RRR Success Partyಯಲ್ಲಿ ಆಮೀರ್ ಖಾನ್ ಸೇರಿದಂತೆ ಬಾಲಿವುಡ್ ಸೆಲೆಬ್ರೆಟಿಗಳು
First Published | Apr 7, 2022, 5:57 PM ISTಬಾಹುಬಲಿ ನಿರ್ದೇಶಕ ಎಸ್ ಎಸ್ ರಾಜಮೌಳಿ (SS Rajamouli) ಅವರ ಸೂಪರ್ ಹಿಟ್ ಚಿತ್ರ RRR ಬುಧವಾರ 1000 ಕೋಟಿ ಕ್ಲಬ್ ಸೇರಿದೆ. ಈ ಸಂದರ್ಭದಲ್ಲಿ, ನಿರ್ಮಾಪಕರು ಚಿತ್ರದ ಸಕ್ಸಸ್ ಪಾರ್ಟಿ (RRR Success Party) ನಡೆಸಿದರು, ಇದರಲ್ಲಿ ಅನೇಕ ದೊಡ್ಡ ಬಾಲಿವುಡ್ ಸೆಲೆಬ್ರಿಟಿಗಳು ಉಪಸ್ಥಿತರಿದ್ದರು. ರಾಖಿ ಸಾವಂತ್ (Rakhi Sawanth) ತುಂಬಾ ಬೋಲ್ಡ್ ರೆಡ್ ಡ್ರೆಸ್ಸಿನಲ್ಲಿ ಪಾರ್ಟಿಗೆ ಆಗಮಿಸಿದ್ದರು. ರಾಖಿ ಸಾವಂತ್, ಆಮೀರ್ ಖಾನ್ ಮತ್ತು ಇತರ ಸೆಲೆಬ್ರಿಟಿಗಳೊಂದಿಗೆ ಪೋಸ್ ನೀಡಿದ್ದಾರೆ. ಆಮೀರ್ ಖಾನ್, ಕರಣ್ ಜೋಹರ್, ತುಷಾರ್ ಕಪೂರ್, ಜಾವೇದ್ ಅಖ್ತರ್, ಸತೀಶ್ ಕೌಶಿಕ್, ಅಶುತೋಷ್ ಗೋವಾರಿಕರ್ ಸೇರಿದಂತೆ ಅನೇಕ ಗಣ್ಯರು ಯಶಸ್ಸಿನ ಪಾರ್ಟಿಯಲ್ಲಿ ಕಾಣಿಸಿಕೊಂಡರು.