Nysa Devgn Nightout: ಬಾಡಿ ಶೇಮಿಂಗ್ ಮಾಡಿದ ನೆಟ್ಟಿಗರು

First Published | Dec 29, 2021, 9:05 PM IST

Nysa Devgn Nightout: ಬಾಲಿವುಡ್ ನಟಿ ಕಾಜೊಲ್ ಮಗಳು ಇತ್ತೀಚೆಗೆ ಗೆಳೆಯನ ಜೊತೆ ನೈಟ್ಔಟ್‌ಗೆ ಬಂದಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದ್ದಾರೆ. ಆದರೆ ಸ್ಟಾರ್ ಕಿಡ್ ಮೈಬಣ್ಣದ ಬಗ್ಗೆ ಮಾತನಾಡಿರೋ ನೆಟ್ಟಿಗರು ಇಷ್ಟು ಬೆಳ್ಳಗಾಗಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಅಜಯ್ ದೇವಗನ್ ಹಾಗೂ ಕಾಜೊಲ್ ಮಗಳು ನಿಸಾ ದೇವಗನ್ ಬೆಳೆದು ದೊಡ್ಡವಳಾಗಿದ್ದಾಳೆ. ಬಹುಶಃ ಮುಂದಿನ ಕೆಲವು ವರ್ಷಗಳಲ್ಲಿ ಸ್ಟಾರ್ ಕಿಡ್‌ ಬಾಲಿವುಡ್ ಎಂಟ್ರಿಯನ್ನೂ ನಿರೀಕ್ಷಿಸಬಹುದು. ಸದ್ಯ ನಿಸಾ ಸುದ್ದಿಯಾಗಿರುವುದು ಆಕೆಯ ಡಿನ್ನರ್ ನೈಟ್‌ಔಟ್ ಬಗ್ಗೆ. ಹೌದು, ಗೆಳೆಯನ ಜೊತೆ ಹೊರಗೆ ಕಾಣಿಸಿಕೊಂಡ ನಟಿ ಈಗ ಸುದ್ದಿಯಾಗಿದ್ದಾರೆ.

ವೈಟ್ ಶಾರ್ಟ್ ಡ್ರೆಸ್ ಧರಿಸಿದ್ದ ನಟಿ ಸಿಂಪಲ್ ಆಗಿ ಸುಂದರವಾಗಿ ಕಾಣಿಸುತ್ತಿದ್ದರು. ಆದರೆ ನೆಟ್ಟಿಗರ ಗಮನ ಸೆಳೆದಿದ್ದು ನಿಸಾರ ಮೈಬಣ್ಣ. ಸ್ಟಾರ್ ಕಿಡ್ ಇಷ್ಟು ಬೆಳ್ಳಗಾಗಿದ್ದು ಹೇಗೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

Tap to resize

ನಿಸಾ ಟ್ರೋಲ್ ರಾಡಾರ್‌ನಲ್ಲಿರುವುದು ಇದೇ ಮೊದಲಲ್ಲ, ಈ ಹಿಂದೆಯೂ ಅವರು ತಮ್ಮ ಸ್ಕಿನ್ ಕಲರ್‌ ಹಾಗೂ ಅವರ ಬಟ್ಟೆಗಳ ಬಣ್ಣದ ಆಯ್ಕೆಗಾಗಿ ಟೀಕೆಗಳನ್ನು ಎದುರಿಸಿದ್ದರು. ನಿಸಾ ಮಾತ್ರವಲ್ಲ, ಶಾರುಖ್ ಖಾನ್ ಅವರ ಮಗಳು ಸುಹಾನಾ ಕೂಡ ಇಂಟರ್ನೆಟ್‌ನಲ್ಲಿ ತ್ವಚೆಯ ಬಣ್ಣದಿಂದಾಗಿ ಟ್ರೋಲ್ ಆಗುತ್ತಿರುತ್ತಾರೆ.

ಬಾಲಿವುಡ್ ಸ್ಟಾರ್ ಕಾಜೊಲ್ ಅವರ ಮೊದಲ ಪುತ್ರಿ ನಿಸಾ. ಅವರು ಸಿಂಗಾಪುರ್‌ನಲ್ಲಿ ಕಲಿಯುತ್ತಿದ್ದಾರೆ. ನಿಸಾ ಅವರು ಸ್ನೇಹಿತರೊಂದಿಗೆ ಹೊರಗಡೆ ಹ್ಯಾಂಗೌಟ್ ಮಾಡಲು ಇಷ್ಟಪಡುತ್ತಾರೆ. ಆದರೆ ಈ ಬಾರಿ ಮಾತ್ರ ನೆಟ್ಟಿಗರು ಸ್ಟಾರ್‌ ಕಿಡ್‌ನ್ನು ಟ್ರೋಲ್ ಮಾಡುತ್ತಿದ್ದಾರೆ.

ಇನ್ನು ನಿಸಾ ಜೊತೆಗಿರೋ ಹುಡುಗ ಯಾರು ಎಂಬುದರ ಬಗ್ಗೆ ನೆಟ್ಟಿಗರು ಚರ್ಚಿಸುತ್ತಿದ್ದು ನಟ ಗೋವಿಂದ ಅವರ ಮಗ ಎಂದು ಹೇಳುತ್ತಿದ್ದಾರೆ. ಆದರೆ ಇಬ್ಬರೂ ಮಾಸ್ಕ್ ಧರಿಸಿದ್ದು ಯುವಕನ ಮುಖ ಸ್ಪಷ್ಟವಾಗಿಲ್ಲ

Latest Videos

click me!