2026ರ ಆರಂಭದಲ್ಲೇ ಖ್ಯಾತ ನಟಿ ಬದುಕಲ್ಲಿ ಬಿರುಗಾಳಿ, ಮದುವೆಯಾದ ಎರಡೇ ವರ್ಷಕ್ಕೆ ನಟಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಹೊಸ ವರ್ಷ ಆರಂಭದಲ್ಲೇ ಸೆಲೆಬ್ರೆಟಿಗಳ ವೈವಾಹಿಕ ಜೀವನ ಭಾರಿ ಚರ್ಚೆಗೆ ಗ್ರಾಸವಾಗಿದೆ.
2025ರಲ್ಲಿ ಹಲವು ಸೆಲೆಬ್ರೆಟಿಗಳ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಹಲವು ಡಿವೋರ್ಸ್ ಪಡೆದು ಬೇರೆಯಾಗಿದ್ದರೆ, ಮತ್ತೆ ಕೆಲವರು ಕೋರ್ಟ್ ವಿಚಾರಣೆ ಎದುರಿಸುತ್ತಿದ್ದಾರೆ. ಇದೀಗ 2026ರ ಹೊಸ ವರ್ಷದ ಆರಂಭದಲ್ಲೇ ಖ್ಯಾತ ನಟಿ ವೈವಾಹಿಕ ಜೀವನ ಮುರಿದು ಬಿದ್ದಿದೆ. ನಟಿ ಮ್ಯಾಂಡಿ ಟಾಖರ್ ದಾಂಪತ್ಯ ಜೀವನದ ಮೊದಲ ಘಟ್ಟ ಅಂತ್ಯಗೊಂಡಿದೆ.
25
ಕೋರ್ಟ್ ಮೂಲಕ ಡಿವೋರ್ಸ್ ಪಡೆದ ನಟಿ
ಪಂಜಾಬಿ ನಟಿ ಮ್ಯಾಂಡಿ ಟಾಖರ್ ಹಿಂದಿ, ತಮಿಳು ಸೇರಿದಂತೆ ಕೆಲ ಭಾಷೆಗಳ ಸಿನಿಮಾದಲ್ಲಿ ನಟಿಸಿದ್ದಾರೆ. ಮದುವೆಯಾದ ಎರಡನೇ ವರ್ಷದಲ್ಲೇ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮ್ಯಾಂಡಿ ಟಾಖರ್ ಹಾಗೂ ಶೇಖರ್ ಕೌಶಾಲ್ ಮ್ಯೂಚ್ಯುವಲ್ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಪರಸ್ಪರ ಒಪ್ಪಿಗೆ ಮೂಲಕ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ.
35
2024ರ ಫೆಬ್ರವರಿಯಲ್ಲಿ ಮದುವೆ
ಮ್ಯಾಂಡಿ ಟಾಖರ್ ಹಾಗೂ ಶೇಖರ್ ಕೌಶಾಲ್ ಫೆಬ್ರವರಿ 13, 2024ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅದ್ಧೂರಿಯಾಗಿ ಈ ಜೋಡಿ ಮುದುವೆಯಾಗಿತ್ತು. ಹಿಂದೂ ಹಾಗೂ ಸಿಖ್ ಸಂಪ್ರದಾಯದಂತೆ ಮದುವೆ ನಡೆದಿತ್ತು. ಮದುವೆಯಾದ ಒಂದೇ ವರ್ಷದಲ್ಲಿ ಇಬ್ಬರು ಪರಸ್ಪರ ಮಾತುಕತೆ ನಡೆಸಿ ಬೇರೆಯಾಗಲು ನಿರ್ಧರಿಸಿದ್ದರು. 2025ರಿಂದ ಇಬ್ಬರು ಬೇರೆ ಬೇರೆಯಾಗಿ ನೆಲೆಸಿದ್ದಾರೆ.
ದೆಹಲಿ ಸಾಕೆತ್ ಜಿಲ್ಲಾ ಕೋರ್ಟ್‌ನಲ್ಲಿ ಶೇಖರ್ ಕೌಶಾಲ್ ಹಾಗೂ ಮ್ಯಾಂಡ ಟಾಖರ್ ಇಬ್ಬರು ಪರಸ್ಪರ ಒಪ್ಪಿಗೆ ಮೇರೆ ಡಿವೋರ್ಸ್‌ಗೆ ಅರ್ಜಿ ಹಾಕಿದ್ದಾರೆ. ಸೆಲೆಬ್ರೆಟಿಗಳ ಡಿವೋರ್ಸ್ ಕೇಸ್ ಕುರಿತು ನ್ಯಾಯಾಲಯ ಇಬ್ಬರ ಹೇಳಿಕೆ ದಾಖಲಿಸಿದೆ. ಈ ಮೂಲಕ ಸೆಲೆಬ್ರೆಟಿ ಜೋಡಿ ಅಧಿಕೃತವಾಗಿ ಬೇರೆಯಾಗಲು ಕಾನೂನು ಪ್ರಕ್ರಿಯೆಗಳು ಆರಂಭಗೊಂಡಿದೆ.
55
ಯಾರು ಮ್ಯಾಂಡಿ ಟಾಖರ್
ಮ್ಯಾಂಡಿ ಟಾಖರ್ ಭಾರತೀಯ ಮೂಲಕ ಬ್ರಿಟಿಷ್ ನಟಿ. ಪಂಜಾಬ್ ಮೂಲದವರಾಗಿರುವ ಮ್ಯಾಂಡಿ ಹಲವು ಪಂಜಾಬಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಹಿಂದಿ ಹಾಗೂ ತಮಿಳು ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಮ್ಯೂಸಿಕ್ ಆಲ್ಬಮ್ ವಿಡಿಯೋಗಳಲ್ಲೂ ಮ್ಯಾಂಡಿ ಟಾಖರ್ ಕಾಣಿಸಿಕೊಂಡಿದ್ದಾರೆ.
ಯಾರು ಮ್ಯಾಂಡಿ ಟಾಖರ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.