ಮದುವೆ ಸಮಾರಂಭದಲ್ಲಿ ಕತ್ರಿನಾ ಮಿಂಚಿಂಗ್‌: ಫೋಟೋ ವೈರಲ್‌

Published : Nov 29, 2022, 12:14 PM IST

ಕತ್ರಿನಾ ಕೈಫ್ (Katrina Kaif) ಅವರು ಇತ್ತೀಚೆಗೆ ರಾಜಸ್ಥಾನದ ಜೋಧ್‌ಪುರದಲ್ಲಿ ನಡೆದ ಮದುವೆಯಲ್ಲಿ ಭಾಗವಹಿಸಿದ್ದರು ಮತ್ತು ಸಮಾರಂಭದ ಅವರ ಫೋಟೋ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ.  ಆದರಲ್ಲಿ ಅವರು  ಫ್ಯಾಷನ್ ಡಿಸೈನರ್ ಪಂಕಜ್ ಜೋಹರ್ ಜೊತೆ ಕಾಣಿಸಿಕೊಂಡಿದ್ದಾರೆ.

PREV
16
ಮದುವೆ ಸಮಾರಂಭದಲ್ಲಿ ಕತ್ರಿನಾ ಮಿಂಚಿಂಗ್‌: ಫೋಟೋ ವೈರಲ್‌

ಕತ್ರಿನಾ ಕೈಫ್ ಭಾನುವಾರ ರಾಜಸ್ಥಾನದ ಜೋಧ್‌ಪುರದಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ಸಮಯದ ಪೋಟೋವನ್ನು ಫ್ಯಾಷನ್ ಡಿಸೈನರ್ ಪಂಕಜ್ ಜೋಹರ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

26

ಕತ್ರಿನಾ ಕೈಫ್ ಬೆಳ್ಳಿಯ ಬೂದು ಬಣ್ಣದ ಸೀರೆ ಧರಿಸಿದ್ದು ಅದರ ಜೊತೆ ಸ್ಟೈಲಿಶ್‌ ಬ್ಲೌಸ್‌ ಪೇರ್‌ ಮಾಡಿಕೊಂಡಿದ್ದಾರೆ ಮತ್ತು ಮಿನಿಮಮ್ ಮೇಕಪ್ ಧರಿಸಿದ್ದಾರೆ. ಫ್ಯಾಷನ್ ಡಿಸೈನರ್ ಪಂಕಜ್ ಜೋಹರ್ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

36

ಕತ್ರಿನಾರ ಫೋಟೋ ಸಖತ್‌  ವೈರಲ್‌ ಆಗಿದ್ದು, ನಟಿಯ ಅಭಿಮಾನಿಗಳು ಕಾಮೆಂಟ್ ವಿಭಾಗವನ್ನು ಹೃದಯ ಮತ್ತು  ಬೆಂಕಿಯ ಎಮೋಜಿಗಳಿಂದ  ತುಂಬಿದ್ದಾರೆ.

46

ಕತ್ರಿನಾ ಕೈಫ್ ತನ್ನ ಇನ್‌ಸ್ಟಾಗ್ರಾಮ್  ಹ್ಯಾಂಡಲ್‌ನಲ್ಲಿ ಇದೇ ಸೀರೆ ಲುಕ್‌ನ ಕೆಲವು ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳನ್ನು ಹಂಚಿಕೊಂಡ ಅವರು,'ಆಜ್ ಕಾ ದಿನ್' ಎಂದು ಕ್ಯಾಪ್ಷನ್‌ ನೀಡಿದ್ದಾರೆ.

56

ಕತ್ರಿನಾ ಕೈಫ್ ಕೊನೆಯದಾಗಿ ಸಿದ್ಧಾಂತ್ ಚತುರ್ವೇದಿ ಮತ್ತು ಇಶಾನ್ ಖಟ್ಟರ್ ಅವರೊಂದಿಗೆ ಫೋನ್ ಭೂತ್‌ನಲ್ಲಿ ಕಾಣಿಸಿಕೊಂಡರು. ಮುಂದೆ, ಅವರು ವಿಜಯ್ ಸೇತುಪತಿಯೊಂದಿಗೆ ಮೆರ್ರಿ ಕ್ರಿಸ್‌ಮಸ್ ಮತ್ತು ಸಲ್ಮಾನ್ ಖಾನ್ ಜೊತೆ ಟೈಗರ್ 3 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎರಡೂ ಚಿತ್ರಗಳು ಮುಂದಿನ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ.

66

 ಅಲ್ಲದೆ, ನಟಿ ಆಲಿಯಾ ಭಟ್ ಮತ್ತು ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಫರ್ಹಾನ್ ಅಖ್ತರ್ ಅವರ ಜೀ ಲೇ ಜರಾ ಸಿನಿಮಾವನ್ನು ಹೊಂದಿದ್ದಾರೆ. ಆದರೆ, ಚಿತ್ರದ ಬಿಡುಗಡೆ ದಿನಾಂಕವನ್ನು ನಿರ್ಮಾಪಕರು ಇನ್ನೂ ಪ್ರಕಟಿಸಿಲ್ಲ.

Read more Photos on
click me!

Recommended Stories