ದಕ್ಷಿಣ ಭಾರತದಿಂದ ಬಾಲಿವುಡ್‌ನತ್ತ ಮುಖ ಮಾಡಿದ ನಟಿ ಶ್ರಿಯಾ ಸರನ್ ( Shriya Saran ) ಅವರ 11 ನೇ ಹಿಂದಿ ಚಿತ್ರವು ದೃಶಂ 2(Drishyam 2) ಬಾಕ್ಸ್ ಆಫೀಸ್‌ನಲ್ಲಿ ಹವಾ ಸೃಷ್ಟಿಅಸಿದೆ. ಮೊದಲ ವಾರದಲ್ಲಿಯೇ ಸೂಪರ್ ಹಿಟ್ ಆದ ಈ ಚಿತ್ರ ಇದುವರೆಗೆ ಸುಮಾರು 126 ಕೋಟಿ ರೂಪಾಯಿ ಗಳಿಸಿದೆ. ಚಿತ್ರದಲ್ಲಿ ಅಜಯ್ ದೇವಗನ್ (Ajay Devgn) ನಾಯಕನಾಗಿ ನಟಿಸಿದ್ದಾರೆ ಮತ್ತು ಟಬು, ಅಕ್ಷಯ್ ಖನ್ನಾ, ರಜತ್ ಕಪೂರ್, ಇಶಿತಾ ದತ್ತಾ ಮತ್ತು ಮೃಣಾಲ್ ಜಾಧವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಜಯ್ ಜೊತೆ ಶ್ರಿಯಾಗೆ ಇದು ಎರಡನೇ ಚಿತ್ರವಾಗಿದ್ದು, ಎರಡೂ ಚಿತ್ರಗಳು ಯಶಸ್ವಿಯಾಗಿರುವುದು ವಿಶೇಷ. ಕುತೂಹಲಕಾರಿ ವಿಷಯವೆಂದರೆ ಶ್ರಿಯಾ ಅವರ ಬಾಲಿವುಡ್ ವೃತ್ತಿಜೀವನವು ಅಜಯ್ ದೇವಗನ್ ಆಧಾರದ ಮೇಲೆ ಮಾತ್ರ ನಡೆಯುತ್ತಿದೆ. ಏಕೆಂದರೆ ಅಜಯ್ ಹೊರತುಪಡಿಸಿ, ಅವರು ಕೆಲಸ ಮಾಡಿದ ಎಲ್ಲಾ ಬಾಲಿವುಡ್ ಚಿತ್ರಗಳಲ್ಲಿ, ಅವರ ಚೊಚ್ಚಲ ಚಿತ್ರವೊಂದನ್ನು ಬಿಟ್ಟು , ಉಳಿದವು ಫ್ಲಾಪ್ ಆಗಿವೆ. ಶ್ರಿಯಾ ಸರನ್ ಅವರ ಬಾಲಿವುಡ್ ಚಿತ್ರಗಳ ಬಾಕ್ಸ್ ಆಫೀಸ್ ರೆಕಾರ್ಡ್ ಇಲ್ಲಿದೆ.
2003 ರಲ್ಲಿ ರಿತೇಶ್ ದೇಶಮುಖ್ ಮತ್ತು ಜೆನಿಲಿಯಾ ಡಿಸೋಜಾ ನಟಿಸಿದ ತುಜೆ ಮೇರಿ ಕಸಮ್ ಚಿತ್ರದಲ್ಲಿ ಶ್ರಿಯಾ ಸರನ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಚಿತ್ರ 8.92 ಕೋಟಿ ಗಳಿಸಿ ಹಿಟ್ ಆಗಿತ್ತು.
210
2004 ರಲ್ಲಿ, ಶ್ರಿಯಾ ಸರನ್ 'ಥೋಡಾ ತುಮ್ ಬದ್ಲೋ ಥೋಡ ಹಮ್' ಚಿತ್ರದಲ್ಲಿ ಕಾಣಿಸಿಕೊಂಡರು. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಕೇವಲ 40.25 ಲಕ್ಷ ಕಲೆಕ್ಷನ್ ಮಾಡಿ, ದೊಡ್ಡ ದುರಂತ ಎಂದು ಸಾಬೀತಾಯಿತು.
310
ಅದೇ ರೀತಿ 2006ರಲ್ಲಿ ಶ್ರಿಯಾ ‘ಬಾಬುಲ್’ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ಫ್ಲಾಪ್ ಆಗಿತ್ತು. ಚಿತ್ರ ಸುಮಾರು 17.31 ಕೋಟಿ ರೂ ಮಾತ್ರ ಗಳಿಸಲು ಸಾಧ್ಯವಾಯಿತು.
410
2009 ರಲ್ಲಿ ಬಿಡುಗಡೆಯಾದ Ek: The Power of One ನಲ್ಲಿ ಶ್ರಿಯಾ ಸರನ್ ಕಾಣಿಸಿಕೊಂಡರು, ಇದು ಕೇವಲ 6.30 ಕೋಟಿ ರೂಪಾಯಿಗಳನ್ನು ಗಳಿಸಿ ಅವರ ಕೆರಿಯರ್‌ನ ಮತ್ತೊಂದು ಡಿಸಾಸ್ಟರ್ ಸಿನಿಮಾ ಎಂದು ಸಾಬೀತಾಯಿತು.
510
2010 ರಲ್ಲಿ, ಶ್ರಿಯಾ ಮತ್ತೊಮ್ಮೆ ದುರಂತ ಚಿತ್ರ 'ಕುಚ್ ಕರಿಯೇ' ನಲ್ಲಿ ಕಾಣಿಸಿಕೊಂಡರು. ಇದು ಬಾಕ್ಸ್ ಆಫೀಸ್‌ನಲ್ಲಿ ಕೇವಲ 4.75 ಲಕ್ಷ ರೂ ಕಲೆಕ್ಷನ್ ಮಾಡಿತ್ತು.
610
ಅದೇ ಸಮಯದಲ್ಲಿ, 2013 ರಲ್ಲಿ, ಶ್ರಿಯಾ ಅವರು ನಟಿಸಿದ 'ಜಿಲಾ ಗಾಜಿಯಾಬಾದ್' ಚಿತ್ರವು ಫ್ಲಾಪ್ ಎಂದು ಸಾಬೀತಾಯಿತು. ಇದು ಬಾಕ್ಸ್ ಆಫೀಸ್‌ನಲ್ಲಿ ಸುಮಾರು 15.65 ಕೋಟಿ ರೂ ಮಾತ್ರ ಗಳಿಕೆ ಮಾಡಿತ್ತು
710
ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ 12 ವರ್ಷಗಳ ನಂತರ, ಶ್ರಿಯಾ ಸರನ್ ಮತ್ತೊಮ್ಮೆ ಯಶಸ್ಸನ್ನು ಕಂಡರು ಮತ್ತು ಅದಕ್ಕೆ ಅಜಯ್ ದೇವಗನ್ ಕಾರಣರಾಗಿದ್ದಾರೆ.
810
2015 ರಲ್ಲಿ, ಅವರ ಚಿತ್ರ 'ದೃಶ್ಯಂ' ಗಲ್ಲಾಪೆಟ್ಟಿಗೆಯಲ್ಲಿ ಸರಾಸರಿ ಪ್ರದರ್ಶನ ನೀಡಿತು. ಸುಮಾರು 68.66 ಕೋಟಿ ಗಳಿಸಿತ್ತು
910
2018 ರಲ್ಲಿ, ಶ್ರಿಯಾ ಸರನ್ 'ಫೇಮಸ್' ಚಿತ್ರದಲ್ಲಿ ಕಾಣಿಸಿಕೊಂಡರು, ಇದು ಬಾಕ್ಸ್ ಆಫೀಸ್‌ನಲ್ಲಿ ಸುಮಾರು 33.75 ಲಕ್ಷ ರೂಪಾಯಿಗಳನ್ನು ಗಳಿಸಿತು ಮತ್ತು ಚಿತ್ರವು ದುರಂತ ಎಂದು ಸಾಬೀತಾಯಿತು.
1010
2020 ರಲ್ಲಿ, ಶ್ರಿಯಾ ಮತ್ತೊಂದು ಫ್ಲಾಪ್ ಸಿನಿಮಾ ನೀಡಿದರು. ಅವರು ಅಕ್ಷಯ್ ಖನ್ನಾ ಅಭಿನಯದ 'ಸಬ್ ಕುಶಾಲ್ ಮಂಗಲ್' ಚಿತ್ರದಲ್ಲಿ ಕಾಣಿಸಿಕೊಂಡರು, ಇದು ಬಾಕ್ಸ್ ಆಫೀಸ್‌ನಲ್ಲಿ ಸುಮಾರು ಕೇವಲ 59 ಲಕ್ಷ ರೂಪಾಯಿಗಳನ್ನು ಗಳಿಸಿತು