3ನೇ ಪತ್ನಿಯಾಗುವ ಆಫರ್, ತಿಂಗಳಿಗೆ 11 ಲಕ್ಷ ರೂ ಸೇರಿ ಐಷಾರಾಮಿ ಜೀವನ ತಿರಸ್ಕರಿಸಿದ ನಟಿ

Published : Jan 01, 2026, 04:44 PM IST

ಶ್ರೀಮಂತ ಉದ್ಯಮಿಯ 3ನೇ ಪತ್ನಿಯಾಗುವ ಆಫರ್, ತಿಂಗಳಿಗೆ 11 ಲಕ್ಷ ರೂ ಸೇರಿ ಐಷಾರಾಮಿ ಜೀವನ ತಿರಸ್ಕರಿಸಿದ ನಟಿ, ಫ್ಲ್ಯಾಟ್, ಐಷಾರಾಮಿ ಕಾರು ಸೇರಿದಂತೆ ಲಕ್ಷುರಿ ಲೈಫ್‌ಸ್ಟೈಲ್‌ನಲ್ಲಿ ಜೀವನ ಆಫರ್ ನೀಡಲಾಗಿತ್ತು. ಯಾರು ಆ ನಟಿ? 

PREV
16
ನಟಿಯ ದಿಟ್ಟ ನಿರ್ಧಾರ

ಶ್ರೀಮಂತ ಉದ್ಯಮಿ, ಹಲವು ಉದ್ಯಮಗಳು, ಪ್ರತಿ ದಿನ ಆದಾಯ, ಐಷಾರಾಮಿ ಮನೆ, ಕಾರು, ಬಂಗಲೆ ಮೂಲಕ ಜನಪ್ರಿಯವಾಗಿರುವ ಉದ್ಯಮಿಗೆ ನಟಿಯನ್ನು ಮದುವೆಯಾಗುವ ಆಸೆ. ಉದ್ಯಮಿ ಈಗಾಗಲೇ 2 ಮದುವೆಯಾಗಿ ದೂರವಾಗಿದ್ದರು. ಮೂರನೇ ಮದುವೆ ನಟಿಯೊಂದಿಗೆ ಆಗಬೇಕು ಅನ್ನೋ ಅಸೆ.ಇದಕ್ಕಾಗಿ ಉದ್ಯಮಿ ದುಬಾರಿ ಆಫರ್ ನೀಡಿದ್ದರು. ಆದರೆ ಈ ಆಫರ್‌ನ್ನು ನಟಿ ತಿರಸ್ಕರಿಸಿದ್ದಾರೆ.

26
ಯಾರು ಈ ನಟಿ?

ಮಲೇಷಿಯಾದ ನಟಿ ಆ್ಯಮಿ ನೂರ್ ಟಿನಿ. 29 ವರ್ಷದ ಟಿನಿ ಪಾಡ್‌ಕಾಸ್ಟ್ ಒಂದರಲ್ಲಿ ತಮಗೆ ಬಂದಿದ್ದ ಮದುವೆ ಆಫರ್ ಕುರಿತು ಬಹಿರಂಗಪಡಿಸಿದ್ದಾರೆ. ಆತ ವಿವಿಐಪಿ ಎಂದಿದ್ದಾರೆ. ಅವರ ಹೆಸರು ಬಹಿರಂಗಪಡಿಸುವುದಿಲ್ಲ ಎಂದಿದ್ದಾರೆ. ಆದರೆ ಆ ವ್ಯಕ್ತಿ ಮದುವೆಯಾಗಲು ಭರ್ಜರಿ ಆಫರ್ ನೀಡಿದ್ದರು ಎಂದು ಹೇಳಿದ್ದಾರೆ. ಇದೇ ವೇಳೆ ಏನೆಲ್ಲಾ ಆಫರ್ ಮಾಡಿದ್ದರು ಅನ್ನೋ ವಿವರವನ್ನು ಬಹಿರಂಪಡಿಸಿದ್ದಾರೆ.

36
ಖರ್ಚಿಗಾಗಿ ತಿಂಗಳಿಗೆ 11 ಲಕ್ಷ ರೂಪಾಯಿ

ಉದ್ಯಮಿಗೆ 3ನೇ ಮದುವೆಯಾಗುವ ಆಸೆ. ತನ್ನ ಪತ್ನಿ ಆ್ಯಮಿ ನೂರ್ ಟಿನಿ ಆಗಿರಬೇಕೆಂಬ ಬಯಕೆ. ಆ್ಯಮಿ ನೂರ್ ಟಿನಿಗೆ ಮೂರನೇ ಪತ್ನಿಯಾಗಿ ತನ್ನ ಬಾಳಲ್ಲಿ ಬಂದರೆ ಪ್ರತಿ ತಿಂಗಳು ಖರ್ಚಿಗಾಗಿ 11 ಲಕ್ಷ ರೂಪಾಯಿ ನೀಡುತ್ತೇನೆ ಎಂದು ಭರವಸೆ ನೀಡಿದ್ದರು. ಇಷ್ಟೇ ಅಲ್ಲ ಆ್ಯಮಿ ಹೆಸರಿಗೆ ಒಂದು ಬಂಗಲೆ, ಐಷಾರಾಮಿ ಕಾರು, 10 ಎಕರೆ ಜಮೀನು ಜೊತೆಗೆ ಪತ್ನಿಯಾಗಿ ಸಿಗುವ ಎಲ್ಲಾ ಐಷಾರಾಮಿ ಜೀವನವನ್ನು ನೀಡುವುದಾಗಿ ವಿವಿಐಪಿ ಆಫರ್ ಮಾಡಿದ್ದರು ಎಂದು ಆ್ಯಮಿ ಹೇಳಿದ್ದಾರೆ.

46
ವಿವಿಐಪಿ ವಯಸ್ಸು ಬಹಿರಂಗಪಡಿಸಿದ ನಟಿ

ತನ್ನ ಬಳಿ 3ನೇ ಮದುವೆಯಾಗುವಂತೆ ಕೇಳಿದ ವಿವಿಐಪಿ ವಯಸ್ಸು ಸರಿಸುಮಾರು ತನ್ನ ತಂದೆಯ ವಯಸ್ಸು ಎಂದಿದ್ದಾರೆ. ಫೋನ್ ಮೂಲಕ ಸಂಪರ್ಕ ಮಾಡಿದ್ದ ವ್ಯಕ್ತಿ ತನ್ನ ಹೆಸರು, ವಿಳಾಸ ಹೇಳಿಕೊಂಡು ಪರಿಚಯ ಮಾಡಿದ್ದರು. ಬಳಿಕ ನೇರವಾಗಿ ವಿಷಯಕ್ಕೆ ಬಂದು ಆಫರ್ ಮುಂದಿಟ್ಟಿದ್ದರು ಎಂದಿದ್ದಾರೆ.

56
ಮರುಕ್ಷಣ ಯೋಚನೆ ಮಾಡದೆ ಆಫರ್ ತಿರಸ್ಕರಿಸಿದ ನಟಿ

ಆ್ಯಮಿ ನೂರ್ ಟಿನಿ ಒಂದು ಕ್ಷಣ ಯೋಚನೆ ಮಾಡಿದ ಆಫರ್ ತಿರಸ್ಕರಿಸಿದ್ದರು. ಆಸ್ತಿ, ಸಂಪತ್ತಿಗಾಗಿ ನಾನು ಮದುವೆಯಾಗಲಾರೆ. ಮದುವೆಯಾಗಿ ವೈವಾಹಿಕ ಜೀವನ ಸಂತೋಷವಾಗಿರಬೇಕು. ಅಲ್ಲಿ ಹಣ ಮುಖ್ಯವಲ್ಲ. ನನಗೆ ಪ್ರೀತಿ, ಸಂತೋಷ, ಸಂಬಂಧಗಳು ಮುಖ್ಯ ಎಂದು ಆ್ಯಮಿ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಹೇಳಿದ್ದಾರೆ.

ಮರುಕ್ಷಣ ಯೋಚನೆ ಮಾಡದೆ ಆಫರ್ ತಿರಸ್ಕರಿಸಿದ ನಟಿ

66
ಹಲವು ಪ್ರಪೋಸಲ್ ಕುರಿತು ಆ್ಯಮಿ ಮಾತು

ನಟಿಯಾಗಿ, ಮಾಜಿ ಮಿಸ್ ವರ್ಲ್ಡ್ ಪ್ರಶಸ್ತಿ ವಿಜೇತ ಆ್ಯಮಿಗೆ ಹಲವು ಪ್ರಪೋಸಲ್‌ಗಳು ಬಂದಿದೆ. ಈ ಪೈಕಿ ಕೆಲ ಪ್ರಪೋಸಗಳು ಇದೇ ರೀತಿ ಇತ್ತು. ಹಣದ ಆಮಿಷ ಒಡ್ಡಿ ಪ್ರೀತಿಸಲು, ಮದುವೆಯಾಗಲು ಹೇಳುತ್ತಾರೆ. ಸಂಬಂಧಕ್ಕೆ ಬೆಲೆ ಇಲ್ಲ. ಎಲ್ಲವನ್ನು ಹಣದಿಂದ ಅಳೆಯುತ್ತಾರೆ ಎಂದು ಆ್ಯಮಿ ಅಸಮಾಧಾನ ಹೊರಹಾಕಿದ್ದಾರೆ.

ಹಲವು ಪ್ರಪೋಸಲ್ ಕುರಿತು ಆ್ಯಮಿ ಮಾತು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories