Alia Ranbir wedding ಏಪ್ರಿಲ್ 15ರಂದು ಮದುವೆ, ಮೆಹಂದಿ, ಹಳದಿ ಸಂಪೂರ್ಣ ಗೆಸ್ಟ್‌ ವಿವರ

First Published | Apr 7, 2022, 5:24 PM IST

ಇತ್ತೀಚಿನ ದಿನಗಳಲ್ಲಿ ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ (Ranbir Kapoor) ಮದುವೆಯ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಈಗ ಇಬ್ಬರ ಮದುವೆಯ ಬಗ್ಗೆ ಇನ್ನಷ್ಟು ಹೊಸ ಮಾಹಿತಿ ಹೊರಬಿದ್ದಿದೆ. ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳ ಪ್ರಕಾರ ಇಬ್ಬರೂ ಆರ್‌ಕೆ ಹೌಸ್‌ನಲ್ಲಿ ಮದುವೆಯಾಗಲಿದ್ದಾರೆ. ಅದೇ ಸಮಯದಲ್ಲಿ, ದಂಪತಿಗಳ ವಿವಾಹಪೂರ್ವ ಕಾರ್ಯಕ್ರಮಗಳು ಏಪ್ರಿಲ್ 13 ರಿಂದ ಪ್ರಾರಂಭವಾಗುತ್ತವೆ. ಹೊರಬರುತ್ತಿರುವ ಸುದ್ದಿಗಳ ಪ್ರಕಾರ, ಏಪ್ರಿಲ್ 13 ರಂದು ಆಲಿಯಾ ಕೈಯಲ್ಲಿ ರಣಬೀರ್ ಹೆಸರಿನ ಮೆಹಂದಿ ಹಚ್ಚಿಕೊಳ್ಳಲಿದ್ದಾರೆ. ಮರುದಿನ ಅಂದರೆ ಏಪ್ರಿಲ್ 14ರಂದು ಹಳದಿ ಸಮಾರಂಭ ಆಯೋಜಿಸಲಾಗಿದೆ. ಕಪೂರ್ ಕುಟುಂಬದಲ್ಲಿ ಇಬ್ಬರ ಮದುವೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ ಎನ್ನಲಾಗಿದೆ. ಆದರೆ, ಇದುವರೆಗೆ ಮದುವೆ ಕುರಿತು ಎರಡೂ ಕಡೆಯಿಂದ ಯಾವುದೇ ಹೇಳಿಕೆ ನೀಡಿಲ್ಲ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಗೆ ಸಂಬಂಧಿಸಿದ ಕೆಲವು ಹೊಸ ಮಾಹಿತಿಗಳ ವಿವರ ಇಲ್ಲಿದೆ.

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಗೆ ಎಲ್ಲರೂ ಎದುರು ನೋಡುತ್ತಿದ್ದಾರೆ. ಸಾರ್ವಜನಿಕರಿಂದ ಸೆಲೆಬ್ರಿಟಿಗಳವರೆಗೆ  ಮದುವೆಯ ಪ್ರತಿಯೊಂದು ವಿವರಗಳನ್ನು ತಿಳಿದುಕೊಳ್ಳಲು ಆಸಕ್ತಿ ತೋರಿಸುತ್ತಿದ್ದಾರೆ. ಈ ಮದುವೆಯನ್ನು ಅದ್ಧೂರಿಯಾಗಿ ಮಾಡಲು ವಿಶೇಷ ಸಿದ್ಧತೆಗಳು ನಡೆಯುತ್ತಿವೆ.

ಈಟಿಮ್ಸ್ ವರದಿಗಳ ಪ್ರಕಾರ, ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ವಿವಾಹ ಕಾರ್ಯಕ್ರಮಗಳು ಏಪ್ರಿಲ್ 13 ರಿಂದ ಪ್ರಾರಂಭವಾಗಲಿವೆ. ಮೆಹಂದಿ ಮತ್ತು ಹಲ್ದಿ ಸಮಾರಂಭದ ನಂತರ, ದಂಪತಿಗಳು ಹಸೆಮಣೆ ಏರಲಿದ್ದಾರೆ .

Tap to resize

ಇತ್ತೀಚೆಗೆ ಆಲಿಯಾ-ರಣಬೀರ್ ಏಪ್ರಿಲ್ 17 ರಂದು ಏಳು ಸುತ್ತುಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ಸುದ್ದಿ ಇತ್ತು, ಆದರೆ ಈಗ ಹೊಸ ಮಾಹಿತಿ ಹೊರಬಿದ್ದಿದೆ. ವರದಿಗಳನ್ನು ನಂಬುವುದಾದರೆ, ಏಪ್ರಿಲ್ 15 ರ ಬೆಳಿಗ್ಗೆ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರಂತೆ.

ಆಲಿಯಾ-ರಣಬೀರ್ ಮದುವೆಗೆ ಕುಟುಂಬ ಸಮೇತ ವಿಶೇಷ ಸ್ನೇಹಿತರು ಆಗಮಿಸಲಿದ್ದಾರೆ. ಇದೇ ವೇಳೆ ಚಂಬೂರಿನ ಆರ್‌ಕೆ ಹೌಸ್‌ನಲ್ಲಿ ಇಬ್ಬರ ವಿವಾಹ ಆರತಕ್ಷತೆಯೂ ನಡೆಯಲಿದೆ. ಸುದ್ದಿ ಪ್ರಕಾರ, ಸುಮಾರು 450 ಅತಿಥಿಗಳು ಮದುವೆಗೆ ಹಾಜರಾಗುವ ನಿರೀಕ್ಷೆಯಿದೆ.

ಕಪೂರ್ ಕುಟುಂಬದಲ್ಲಿ ಈ ಪೀಳಿಗೆಯಲ್ಲಿ   ರಣಬೀರ್ ಅವರದ್ದೇ  ಕೊನೆಯ ಮದುವೆ. ಹೀಗಾಗಿ ಅದ್ಧೂರಿಯಾಗಿ ಮಾಡಲು ಭರದ ಸಿದ್ಧತೆಗಳು ನಡೆಯುತ್ತಿವೆ. ರಣಬೀರ್ ಅವರ ಮೆಹಂದಿ, ಹಲ್ದಿ ಮತ್ತು ಸಂಗೀತ ಸಮಾರಂಭಕ್ಕೆ ಕಪೂರ್ ಕುಟುಂಬ ಸಜ್ಜಾಗಿದೆ.

ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳ ಪ್ರಕಾರ ಆಲಿಯಾ-ರಣಬೀರ್ ಮದುವೆಗೆ ಆಗಮಿಸುವ ಅತಿಥಿಗಳ ಪಟ್ಟಿಯೂ ಮುನ್ನೆಲೆಗೆ ಬಂದಿದೆ. ಇದರಲ್ಲಿ ಕರಣ್ ಜೋಹರ್, ಆದಿತ್ಯ ರಾಯ್ ಕಪೂರ್, ಅರ್ಜುನ್ ಕಪೂರ್, ಶಾರುಖ್ ಖಾನ್, ಮನೀಶ್ ಮಲ್ಹೋತ್ರಾ, ವರುಣ್ ಧವನ್, ಫರ್ಹಾನ್ ಅಖ್ತರ್, ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್,ಅಯಾನ್ ಮುಖರ್ಜಿ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.

ಮದುವೆಯ ನಂತರ ರಣಬೀರ್-ಆಲಿಯಾ ತಮ್ಮ ತಮ್ಮ ಚಿತ್ರಗಳ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ ಮತ್ತು ಹನಿಮೂನ್‌ಗೆ ಹೋಗುವುದಿಲ್ಲ ಎಂದು ಈ ಹಿಂದೆ ವರದಿಗಳು ಬಂದಿದ್ದವು. ಆದರೆ ಈಗ ಇಬ್ಬರೂ ಹನಿಮೂನ್‌ಗಾಗಿ ಸ್ವಿಟ್ಜರ್ಲೆಂಡ್‌ಗೆ ಹೋಗಲಿದ್ದಾರೆ ಎಂಬ ಸುದ್ದಿ ಬಂದಿದೆ.

ಆಲಿಯಾ ಭಟ್ 11 ವರ್ಷದವಳಿದ್ದಾಗ, ಅವಳು ರಣಬೀರ್ ಕಪೂರ್ ಮೇಲೆ ಕ್ರಶ್ ಹೊಂದಿದ್ದರು ಮತ್ತು ಅವರು ನಟನನ್ನು ಮದುವೆಯಾಗಲು ಬಯಸಿದ್ದರು ಎಂಬ ವಿಷಯವನ್ನು ಸ್ವತಃ ಆಲಿಯಾ ಸಂದರ್ಶನದ ವೇಳೆ ಹೇಳಿದ್ದರು. ಆದರೆ, ಬ್ರಹ್ಮಾಸ್ತ್ರ ಚಿತ್ರದ ಶೂಟಿಂಗ್ ವೇಳೆಯೇ ಇವರಿಬ್ಬರ ಲವ್ ಸ್ಟೋರಿ ಶುರುವಾಗಿದೆ.

Latest Videos

click me!