ಅಲ್ಲು ಅರ್ಜುನ್ ಪುಷ್ಪಾ ಚಿತ್ರದ ಯಶಸ್ಸನ್ನು ಕರಣ್ ಉಲ್ಲೇಖ ಮಾಡಿದರು. ಕಮರ್ಷಿಯಲ್ ಆಗಿ ತೆಲುಗು ಚಿತ್ರರಂಗ ಸಾಧನೆ ಮಾಡುತ್ತಿದೆ ಎಂದರು. ವಿಶೇಷ ಪ್ರಮೋಶನ್ ಮಾಡಲಿಲ್ಲ, ಪೋಸ್ಟರ್ ಗಳನ್ನು ಹಂಚಲಿಲ್ಲ ಆದರೂ ಪುಷ್ಪಾ ಅತ್ಯುತ್ತಮ ಸಾಧನೆ ಮಾಡಿದೆ ಎಂದು ಕೊಂಡಾಡಿದರು.
ಧನುಷ್ ಅಸುರನ್ ಚಿತ್ರದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿರುವ ಕರಣ್ ಜೋಹರ್ ಚಿತ್ರ ನಿರ್ಮಾಣದ ಕೋನವೇ ಬದಲಾಗಿದೆ ಎಂದಿದ್ದಾರೆ. ಪ್ರತಿಯೊಬ್ಬರು ಹೊಸ ದೃಷ್ಟಿಯಲ್ಲಿ ಯೋಚನೆ ಮಾಡುತ್ತಿದ್ದಾರೆ ಎಂದರು.
ಪಾನ್ ಇಂಡಿಯಾ ಕ್ರೇಜ್ ರಾಜಮೌಳಿ ಅವರ ಬಾಹುಬಲಿ ಸಿನಿಮಾದಿಂದ ಆರಂಭವಾಯಿತು. ಬಾಹುಬಲಿ 112 ಕೋಟಿ ರೂ. ವಹಿವಾಟು ನಡೆಸಿತು ಎಂಬುದನ್ನು ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ರಾಜಮೌಳಿಯವರ ಮಕ್ಕಿ ಸಿನಿಮಾ ಹಿಂದಿ ಬೆಲ್ಟ್ ನಲ್ಲಿ ಕೇವಲ ಒಂದು ಕೋಟಿ ಸಂಪಾದನೆ ಮಾಡಿತು. ಆದರೆ ದಕ್ಷಿಣ ಭಾರತಕ್ಕೆ ಹೋಲಿಕೆ ಮಾಡಿದರೆ ಈ ಪರಿಸ್ಥಿತಿಯೇ ಬೇರೆ ಎಂದರು.
ಮುಂಬರುವ RRR ಸಿನಿಮಾ ಸಹ ಕ್ರೇಜ್ ಸೃಷ್ಟಿ ಮಾಡಿದ್ದು ಮೊದಲ ದಿನವೇ ಮೂವತ್ತು ಕೋಟಿ ರೂ. ಗಳಿಕೆ ಮಾಡಿಕೊಳ್ಳಬಹುದು ಎಂಬುದನ್ನು ಒಪ್ಪಿಕೊಂಡಿದ್ದಾರೆ.