ಸಿನಿಮಾ ಸಕ್ಸಸ್ ಬಳಿಕ ನಿರ್ಮಾಪಕರಿಂದ ದುಬಾರಿ ಗಿಫ್ಟ್‌ ಪಡೆದ ಸ್ಟಾರ್ಸ್‌ ಇವರು

Published : Jun 25, 2022, 06:08 PM IST

ಭೂಲ್ ಭುಲೈಯಾ 2  (Bhool Bhulaiyaa 2)ರ ಯಶಸ್ಸಿಗಾಗಿ ಟಿ-ಸೀರೀಸ್‌ನ ಭೂಷಣ್ ಕುಮಾರ್ (Bhushan Kumar) ಅವರು ಕಾರ್ತಿಕ್ ಆರ್ಯನ್‌ಗೆ (Kartik Aaryan)  ಭಾರತದ ಮೊದಲ ಮೆಕ್‌ಲಾರೆನ್ ಜಿಟಿಯನ್ನು (McLaren Gt)  ಉಡುಗೊರೆಯಾಗಿ ನೀಡಿದರು. ಚಲನಚಿತ್ರಗಳಲ್ಲಿನ ಉತ್ತಮ ಅಭಿನಯಕ್ಕಾಗಿ ದುಬಾರಿ ಉಡುಗೊರೆಗಳನ್ನು ಪಡೆದ ನಟರಲ್ಲಿ ಕಾರ್ತಿಕ್‌ ಮೊದಲನೇ ಅವರನೇನು ಅಲ್ಲ. ಚಿತ್ರ ಯಶಸ್ವಿಯಾದ ನಂತರ ನಿರ್ಮಾಪಕರಿಂದ ದುಬಾರಿ ಗಿಫ್ಟ್‌ಗಳನ್ನು   ಕೆಲವು ನಟರ ಪಟ್ಟಿ ಇಲ್ಲಿದೆ.  

PREV
15
ಸಿನಿಮಾ ಸಕ್ಸಸ್ ಬಳಿಕ ನಿರ್ಮಾಪಕರಿಂದ ದುಬಾರಿ ಗಿಫ್ಟ್‌ ಪಡೆದ ಸ್ಟಾರ್ಸ್‌ ಇವರು
Image: Kartik Aaryan/Instagram

ಬಿಡುಗಡೆಯಾದ ಐದು ವಾರಗಳ ನಂತರವೂ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿರುವ ಭೂಲ್ ಭುಲೈಯಾ 2ನ ಯಶಸ್ಸಿಗಾಗಿ, ಕಾರ್ತಿಕ್ ಆರ್ಯನ್‌ಗೆ ವಿಶೇಷ ಉಡುಗೊರೆ ನೀಡಲಾಗಿದೆ. ಹಾರರ್-ಕಾಮಿಡಿ ನಿರ್ಮಿಸಿದ ಟಿ-ಸೀರೀಸ್ ಮಾಲೀಕರು ಕಾರ್ತಿಕ್‌ಗೆ ಇಂಡಿಯಾದ ಮೊದಲ ಮೆಕ್ಲಾರೆನ್ ಜಿಟಿಯನ್ನು ಉಡುಗೊರೆಯಾಗಿ ನೀಡಿದರು.

25

ಕಮಲ್ ಹಾಸನ್ ಅವರ ಇತ್ತೀಚೆಗೆ ಬಿಡುಗಡೆಯಾದ ವಿಕ್ರಮ್ ಚಿತ್ರದ ಪ್ರಮುಖ ಅಂಶವೆಂದರೆ ಸೂರ್ಯ ಅವರ ಅತಿಥಿ ಪಾತ್ರ. ನಟ ತನ್ನ ಅತಿಥಿ ಪಾತ್ರಕ್ಕೆ ಒಂದು ಪೈಸೆಯ ಸಂಭಾವನೆಯನ್ನೂ ವಿಧಿಸಲಿಲ್ಲ. ಸೂರ್ಯ ಅವರು 'ರೋಲೆಕ್ಸ್' ಪಾತ್ರವನ್ನು ನಿರ್ವಹಿಸಿದ್ದಾರೆ. ಅಂದಹಾಗೆ, ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಯಶಸ್ಸಿನ ನಂತರ, ಕಮಲ್ ಹಾಸನ್ ಅವರು 47 ಲಕ್ಷ ರೂಪಾಯಿ ಮೌಲ್ಯದ ರೋಲೆಕ್ಸ್ ವಾಚ್ ಅನ್ನು ಸೂರ್ಯನಿಗೆ ಉಡುಗೊರೆಯಾಗಿ ನೀಡಿದರು.

35

ಕತ್ರೀನಾ ಕೈಫ್ ಅಗ್ನಿಪಥ್, 'ಚಿಕ್ನಿ ಚಮೇಲಿ' ನಲ್ಲಿ ಡ್ಯಾನ್ಸ್ ನಂಬರ್ ಮಾಡಿದಾಗ, ಕರಣ್ ಜೋಹರ್ ಅವರ ನೃತ್ಯದಿಂದ ಪ್ರಭಾವಿತರಾದರು ಹಾಗೂ ಅವರು ನಟಿಗೆ ಕೆಂಪು ಫೆರಾರಿಯನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದರು

45

ಸೈಫ್ ಅಲಿ ಖಾನ್ ಮತ್ತು ವಿದ್ಯಾ ಬಾಲನ್ ಸಹ-ನಟಿಸಿದ ಅಮಿತಾಬ್ ಬಚ್ಚನ್ ಅವರ ಚಿತ್ರ 'ಏಕಲವ್ಯ' ಸಿನಿಮಾ ಹಿಟ್ ಆಗದಿರಬಹುದು. ಆದರೆ, ವಿಧು ವಿನೋದ್ ಚೋಪ್ರಾ ಅವರ ಬಿಗ್ ಬಿ  ಅವರಿಗೆ ಸುಮಾರು 3 ರಿಂದ 5 ಕೋಟಿ ರೂಪಾಯಿ ವೆಚ್ಚದ ದುಬಾರಿ ರೋಲ್ಸ್ ರಾಯ್ಸ್ ಕಾರನ್ನು ಉಡುಗೊರೆಯಾಗಿ ನೀಡಿದರು.

55

ಸಲ್ಮಾನ್ ಖಾನ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ತುಂಬಾ ಒಳ್ಳೆಯ ಸ್ನೇಹಿತರು ಎಂಬುದು ತಿಳಿದಿರುವ ವಿಷಯ. ಮತ್ತು ಸಲ್ಮಾನ್ ತನ್ನ ಸ್ನೇಹಿತರಿಗೆ ದುಬಾರಿ ಉಡುಗೊರೆಗಳು ನೀಡಲು ಇಷ್ಟಪಡುತ್ತಾರೆ ಎಂಬುದು ಆಶ್ಚರ್ಯವೇನಿಲ್ಲ. ವರದಿಗಳ ಪ್ರಕಾರ, ಕಿಕ್‌ನಲ್ಲಿ ಜಾಕ್ವೆಲಿನ್ ಅವರ ಅಭಿನಯದ ನಂತರ, ಪ್ರಭಾವಿತರಾದ ಸೂಪರ್‌ಸ್ಟಾರ್‌ ನಟಿಗೆ  ಅವರು 2.5 ಕೋಟಿ ರೂಪಾಯಿ ಮೌಲ್ಯದ ಪೇಂಟಿಂಗ್ ಅನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದರು.

Read more Photos on
click me!

Recommended Stories