'ಆ ದಿನದ ನಂತರ, ಅವನು ಕೋಚಿಂಗ್ ಕ್ಲಾಸ್‌ಗೆ ಹೋದಾಗ, ನಾನು ಅವನಿಗೆ ತಿಳಿಯದೆ ಅವನನ್ನು ಹಿಂಬಾಲಿಸಿದೆ. ಅವನು ಬೇರೆ ದಾರಿ ಹಿಡಿದು ಗೆಳೆಯರೊಂದಿಗೆ ರಾಗಿ ರುಬ್ಬುವ ಅಂಗಡಿಯೊಂದರ ಹಿಂದೆ ಹೋದದ್ದನ್ನು ನಾನು ಗಮನಿಸಿದೆ. ನಾನು ಅವರನ್ನು ಹಿಂಬಾಲಿಸಿದಾಗ ಬೇರೆ ಮಕ್ಕಳೊಂದಿಗೆ ವೀಡಿಯೋ ಗೇಮ್ ಆಡೋದನ್ನು ನೋಡಿದೆ. ನಾನಲ್ಲಿ ಇದ್ದಿದ್ದನ್ನು ಅವನೂ ನೋಡಿ ಹೆದರಿದ. ಅವನ ರಟ್ಟೆ ಹಿಡಿದು ಮನೆಗೆ ಕರೆದುಕೊಂಡು ಹೋದೆ. ದಾರಿಯುದ್ದಕ್ಕೂ ‘ನಹೀ, ಮಮ್ಮಿ’ ಎನ್ನುತ್ತಲೇ ಇದ್ದ. ನಾವು ಮನೆಗೆ ತಲುಪಿದಾಗ, ನನ್ನ ಸಿಟ್ಟು ನೆತ್ತಿಗೇರಿತ್ತು. ಯಾವುದರಿಂದ ಹೊಡೆಯೋದು ಗೊತ್ತಾಗಲಿಲ್ಲ. ಕೈ ಸಿಕ್ಕ ಚಪ್ಪಲ್ಲಲ್ಲೇ ಚಚ್ಚಿದೆ. ಆ ಪೆಟ್ಟಿನ ಬಲಕ್ಕೆ ಮನೆ ನಾಯಿಗಳು ಹೆದರಿ, ಚಲ್ಲಾಪಿಲ್ಲಿಯಾಗಿದ್ದವು,' ಎಂದು ನಟನ ತಾಯಿ ಪೂರ್ತಿ ಘಟನೆಯನ್ನು ತೆರೆದಿಟ್ಟರು.