ಬಾರ್ಬಿ ಡಾಲ್ ಆಗಿ ಬದಲಾದ ಹಾಟ್ ಬ್ಯೂಟಿ ದಿಶಾ; ಮಿನಿ ಡ್ರೆಸ್ ಫೋಟೋ ವೈರಲ್

First Published Jul 17, 2022, 5:18 PM IST

ನಟಿ ದಿಶಾ ಪಟಾನಿ ಮಿನಿ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪಿಂಕ್ ಬಣ್ಣದ ಡ್ರೆಸ್ ನಲ್ಲಿ ಕಂಗೊಳಿಸಿದ್ದಾರೆ. ಡ್ರೆಸ್ ಗೆ ಮುತ್ತಿನ ಸರ ಧರಿಸಿದ್ದಾರೆ. ಬಾರ್ಬಿ ಡಾಲ್ ಹಾಗೆ ಕಾಣಿಸುವ ದಿಶಾ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ಬಾಲಿವುಡ್ ಹಾಟ್ ನಟಿ ದಿಶಾ ಪಟಾನಿ ಸದ್ಯ ಏಕ್ ವಿಲನ್ -2 ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಚಾರದ ವೇಳೆ ದಿಶಾ ಧರಿಸುವ ಡ್ರೆಸ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಇತ್ತೀಚಿಗಷ್ಟೆ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದ ದಿಶಾಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದರು. 

ಏಕ್ ವಿಲನ್-2 ಸಿನಿಮಾದಲ್ಲಿ ದಿಶಾ ಜೊತೆ ಮತ್ತೋರ್ವ ನಟಿ ತಾರಾ ಸುತಾರಿಯಾ ಕೂಡ ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಟ ಅರ್ಜುನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. 
 

ಈ ಬಾರಿ ದಿಶಾ ಮಿನಿ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪಿಂಕ್ ಬಣ್ಣದ ಡ್ರೆಸ್ ನಲ್ಲಿ ಕಂಗೊಳಿಸಿದ್ದಾರೆ. ಡ್ರೆಸ್ ಗೆ ಮುತ್ತಿನ ಸರ ಧರಿಸಿದ್ದಾರೆ. ಬಾರ್ಬಿ ಡಾಲ್ ಹಾಗೆ ಕಾಣಿಸುವ ದಿಶಾ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ದಿಶಾ ಧರಿಸಿರುವ ಬಟ್ಟೆಗಳು ನೆಟ್ಟಿಗರಿಗೆ ಇಷ್ಟವಾಗುತ್ತಿಲ್ಲ. ಹಾಗಾಗಿ ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ 

ದಿಶಾ ಪಟ್ಟೆಗೆ ಅನೇಕರು ಇದು ನೈಟ್ ವೇರ್ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ದಿಶಾ ಕೆಟ್ಟ ಆಯ್ಕೆ ಎಂದು ಹೇಳುತ್ತಿದ್ದಾರೆ. ಮತ್ತೋರ್ವ ಅಭಿಮಾನಿ ಕಾಮೆಂಟ್ ಮಾಡಿ ಶ್ರದ್ಧಾ ಕಪೂರ್ ಕಾಪಿ ಮಾಡುತ್ತಿದ್ದೀರಾ ಎಂದು ಹೇಳಿದ್ದಾರೆ. 

ಡ್ರೆಸ್ ಬಗ್ಗೆ ಮಾತ್ರವಲ್ಲದೇ ಬಾಡಿ ಶೇಮಿಂಗ್ ಕೂಡ ಮಾಡುತ್ತಾರೆ. ಫಿಟ್ನೆಸ್ ಫ್ರೀಕ್ ದಿಶಾ ಅವರನ್ನು ನೆಟ್ಟಿಗರು ಅಪೌಷ್ಠಿಕತೆಯ ಕೊರತೆ ಇದೆ, ಫ್ಲಾಟ್ ಎಂದು ಕಾಲೆಳೆಯುತ್ತಿದ್ದಾರೆ. ದಿಶಾ ಪಟಾನಿ ಗುರುತು ಅಂದರೆ ಟೈಗರ್ ಶ್ರಾಫ್ ಗರ್ಲ್ ಫ್ರೆಂಡ್ ಮತ್ತು ಮೈಕಾಣುವ ಬಟ್ಟೆ ಧರಿಸುವುದು ಅಷ್ಟೆ ಎಂದು ಕಾಲೆಳೆಯುತ್ತಿದ್ದಾರೆ.

ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ದಿಶಾ ತಾವಾಯಿತು ತಮ್ಮ ಕೆಲಸ ಎಂದು ಬ್ಯುಸಿಯಾಗಿದ್ದಾರೆ. ದಿಶಾ ಸದ್ಯ ಏಕ್ ವಿಲನ್ -2 ರಲೀಸ್ ಗೆ ಎದುರು ನೋಡುತ್ತಿದ್ದಾರೆ. ಭರ್ಜರಿ ಪ್ರಮೋಷನ ಕಾರ್ಯ ನಡೆಯುತ್ತಿದ್ದು ಈವೆಂಟ್ ಗಳಲ್ಲಿ ಭಾಗಿಯಾಗುತ್ತಿದ್ದಾರೆ.

ವಿಲನ್ -2 ಸಿನಿಮಾ ಜೊತೆಗೆ ಪ್ರಭಾಸ್ ನಟನೆಯ ಹೊಸ ಸಿನಿಮಾದಲ್ಲಿ ದಿಶಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ದಿಶಾ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದಾರೆ.  

click me!