‘ಧುರಂಧರ್’ ನಟ Akshaye Khanna ತೆಲುಗಿಗೆ ಎಂಟ್ರಿ: ನಾಯಕಿಯಾಗ್ತಿದ್ದಾರೆ ಕನ್ನಡತಿ Bhoomi Shetty

Published : Jan 02, 2026, 10:26 AM IST

ಕನ್ನಡ ಕಿರುತೆರೆ ನಟಿ ಭೂಮಿ ಶೆಟ್ಟಿ ಅದೃಷ್ಟ (Bhoomi Shetty) ಖುಲಾಯಿಸಿದೆ. ‘ಧುರಂಧರ್’ ನಟ ಅಕ್ಷಯ್ ಖನ್ನಾ ‘ಮಹಾಕಾಳಿ’ ಸಿನಿಮಾ ಮೂಲಕ ತೆಲುಗಿಗೆ ಎಂಟ್ರಿ ಕೊಡುತ್ತಿದ್ದು, ಆ ಸಿನಿಮಾದಲ್ಲಿ ನಾಯಕಿಯಾಗಿ ಭೂಮಿ ಶೆಟ್ಟಿ ನಟಿಸುತ್ತಿದ್ದಾರೆ. ಈ ಮಾಹಿತಿಯನ್ನು ನಿರ್ದೇಶಕಿ ದೃಢಪಡಿಸಿದ್ದಾರೆ. 

PREV
16
ಮಹಾಕಾಳಿ ಸಿನಿಮಾ

ಕಳೆದ ವರ್ಷ ‘ಹನುಮಾನ್’ ಸಿನಿಮಾ ಮೂಲಕ ಗಮನ ಸೆಳೆದಿದ್ದ ಸಿನಿಮಾ ನಿರ್ದೇಶಕ ಪ್ರಶಾಂತ್ ಅವರ ಪಿವಿಸಿ ಯೂನಿವರ್ಸ್‌ (Prasanth Varma Cinematic Universe) ಅಡಿಯಲ್ಲಿ ಇದೀಗ ‘ಮಹಾಕಾಳಿ’ ಎನ್ನುವ ಹೊಸ ಸಿನಿಮಾಗೆ ಸಿದ್ಧವಾಗುತ್ತಿದ್ದು, ಈ ಸಿನಿಮಾಗೆ ಕನ್ನಡತಿ ಭೂಮಿ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದಾರೆ.

26
ಅಪರ್ಣಾ ಕೊಲ್ಲೂರು ನಿರ್ದೇಶನ

ಪಿವಿಸಿ ಯೂನಿವರ್ಸ್ ಜೊತೆ ಸೇರಿ ಅಪರ್ಣಾ ಕೊಲ್ಲೂರು ನಿರ್ದೇಶನ ಮಾಡುತ್ತಿರುವ ಭಾರತದ ಮೊದಲ ಮಹಿಳಾ ಸೂಪರ್‌ಹೀರೋ ಚಿತ್ರವಾಗಿ 'ಮಹಾಕಾಳಿ' ತೆರೆಗೆ ಬರಲಿದ್ದು. ಈ ಚಿತ್ರದಲ್ಲಿ ಮಹಾಕಾಳಿಯಾಗಿ ಕನ್ನಡ ಕಿರುತೆರೆ ನಟಿ ಭೂಮಿ ಶೆಟ್ಟಿ ನಟಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ.

36
ಅಕ್ಷಯ್ ಖನ್ನಾ ನಟನೆ

ಇದೀಗ ಬಂದಿರುವ ಸುದ್ದಿ ಏನೆಂದರೆ, ಈ ಸಿನಿಮಾದಲ್ಲಿ ‘ದುರಂಧರ್’ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿ, ಜನಮನ ಗೆದ್ದಿರುವ ನಟ ಅಕ್ಷಯ್ ಖನ್ನಾ ಕೂಡ ನಟಿಸುತ್ತಿದ್ದಾರೆ ಎನ್ನಲಾಗುತ್ತಿದ್ದು. ಅದನ್ನು ನಿರ್ದೇಶಕಿ ಪೂಜಾ ಅಪರ್ಣ ಕೊಲ್ಲೂರು ದೃಢ ಪಡಿಸಿದ್ದಾರೆ.

46
ಖುಲಾಯಿಸಿದ ಭೂಮಿ ಶೆಟ್ಟಿ ಅದೃಷ್ಟ

ಅಪರ್ಣ ಕೊಲ್ಲೂರು ಈಗಾಗಲೇ ‘ಮಹಾಕಾಳಿ’ ಸಿನಿಮಾ ಬಗ್ಗೆ ಅಕ್ಷಯ್ ಖನ್ನಾ ಜೊತೆ ಮಾತುಕತೆ ನಡೆಸಿದ್ದು, ಅಕ್ಷಯ್ ಕೂಡ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆ ಮೂಲಕ ಭೂಮಿ ಶೆಟ್ಟಿಗೆ ಸ್ಟಾರ್ ನಟನ ಜೊತೆ ನಟಿಸುವ ಅದ್ಭುತ ಅವಕಾಶ ಸಿಕ್ಕಿದೆ.

56
ಕಾಳಿಯಾಗಿ ಭೂಮಿ ಶೆಟ್ಟಿ

‘ಮಹಾಕಾಳಿ’ ಚಿತ್ರವನ್ನು ಪೂಜಾ ಅಪರ್ಣ ಕೊಲ್ಲೂರು ನಿರ್ದೇಶಿಸುತ್ತಿದ್ದಾರೆ. ಖ್ಯಾತ ನಿರ್ಮಾಪಕ ರಮೇಶ್ ದುಗ್ಗಲ್ ನಿರ್ಮಿಸುತ್ತಿದ್ದಾರೆ. ಕನ್ನಡ ನಟಿ ಭೂಮಿಶೆಟ್ಟಿ ಮಹಾಕಾಳಿ ಪಾತ್ರದಲ್ಲಿ ಫಿಯರ್ ಲೆಸ್ ಆಗಿ ಫಸ್ಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ಅವಕಾಶದಿಂದ ವಂಚಿತರಾಗಿರುವ ಭೂಮಿ ಶೆಟ್ಟಿಗೆ ತೆಲುಗಿನಲ್ಲಿ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ.

66
ಪಂಚ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ

'ಮಹಾಕಾಳಿ' ಚಿತ್ರದ ಕಥೆಯು ಪಶ್ಚಿಮ ಬಂಗಾಳದ ಹಿನ್ನೆಲೆಯಲ್ಲಿ ನಡೆಯುತ್ತದೆ ಎನ್ನುವುದಾಗಿ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿದೆ. ಈ ಚಿತ್ರ ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories