ಪತಿ ಜೊತೆ ಮಾಲ್ಡೀವ್ಸ್‌ನಲ್ಲಿ ಕತ್ರಿನಾ ಕೈಫ್‌ ಬರ್ತ್‌ಡೇ; ಫೋಟೋ ವೈರಲ್‌!

Published : Jul 17, 2022, 05:23 PM IST

ನಟಿ ಕತ್ರಿನಾ ಕೈಫ್  (Katrina Kaif) ಜುಲೈ 16 ರಂದು ಮಾಲ್ಡೀವ್ಸ್‌ನಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.  ಅವರು ಈ ಆಚರಣೆಯ ಕೆಲವು ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಅದು ವೈರಲ್ ಆಗಿದೆ. ಕತ್ರಿನಾ ಅವರಲ್ಲದೆ, ಅವರ ಸಹೋದರಿ ಇಸಾಬೆಲ್ ಕೈಫ್, ಸಹೋದರ ಸೆಬಾಸ್ಟಿಯನ್, ಪತಿ ವಿಕ್ಕಿ ಕೌಶಲ್, ಸೋದರ ಮಾವ ಸನ್ನಿ ಕೌಶಲ್, ಸನ್ನಿ ಗೆಳತಿ ನಟಿ ಶಾರ್ವರಿ ಮತ್ತು ನಟಿ ಇಲಿಯಾನಾ ಡಿಕ್ರೂಜ್ ಸೇರಿದಂತೆ ಅನೇಕರು ಈ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

PREV
17
ಪತಿ ಜೊತೆ ಮಾಲ್ಡೀವ್ಸ್‌ನಲ್ಲಿ ಕತ್ರಿನಾ ಕೈಫ್‌ ಬರ್ತ್‌ಡೇ; ಫೋಟೋ ವೈರಲ್‌!

ಕತ್ರಿನಾ ಕೈಫ್‌ ಸ್ವತಃ ತನ್ನ ಹುಟ್ಟುಹಬ್ಬದ ಆಚರಣೆಯ ಫೋಟೋಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ ಮತ್ತು 'ಬರ್ತ್‌ಡೇ ವಾಲಾ ಡೇ' ಎಂದು ಕ್ಯಾಪ್ಷನ್‌ ಬರೆದಿದ್ದಾರೆ.

27

ಈ ಫೋಟೋದಲ್ಲಿ ಕತ್ರಿನಾ, ಅವರ ಸಹೋದರಿ ಇಸಾಬೆಲ್ಲಾ, ನಟಿಯರಾದ ಶರ್ವರಿ, ಅಂಗೀರ ಧರ್ ಮತ್ತು ಇಲಿಯಾನಾ ಡಿಕ್ರೂಜ್ ಅವರಲ್ಲದೆ, ಸನ್ನಿ ಕೌಶಲ್ ಕೂಡ ಕಾಣಿಸಿಕೊಂಡಿದ್ದಾರೆ.

37

 'ಬಂಟಿ ಔರ್ ಬಬ್ಲಿ 2' ಖ್ಯಾತಿಯ ನಟಿ ಶರ್ವರಿ ಕೂಡ ಕತ್ರಿನಾ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗವಹಿಸಿದ್ದರು. ಮತ್ತು ಇವರಿಬ್ಬರ ಬಾಂಧವ್ಯವನ್ನು ಈ ಫೋಟೋದಲ್ಲಿ ಸ್ಪಷ್ಟವಾಗಿ ಕಾಣಬಹುದು. ಶರ್ವರಿ ವಿಕ್ಕಿಯ ಸಹೋದರ ಮತ್ತು ಕತ್ರಿನಾ ಅವರ ಮೈದುನ  ಸನ್ನಿ ಕೌಶಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.

47

ತನ್ನ ಅಕ್ಕನಿಗೆ ಶುಭ ಹಾರೈಸುವಾಗ, ಇಸಾಬೆಲ್ಲೆ ಈ ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು ''Happiest of Birthdays Sister Dearest Katrina Kaif
love always' ಎಂದು ಇಸಾಬೆಲ್ಲೆ ಸಹೋದರಿ ಕತ್ರಿನಾರಿಗೆ ವಿಶ್‌ ಮಾಡಿದ್ದಾರೆ.

57

ನಿರ್ದೇಶಕ ಕಬೀರ್ ಖಾನ್ ಪತ್ನಿ ಮಿನಿ ಮಾಥುರ್ ಕೂಡ ಕತ್ರಿನಾ ಅವರ ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಆದರೆ, ಇಷ್ಟು ಫೋಟೋಗಳಲ್ಲಿ ವಿಕ್ಕಿ ಕೌಶಲ್ ಅವರ ಯಾವುದೇ ಫೋಟೋದಲ್ಲಿ ಕಾಣದ ಅಭಿಮಾನಿಗಳು ಸಾಕಷ್ಟು ನಿರಾಶೆಗೊಂಡಿದ್ದಾರೆ.

67

ಈ ಸಂದರ್ಭದಲ್ಲಿ 'ಕಮಾಂಡೋ 3' ಮತ್ತು 'ರನ್‌ವೇ 34' ಚಿತ್ರಗಳಲ್ಲಿ ಕಾಣಿಸಿಕೊಂಡ ನಟಿ ಅಂಗೀರ ಧರ್ ತಮ್ಮ ಪತಿ ನಿರ್ದೇಶಕ ಆನಂದ್ ತಿವಾರಿ ಅವರೊಂದಿಗೆ ಸಹ ಕಾಣಿಸಿಕೊಂಡರು.

77

ಜುಲೈ 16 ರಂದು ಕತ್ರಿನಾ ಕೈಫ್‌ 39 ನೇ ವರ್ಷಕ್ಕೆ ಕಾಲಿಟ್ಟರು ಮತ್ತು ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದರು.

Read more Photos on
click me!

Recommended Stories