ಮಹಾರಾಷ್ಟ್ರದಿಂದ ನನ್ನನ್ನು ಓಡಿಸಿದವರಿಗೆ ಈಗ ತಕ್ಕ ಶಾಸ್ತಿ ಆಗಿದೆ: ಕಂಗನಾ ಈ ಹೇಳಿಕೆ ಹಿಂದೆ ಇರೋ ಕಥೆ ಇದು..!

Published : Jan 17, 2026, 05:49 PM IST

'ಮಹಾರಾಷ್ಟ್ರ ಬಿಎಂಸಿ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿನಿಂದ ನಾನು ಸಂಪೂರ್ಣವಾಗಿ ಸಂತೋಷಗೊಂಡಿದ್ದೇನೆ. ಈ ಅದ್ಭುತ ಸಾಧನೆಗಾಗಿ ಪ್ರಧಾನಿ ನರೇಂದ್ರ ಮೋದಿ ಜಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಮಹಾರಾಷ್ಟ್ರದ ಇಡೀ ಬಿಜೆಪಿ ಕುಟುಂಬವನ್ನು ನಾನು ಅಭಿನಂದಿಸುತ್ತೇನೆ"

PREV
18

ಮುಂಬೈ: ಭಾರತದ ಅತ್ಯಂತ ಶ್ರೀಮಂತ ಪುರಸಭೆಯಾದ ಬಿಎಂಸಿ (BMC) ಚುನಾವಣೆಯಲ್ಲಿ ಪಡೆದ ಐತಿಹಾಸಿಕ ಗೆಲುವಿಗಾಗಿ ನಟಿ ಮತ್ತು ಸಂಸದೆ ಕಂಗನಾ ರಣಾವತ್ (Kangana Ranaut)ಅವರು ಖುಷಿಯಾಗಿದ್ದಾರೆ. ಈ ಗೆಲವಿನಿಂದ ಬೀಗಿದ ಕಂಗನಾ, ತಮ್ಮ ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಬಿಜೆಪಿ ನಾಯಕರನ್ನು ಅಭಿನಂದಿಸಿದ್ದಾರೆ.

28

ಕಂಗನಾ ರಣಾವತ್ ಕೋಪಕ್ಕೆ ಸಕಾರಣವಿದೆ. 2020ರಲ್ಲಿ ಅವಿಭಜಿತ ಶಿವಸೇನೆ ಅಧಿಕಾರದಲ್ಲಿದ್ದಾಗ ಬೃಹತ್ ಮುಂಬಯಿ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮುಂಬೈನಲ್ಲಿರುವ ಅವರ ಬಂಗಲೆಗೆ ಹೊಂದಿಕೊಂಡ ಕಚೇರಿಯನ್ನು ಶಿವಸೇನೆ ಸರ್ಕಾರ ಕೆಡವಿತ್ತು. ಆಗ ತೊಂದರೆ ಅನುಭವಿಸಿದ್ದ ನಟಿಗೆ ಇಂದು ನ್ಯಾಯ ಸಿಕ್ಕಿದೆ ಎನ್ನಲಾಗುತ್ತಿದೆ. ಬಿಎಂಸಿ ಚುನಾವಣೆಯಲ್ಲಿ ಶಿವಸೇನೆಯನ್ನು ಕೆಳಗಿಳಿಸಲಾಗಿದೆ, ಬಿಜೆಪಿ ಮಿತ್ರಪಕ್ಷ ಗುದ್ದಗೆ ಏರಲು ಸಜ್ಜಾಗಿದೆ.

38

ಈ ಬಗ್ಗೆ ನಟಿ ಕಂಗನಾ ರಣಾವತ್ 'ಮಹಾರಾಷ್ಟ್ರ ಬಿಎಂಸಿ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿನಿಂದ ನಾನು ಸಂಪೂರ್ಣವಾಗಿ ಸಂತೋಷಗೊಂಡಿದ್ದೇನೆ. ಈ ಅದ್ಭುತ ಸಾಧನೆಗಾಗಿ ಪ್ರಧಾನಿ ನರೇಂದ್ರ ಮೋದಿ ಜಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಮಹಾರಾಷ್ಟ್ರದ ಇಡೀ ಬಿಜೆಪಿ ಕುಟುಂಬವನ್ನು ನಾನು ಅಭಿನಂದಿಸುತ್ತೇನೆ" ಎಂದು ಕಂಗನಾ ರಣಾವತ್ ತಿಳಿಸಿದ್ದಾರೆ. ಇದು ನಮ್ಮೆಲ್ಲರ ಪಾಲಿಗೆ ದೊಡ್ಡ ಗೆಲುವು" ಎಂದಿದ್ದಾರೆ ಕಂಗನಾ ರಣಾವತ್.

48

ಕಂಗನಾ ಕೋಪ ಈಗ ತಣ್ಣಗಾಗಿದೆ. 'ನನ್ನನ್ನು ನಿಂದಿಸಿದವರು, ನನ್ನ ಮನೆಯನ್ನು ಕೆಡವಿದವರು, ಮಹಾರಾಷ್ಟ್ರ ತೊರೆಯುವಂತೆ ಬೆದರಿಕೆ ಹಾಕಿದವರಿಗೆ, ಇಂದು ಮಹಾರಾಷ್ಟ್ರವೇ ಅವರನ್ನು ತೊರೆದಿದೆ" ಎಂದಿದ್ದಾರೆ ಕಂಗನಾ ರಣಾವತ್. ಜನತಾ ಜನಾರ್ದನ್ ಅಂತಹ ಮಹಿಳಾ ದ್ವೇಷಿಗಳು, ಬೆದರಿಸುವವರು ಮತ್ತು ಸ್ವಜನಪಕ್ಷಪಾತ ಮಾಫಿಯಾಗಳಿಗೆ ಮಹಾರಾಷ್ಟ್ರ ಸರಿಯಾದ ಸ್ಥಾನವನ್ನು ತೋರಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ" ಎಂದಿದ್ದಾರೆ ಕಂಗನಾ.

58

2020ರ ಸೆಪ್ಟೆಂಬರ್‌ನಲ್ಲಿ ಮುಂಬೈ ಮಹಾನಗರ ಪಾಲಿಕೆಯು ನಟಿ ಕಂಗನಾ ಒಡೆತನದ ಕಚೇರಿಯನ್ನು ಧ್ವಂಸಗೊಳಿಸಿದಾಗ, ನಟಿ ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ನೀಡಿದ್ದ ಎಚ್ಚರಿಕೆ ಇಂದು 2026ರಲ್ಲಿ ನಿಜವಾಗಿದೆ. ಯಾಕೆಂದರೆ, ಕಳೆದ 30 ವರ್ಷಗಳಿಂದ ಮುಂಬೈ ಮಹಾನಗರ ಪಾಲಿಕೆಯಲ್ಲಿ ಅಧಿಪತ್ಯ ಸಾಧಿಸಿದ್ದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಅಧಿಕಾರ ಈಗ ಕಳೆದುಕೊಂಡಿದೆ. ಅದರಂತೆ, ಈ ಐತಿಹಾಸಿಕ ಬದಲಾವಣೆಯು ಮುಂಬೈ ರಾಜಕೀಯದಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ ಎಂದೇ ಹೇಳಲಾಗುತ್ತಿದೆ.

68

2020ರ ಸೆಪ್ಟೆಂಬರ್‌ನಲ್ಲಿ ಕಂಗನಾ ರನೌತ್ ಅವರ ಮುಂಬೈನ ಪಾಲಿ ಹಿಲ್‌ನಲ್ಲಿರುವ ಕಚೇರಿಯನ್ನು ಕಟ್ಟಡ ನಿಯಮಗಳ ಉಲ್ಲಂಘನೆ ಮತ್ತು ಅಕ್ರಮ ನಿರ್ಮಾಣ ಎಂದು ಬೃಹತ್ ಮುಂಬೈ ಮಹಾನಗರಪಾಲಿಕೆಯು ಅವರ ಕಟ್ಟಡವನ್ನು ಧ್ವಂಸಗೊಳಿಸಿತ್ತು. 

78

ಈ ವೇಳೆ, ಅಂದಿನ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರ ವಿರುದ್ಧ ತೀವ್ರು ವಾಗ್ದಾಳಿ ನಡೆಸಿದ್ದ ಕಂಗನಾ "ಉದ್ಧವ್ ಠಾಕ್ರೆ, ನಿನಗೆ ಏನೆನಿಸುತ್ತದೆ? ಇಂದು ನನ್ನ ಮನೆ ಒಡೆದಿದೆ, ನಾಳೆ ನಿನ್ನ ಅಹಂಕಾರವು ಮುರಿಯುತ್ತದೆ" ಎಂದು ವಿಡಿಯೋ ಸಂದೇಶದ ಮೂಲಕ ನೇರ ಎಚ್ಚರಿಕೆ ನೀಡಿದ್ದರು.

88

2026ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮೈತ್ರಿಕೂಟ ಭಾರೀ ಜಯಗಳಿಸಿದೆ. ಮಹಾಯುತಿ ಮೈತ್ರಿಕೂಟವು 227 ಸ್ಥಾನಗಳ ಪೈಕಿ ಬಹುಪಾಲು ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರ ಹಿಡಿದಿದೆ. ವಿಶೇಷವೆಂದರೆ, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯ ಸದಸ್ಯರೊಬ್ಬರು ಮುಂಬೈ ಮೇಯರ್ ಆಗಿ ಆಯ್ಕೆಯಾಗಲಿದ್ದಾರೆ. ಇದರಿಂದ ಕಂಗನಾ ಸಖತ್ ಖುಷಿಯಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories