭಾರತದ ಪ್ರಸಿದ್ಧ ನಟಿಯೊಬ್ಬರು ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಭಾರೀ ಫೇಮಸ್ ಆಗಿದ್ದಾರೆ. ಈ ನಟಿ ಸಿನಿಮಾ ನಟನೆಯ ಜೊತೆಗೆ ಮೂರು ಮದುವೆ ಮಾಡಿಕೊಂಡಿದ್ದಾರೆ. ಆದರೆ, ಇವರ ತಂದೆ 5 ಮದುವೆ ಮಾಡಿಕೊಂಡಿದ್ದಾರೆ. ಹಾಗಾದರೆ, ಆ ನಟಿ ಯಾರು? ಅವರ ಅಪ್ಪನಾರು ಎಂಬ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..

25

ಮೂರು ಮದುವೆ ಮಾಡಿಕೊಂಡಿದ್ದ ದಕ್ಷಿಣ ಭಾರತದ ಪ್ರಸಿದ್ಧ ನಟಿ ಬೇರಾರೂ ಅಲ್ಲ, ನಮ್ಮ ನಿಮ್ಮೆಲ್ಲರಿಗೂ ಪರಿಚಿತವಾಗಿರುವ ರಾಧಿಕಾ ಶರತ್‌ಕುಮಾರ್. 

ರಾಧಿಕಾ ಅವರ ಮೊದಲ ಮದುವೆ ಪ್ರತಾಪ್ ಪೋತೆನ್ ಜೊತೆ ಆಗಿತ್ತು. ನಂತರ ಅವರಿಂದ ವಿಚ್ಛೇದನವನ್ನು ಪಡೆದುಕೊಂಡರು. ಬಳಿಕ ರಿಚರ್ಡ್ ಹಾರ್ಡಿ ಜೊತೆ ಎರಡನೇ ಮದುವೆ ಮಾಡಿಕೊಂಡರೂ, ಸುಖ ಸಂಸಾರ ನಡೆಸಲು ಸಾಧ್ಯವಾಗದೇ ಅವರೊಂದಿಗಿನ ವೈವಾಹಿಕ ಜೀವನವೂ ವಿಫಲವಾಯಿತು. ನಂತರ ಶರತ್ ಕುಮಾರ್ ಜೊತೆ ಮೂರನೇ ಮದುವೆ ಮಾಡಿಕೊಂಡಿದ್ದಾರೆ. ಆದರೆ, ಶರತ್‌ ಅವರಿಗೆ ರಾಧಿಕಾ ಅವರು 2ನೇ ಹೆಂಡತಿ ಆಗಿದ್ದಾರೆ.

35

ಇನ್ನು ನಟಿ ರಾಧಿಕಾ ಶರತ್ ಕುಮಾರ್ ಅವರ ತಂದೆ 5 ಮದುವೆಯಾಗಿದ್ದಾರೆ ಎಂಬ ವಿಚಾರಕ್ಕೆ ಬಂದ, ಅದು ಸತ್ಯ ಎಂಬುದು ಬಹಿರಂಗವಾಗಿದೆ. ಕಾರಣ ರಾಧಿಕಾ ಅವರ ತಂದೆ ಎಂ.ಆರ್. ರಾಧ ಅವರು ಕೂಡ ಪ್ರಸಿದ್ಧ ತಮಿಳು ನಟನಾಗಿದ್ದರು. ಇವರು 5 ಮದುವೆ ಮಾಡಿಕೊಂಡಿದ್ದು, 12 ಮಕ್ಕಳು ಇದ್ದರು. ನಟ ರಾಧ ಅವರ ಶ್ರೀಲಂಕಾ ಹೆಂಡತಿ ಗೀತಾಗೆ ಜನಿಸಿದವರೇ ಈ ರಾಧಿಕಾ. ಇನ್ನು ರಾಧಿಕಾ ಅವರಿಗೆ ನಿರೋಷ ಎಂಬ ತಂಗಿ ಕೂಡ ಇದ್ದಾರೆ.

45

ದಕ್ಷಿಣ ಭಾರತ ಚಿತ್ರರಂಗದಲ್ಲಿ 1980-90ರ ದಶಕದಲ್ಲಿ ಪ್ರಸಿದ್ಧ ನಟಿಯಾಗಿ ಮಿಂಚಿದ ರಾಧಿಕಾ ಒಂದು ಅವಧಿಯಲ್ಲಿ ಉತ್ತುಂಗದ ಶಿಖರ ತಲುಪಿದ್ದರು. ಇದೀಗ ವಯಸ್ಸಾಗುತ್ತಿದ್ದಂತೆ ನಟನೆಯನ್ನು ಬಿಡದೇ ಕಿರುತೆರೆಗೆ ಬಂದಿದ್ದಾರೆ. ಹಲವು ಧಾರಾವಾಹಿಗಳನ್ನು ಉತ್ತಮವಾಗಿ ತಾಯಿ ಪಾತ್ರಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ.

55

ಸಿನಿಮಾ, ವೈಯಕ್ತಿಕ ಜೀವನದಲ್ಲೂ ಹಲವು ಏರಿಳಿತ ಕಂಡ ರಾಧಿಕಾ. ಈಗ ಆಕೆಯ ವೈಯಕ್ತಿಕ ಜೀವನ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಲ್ಲಿದೆ.

click me!

Recommended Stories