Michael Jackson ಪ್ರಾಣ ಭಯ, ಮನೆಯಲ್ಲಿಯೇ ಮಾಡಿದ್ರು ಈ ವ್ಯವಸ್ಥೆ

First Published Jun 25, 2022, 6:04 PM IST

ಇಂದು ಪಾಪ್ ಕಿಂಗ್‌ ಎಂದೇ ಪ್ರಸಿದ್ಧರಾಗಿರುವ ಮೈಕೆಲ್ ಜಾಕ್ಸನ್ (Michael Jackson) ಅವರ 13ನೇ ಪುಣ್ಯತಿಥಿ. ಅವರು ಜೂನ್ 25, 2009 ರಂದು ತಮ್ಮ ಲಾಸ್ ಏಂಜಲೀಸ್ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಸಾಯುವ ಸಮಯದಲ್ಲಿ ಅವರಿಗೆ 50 ವರ್ಷ ವಯಸ್ಸಾಗಿತ್ತು. ಮಾದಕ ವ್ಯಸನಿಯಾಗಿದ್ದ (Drug Addict) ಜಾಕ್ಸನ್ ತಮ್ಮ ವೃತ್ತಿಪರ ಜೀವನಕ್ಕೆ ಎಷ್ಟು ಪ್ರಸಿದ್ಧರಾಗಿದ್ದರೋ, ಅವರು ತಮ್ಮ ವೈಯಕ್ತಿಕ ಜೀವನದ ಕಾರಣದಿಂದಲೂ ಅಷ್ಟೇ ಸುದ್ದಿಯಾಗಿದ್ದರು. ಜಾಕ್ಸನ್ ತನ್ನ ಬಾಲ್ಯದಲ್ಲಿ ತನ್ನ ಅಣ್ಣನ ಬಾಂಡ್‌ಗೆ ಸೇರಿದ್ದರು ಮತ್ತು ಅವನೊಂದಿಗೆ ವೇದಿಕೆಯ ಪ್ರದರ್ಶನಗಳನ್ನು ನೀಡುತ್ತಿದ್ದರು. ಪ್ರದರ್ಶನದ ವೇಳೆ ಏನಾದರೂ ತಪ್ಪಾದಲ್ಲಿ ತಂದೆ ಬೆಲ್ಟ್ ನಿಂದ ಹೊಡೆಯುತ್ತಿದ್ದರು ಎನ್ನಲಾಗಿದೆ. ಇದೆಲ್ಲವೂ ಅವರ ಜೀವನದ ಮೇಲೆ ಆಳವಾದ ಪರಿಣಾಮ ಬೀರಿತು. ಮೈಕೆಲ್ ಜಾಕ್ಸನ್ ಅವರ ಜೀವನಕ್ಕೆ ಸಂಬಂಧಿಸಿದ ಕೆಲವು ಕೇಳದ ಕಥೆಗಳನ್ನು ಇಲ್ಲಿವೆ.

ಮೈಕೆಲ್ ಜಾಕ್ಸನ್ 1964 ರಲ್ಲಿ ಅವರ ಕುಟುಂಬದ ಸಂಗೀತ ಟೀಮಿನಲ್ಲಿಯೇ ಇದ್ದರು. ಜಾಕ್ಸನ್ 5 ಎಂದು ಹೆಸರಿಸಲಾಯಿತು. ಆದರೆ ನಂತರ ಅವರು ತಮ್ಮದೇ ಐಡೆಂಟಿಟಿಗಾಗಿ ಹಾತೊರೆಯುತ್ತಿದ್ದರು. ಪ್ರಪಂಚದಲ್ಲಿ ಪ್ರಾಬಲ್ಯ ಸಾಧಿಸಿದರು. ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಜನರು ಬೀದಿಗಿಳಿದು ಕಣ್ಣೀರು ಹಾಕಿದ್ದರು ಎನ್ನಲಾಗಿದೆ.

ಅವರು ತಮ್ಮ ಲುಕ್‌  ಬಗ್ಗೆ ಸಾಕಷ್ಟು ಪೊಸೆಸ್ಸಿವ್‌ ಆಗಿದ್ದರು ಮತ್ತು ಈ ಕಾರಣಕ್ಕಾಗಿ, ಅನೇಕ ಬಾರಿ ಅವರು ತಮ್ಮ ಮುಖ, ಮೂಗು, ತುಟಿ, ಕೈ, ಪಾದಗಳ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ತುಟಿ ಕೆಳಗೆ ಗುಲಾಬಿ ಬಣ್ಣದ ಲೈನರ್ ಕೂಡ ಗೋಚರಿಸಿತು. ಅವರು ತಮ್ಮ ದೇಹದ ಮೇಲೆ ಅನೇಕ ಶಾಶ್ವತ ಹಚ್ಚೆಗಳನ್ನು ಮಾಡಿಕೊಂಡರು.

ಮೈಕೆಲ್ ತಮ್ಮದೇ ಅದ ವಿಭಿನ್ನ ಗುರುತನ್ನು ಮಾಡಿಕೊಂಡರು, ಆದರೆ ಅದೇ ಸಮಯದಲ್ಲಿ ಅವನು ಯಾವಾಗಲೂ ಸಾವಿನ ಭಯವನ್ನು ಹೊಂದಿದ್ದರು ಮತ್ತು ಅವರನ್ನು ನೋಡಿಕೊಳ್ಳಲು ಮನೆಯಲ್ಲಿ 12 ವೈದ್ಯರಿದ್ದರಂತೆ. 

ಮೈಕೆಲ್ ಜಾಕ್ಸನ್ ತಮ್ಮ ಹಾಡುಗಳಿಗೆ ಎಷ್ಟು ಫೇಮಸ್ ಆಗಿದ್ದಾರೋ ಅಷ್ಟೇ ವಿವಾದಗಳಲ್ಲೂ ಇರುತ್ತಿದ್ದರು. ಆತನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯದ (Sexual Harrasment) ಆರೋಪ ಕೇಳಿಬಂದಿತ್ತು. ಲೈಂಗಿಕ ಕಿರುಕುಳಕ್ಕಾಗಿ ಅವರನ್ನು 2 ದಿನಗಳ ಕಾಲ ಜೈಲಿನಲ್ಲಿ ಇರಿಸಲಾಗಿತ್ತು. ಅವರು ತನ್ನ ಮಗುವನ್ನು ಬಾಲ್ಕನಿಯಲ್ಲಿ ನೇತು ಹಾಕಿದಾಗ ಅವರು ಬೆಳಕಿಗೆ ಬಂದರು.
 

ಮಾಧ್ಯಮ ವರದಿಗಳ ಪ್ರಕಾರ ಅವರ ಮರಣದ ನಂತರ, ಅವರ ಮೇಲೆ ಕಿಲ್ಲಿಂಗ್ ಮೈಕೆಲ್ ಜಾಕ್ಸನ್ ಎಂಬ ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಯಿತು. ಇದರಲ್ಲಿ, ಪೊಲೀಸ್ ಅಧಿಕಾರಿ ಸಾವಿನ ಸಮಯದಲ್ಲಿ ಅವರ ಸ್ಥಿತಿಯನ್ನು ಉಲ್ಲೇಖಿಸುವಾಗ ಆಘಾತಕಾರಿ ಬಹಿರಂಗಪಡಿಸಿದರು. ಅವರು ಸಾಯುವ ಸಮಯದಲ್ಲಿ ಜಾಕ್ಸನ್ ಬೋಳಾಗಿದ್ದರು ಎಂದು ಹೇಳಿದರು. ಈ ವಿಷಯ ಬಯಲಿಗೆ ಬಂದಾಗ ಎಲ್ಲರಿಗೂ ಆಶ್ಚರ್ಯವಾಯಿತು.

ಮೈಕೆಲ್ ಜಾಕ್ಸನ್ ಸಾವಿಗೆ ಹೆದರುತ್ತಿದ್ದರು, ಆದ್ದರಿಂದ ಅವರು ತಮ್ಮ ಮನೆಯಲ್ಲಿ 12 ವೈದ್ಯರ ತಂಡವನ್ನು ಇಟ್ಟುಕೊಂಡಿದ್ದರು ಮತ್ತು  ಆಕ್ಸಿಜನ್ ಬೆಡ್ ಮೇಲೆ ಮಲಗಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲ, ಆಹಾರ ಸೇವಿಸುವ ಮುನ್ನ ತಪಾಸಣೆ ಮಾಡಿಸಿಕೊಂಡು ನಂತರ ತಿನ್ನುತ್ತಿದ್ದರು.

click me!