ಹತ್ತು ವರ್ಷದಿಂದ ಲವ್! ಡ್ರೀಮ್ ಬಾಯ್ ಬಗ್ಗೆ ಗುಟ್ಟು ಬಿಚ್ಚಿಟ್ಟು ಬ್ಲಶ್ ಆದ ನಟಿ ಸಾಯಿ ಪಲ್ಲವಿ ರಿಲೇಶನ್‌‌ಶಿಪ್ಪಲ್ಲಿದ್ದಾರಾ?

First Published | Jun 30, 2024, 2:22 PM IST

ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯ ನಟಿ ಸಾಯಿ ಪಲ್ಲವಿ ತಮ್ಮ ಪ್ರೀತಿ ಬಗ್ಗೆ ಹೇಳಿರೋವಂತಹ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಅವರು ತಮ್ಮ ಹತ್ತು ವರ್ಷದ ಪ್ರೀತಿಯ ಬಗ್ಗೆ ರಿವೀಲ್ ಮಾಡಿದ್ದಾರೆ.  
 

ದಕ್ಷಿಣ ಭಾರತದ ಜನಪ್ರಿಯ ನಟಿ, ಸಿಂಪಲ್ ಚೆಲುವೆ ಸಾಯಿ ಪಲ್ಲವಿಯವರ (Sai Pallavi) ತಂಗಿ ಮದುವೆಗೆ ಎಲ್ಲ ತಯಾರಿ ನಡೆಯುತ್ತಿದೆ. ಈ ನಡುವೆ ಅಕ್ಕ ಯಾಕೆ ಇನ್ನೂ ಮದುವೆಯಾಗಿಲ್ಲ, ಸಾಯಿ ಪಲ್ಲವಿ ಮದುವೆ ಯಾವಾಗ? ಸಾಯಿ ಪಲ್ಲವಿ ಲವ್ ಮಾಡ್ತಿದ್ದಾರ ಎನ್ನುವ ಪ್ರಶ್ನೆ ಎಲ್ಲರೂ ಕೇಳುತ್ತಲೇ ಇದ್ದಾರೆ. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. 
 

ಸೋಶಿಯಲ್ ಮೀಡಿಯಾದಲ್ಲಿ ನಟಿ ಸಾಯಿ ಪಲ್ಲವಿ ಮಾತನಾಡಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದು ಯಾವುದೋ ಇಂಟರ್ವ್ಯೂ ವಿಡಿಯೋ. ಆದ್ರೆ ಯಾವಾಗ ಅವರು ಸಂದರ್ಶನ ನೀಡಿದ್ದು ಅನ್ನುವ ಮಾಹಿತಿ ಇಲ್ಲ. ಈ ಸಂದರ್ಭದಲ್ಲಿ ಅವರು ತಮ್ಮ ಲವ್ (Love) ಗುಟ್ಟನ್ನು ರಟ್ಟು ಮಾಡಿದ್ದಾರೆ.

Tap to resize

ನನಗೆ ಕಳೆದ ಸುಮಾರು 10 ವರ್ಷಗಳಿಂದ ಅಭಿಮನ್ಯು (Abhimanyu) ಎನ್ನುವ ವ್ಯಕ್ತಿಯ ಮೇಲೆ ಲವ್ ಆಗಿದೆ. ಅವರನ್ನ ನನ್ನ ಡ್ರೀಮ್ ಬಾಯ್ ಅಂತಾನೂ ಹೇಳಬಹುದು ಎಂದು ಹೇಳಿ ಬ್ಲಶ್ ಆಗಿ, ನಾಚಿಕೆಯಿಂದ ನಕ್ಕಿದ್ದಾರೆ. 
 

ಅಷ್ಟಕ್ಕೂ ಆ ಹುಡುಗ ಯಾರು ಅನ್ನೋದು ಗೊತ್ತಾದ ಮೇಲೆ ಅಲ್ಲಿದ್ದವರೆಲ್ಲಾ ನಕ್ಕಿದ್ದು ನಿಜ. ಸಾಯಿ ಪಲ್ಲವಿಗೆ ಲವ್ ಆಗಿರೋ ಅಭಿಮನ್ಯು ಬೇರಾರೂ ಅಲ್ಲ, ಮಹಾಭಾರತದಲ್ಲಿ (Mahabharat) ಬರುವಂತಹ ಅರ್ಜುನನ ಮಗ. ಸದ್ಯ ಈ ಕ್ಯಾರೆಕ್ಟರ್ ನಟಿಗೆ ತುಂಬಾ ಇಷ್ಟವಂತೆ. 
 

ಮಲಯಾಲಂ ಸಿನಿಮಾ ಪ್ರೇಮಂ ಮೂಲಕ ಜನಪ್ರಿಯತೆ ಪಡೆದ ನಟಿ ಸಾಯಿ ಪಲ್ಲವಿಗೆ 32 ವರ್ಷವಾಗಿದ್ದು ಇನ್ನೂ ಸಿಂಗಲ್. ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಸಾಯಿಪಲ್ಲವಿ ಸಿಂಪ್ಲಿ ಸಿಟಿಗೆ ಜೊತೆ ಅದ್ಭುತ ನಟನೆ, ಡ್ಯಾನ್ಸಿಂಗ್ ಕೌಶಲ್ಯಕ್ಕೆ ಅದೆಷ್ಟೋ ಹುಡುಗರು ಫಿದಾ ಆಗಿದ್ದಾರೆ. ಹಾಗಾಗಿ ಅವರಿಗೆ ಲವ್ ಆಗಿದ್ದು ಕೇಳಿ ಶಾಕ್ ಆಗಿದ್ದು, ಅದು ಮಹಾಭಾರತದ ಕ್ಯಾರೆಕ್ಟರ್ ಅನ್ನೋದು ಗೊತ್ತಾದ ಮೇಲೆ ನಿಟ್ಟುಸಿರು ಬಿಟ್ಟಿದ್ದಾರೆ. 
 

ಇನ್ನು ತಮಿಳು ಮತ್ತು ತೆಲುಗು ಸಿನಿಮಾರಂಗದಲ್ಲಿ ಅದ್ಭುತವಾದ ಮತ್ತು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸಾಯಿ ಪಲ್ಲವಿ ಸದ್ಯದ ಬ್ಯುಸಿ ನಟಿ. ಇವರ ಕೈಯಲ್ಲಿ ಒಂದು ತಮಿಳು, ಒಂದು ತೆಲುಗು ಹಾಗೂ ಎರಡು ಬಾಲಿವುಡ್ ಸಿನಿಮಾಗಳು ಇವೆ. 
 

ದೇಶದ ಬಹು ನಿರೀಕ್ಷಿತ ಚಿತ್ರ ರಾಮಾಯಣದಲ್ಲಿ (Ramayan) ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ. ಈ ಪಾತ್ರಕ್ಕಾಗಿ ನಟಿ 50 ಕೋಟಿ ಪಡೆದಿದ್ದಾರೆ ಎನ್ನುವ ಸುದ್ದಿಯೂ ಎಲ್ಲೆಡೆ ಹರಿದಾಡುತ್ತಿದೆ, ಅದು ನಿಜ ಹೌದೋ ಅಲ್ವೋ) ಗೊತ್ತಿಲ್ಲ. ಇನ್ನು ಈ ಸಿನಿಮಾದಲ್ಲಿ ರಣ್ ಬೀರ್ ಕಪೂರ್ (Ranbeer Kapoor) ರಾಮನಾಗಿ ನಟಿಸುತ್ತಿದ್ದಾರೆ. ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ. 
 

Latest Videos

click me!