ಬೋಲ್ಡ್‌ ಪೋಟೋ ಶೇರ್‌ ಮಾಡಿಕೊಂಡ Katrina Kaif ; Swimsuitನಲ್ಲಿ ನಟಿ!

First Published | Apr 8, 2022, 5:24 PM IST

ಕತ್ರಿನಾ ಕೈಫ್ (Katrina kaif)  ಅವರನ್ನು ದೊಡ್ಡ ಪರದೆಯ ಮೇಲೆ ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅವರು ಸಲ್ಮಾನ್ ಖಾನ್ ಜೊತೆ 'ಟೈಗರ್ 3' ಚಿತ್ರದಲ್ಲಿ
ಕಾಣಿಸಿಕೊಳ್ಳಲಿದ್ದಾರೆ. ಆದರೆ, ಈ ಸಿನಿಮಾ ರಿಲೀಸ್‌ಗೆ ಇನ್ನೂ ಕೆಲವೇ ದಿನಗಳು ಬಾಕಿ ಇವೆ. ಕತ್ರಿನಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಪ್ರತಿದಿನ ತಮ್ಮ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿರುತ್ತಾರೆ ಕತ್ರಿನಾ ಅವರ ಇತ್ತೀಚಿನ ಬೋಲ್ಡ್‌ ಪೋಟೋಗಳು ಇಲ್ಲಿವೆ.

ಇತ್ತೀಚೆಗೆ, ಕತ್ರಿನಾ ಕೈಫ್ ತನ್ನ ಪತಿ ವಿಕ್ಕಿ ಕೌಶಲ್ ಅವರೊಂದಿಗೆ ಹಾಲಿಡೇ ಮುಗಿಸಿ ಮರಳಿದ್ದಾರೆ. ದಂಪತಿಗಳು ಸಮುದ್ರ ತೀರದಲ್ಲಿ ಸಾಕಷ್ಟು ಎಂಜಾಯ್‌  ಮಾಡಿದರು ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನುಹಂಚಿಕೊಂಡಿದ್ದಾರೆ.

ಕತ್ರಿನಾ ಕೈಫ್‌ ಅವರು ಇನ್ಸ್ಟಾಗ್ರಾಮ್‌ನಲ್ಲಿ ತಮ್ಮಹಾಲಿಡೇಯ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಸಖತ್‌ ಬೋಲ್ಡ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

Tap to resize

ಕಪ್ಪು ಮೊನೊಕಿನಿ ಬಿಕಿನಿ ಧರಿಸಿರುವ ಕತ್ರಿನಾ ಸಮುದ್ರದ ಮರಳಿನ ಮೇಲೆ ಕುಳಿತಿದ್ದಾರೆ . ಇದರೊಂದಿಗೆ, ಅವಳು ತನ್ನ ಕೂದಲನ್ನು ತೆರೆದುಕೊಂಡಿದ್ದಾರೆ ಮತ್ತು ದೊಡ್ಡ ಕ್ಯಾಪ್ ಧರಿಸಿದ್ದಾರೆ.

ಫೋಟೋದಲ್ಲಿನ  ಅವರ ಸ್ಟೈಲ್ ನೋಡಿ ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ ಮತ್ತು ಲೈಕ್‌ ಮಾಡಿದ್ದಾರೆ. ಕತ್ರಿನಾರ ಫೋಟೋಗಳಿಗೆ ಅಭಿಮಾನಿಗಳು ಸ್ಟನಿಂಗ್, ಗಾರ್ಜಿಯಸ್, ಹಾಟ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅದೇ ಸಮಯದಲ್ಲಿ, ಇದು ಹೃದಯ ಮತ್ತು ಬೆಂಕಿಯ ಎಮೋಜಿಯ ಮಳೆ ಸುರಿಸಿದ್ದಾರೆ .

ಡಿಸೆಂಬರ್ 9 ರಂದು ಕತ್ರಿನಾ ಕೈಫ್ ವಿಕ್ಕಿ ಕೌಶಲ್ ಜೊತೆ ಸಪ್ತಪದಿ ತುಳಿದರು. ಇದಾದ ನಂತರ ಕೆಲವು ದಿನಗಳ ಕಾಲ ಒಟ್ಟಿಗೆ ಮನೆಯಲ್ಲಿ ಸಮಯ ಕಳೆದ ನಂತರ ಕೆಲಸಕ್ಕೆ ಮರಳಿದರು. ಇತ್ತೀಚೆಗೆ ಅವರು ಸಲ್ಮಾನ್ ಖಾನ್ ಜೊತೆ 'ಟೈಗರ್ 3' ಶೂಟ್ ಮಾಡಿದ್ದರು. ಚಿತ್ರವು ಏಪ್ರಿಲ್ 21 ರಂದು ಬಿಡುಗಡೆಯಾಗಲಿದೆ.

ಇದಲ್ಲದೆ, ಕತ್ರಿನಾ 'ಫೋನ್‌ಭೂತ್' ಚಿತ್ರದಲ್ಲಿ ಸಿದ್ಧಾಂತ್ ಚತುರ್ವೇದಿ ಮತ್ತು ಇಶಾನ್ ಖಟ್ಟರ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಜುಲೈ 2022 ರಲ್ಲಿ ಚಿತ್ರವು ಥಿಯೇಟರ್‌ಗಳಿಗೆ ಬರಲಿದೆ.

ಕತ್ರಿನಾ ಕೈಫ್ ಪ್ರಿಯಾಂಕಾ ಚೋಪ್ರಾ ಮತ್ತು ಆಲಿಯಾ ಭಟ್ ಜೊತೆ 'ಜೀ ಲೇ ಜರಾ' ಮತ್ತು 'ಮೆರ್ರಿ ಕ್ರಿಸ್ಮಸ್' ಸಿನಿಮಾ ಮಾಡುತ್ತಿದ್ದಾರೆ. ಆದರೆ ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ.

Latest Videos

click me!