ಪಿರಿಯಡ್ಸ್ ಸಮಯದಲ್ಲಿ ಅನುಭವಿಸಿದ ಮುಜುಗರ ಹಂಚಿಕೊಂಡ ಜಯಾ ಬಚ್ಚನ್

Published : Nov 13, 2022, 02:50 PM IST

ಹಿರಿಯ ನಟಿ ಜಯಾ ಬಚ್ಚನ್ (Jaya Bachchan) ಸಂವಾದದಲ್ಲಿ ಪಿರಿಯಡ್ಸ್ ಸಮಯದಲ್ಲಿ ಹೊರಾಂಗಣ ಚಿತ್ರೀಕರಣಕ್ಕೆ ಹೋಗಬೇಕಾಗಿದ್ದ ಮತ್ತು ತೊಂದರೆಗಳನ್ನು ಎದುರಿಸಿದ ಸಮಯವನ್ನು ನೆನಪಿಸಿಕೊಂಡರು. ಅವರ ಪ್ರಕಾರ, ಅವರು ಆ ಸಮಯದಲ್ಲಿ ಪೊದೆಗಳ ಹಿಂದೆ ಚೆಂಜ್‌ ಮಾಡಬೇಕಾಗಿತ್ತು. ಏಕೆಂದರೆ ಅವರಿಗೆ ವ್ಯಾನಿಟಿ ವ್ಯಾನ್ ಸೌಲಭ್ಯವಿರಲಿಲ್ಲ ತಾವು ಅನುಭವಸುತ್ತಿದ್ದ ಮುಜುಗರವನ್ನು ಬಹಿರಂಗಪಡಿಸಿದ್ದಾರೆ ಹಿರಿಯ ನಟಿ. 

PREV
18
ಪಿರಿಯಡ್ಸ್ ಸಮಯದಲ್ಲಿ ಅನುಭವಿಸಿದ ಮುಜುಗರ ಹಂಚಿಕೊಂಡ ಜಯಾ ಬಚ್ಚನ್

ಜಯಾ ಬಚ್ಚನ್ ಮಗಳು ಶ್ವೇತಾ ನಂದಾ ಜೊತೆ  ಮೊಮ್ಮಗಳು ನವ್ಯಾ ನವೇಲಿ ನಂದಾ ಅವರ ಪಾಡ್‌ಕಾಸ್ಟ್ 'ವಾಟ್ ದಿ ಹೆಲ್ ನವ್ಯಾ' ನಲ್ಲಿ ಸಂಭಾಷಣೆಯ ಸಮಯದಲ್ಲಿ ಹೊರಾಂಗಣ ಚಿತ್ರೀಕರಣಕ್ಕೆ ಹೋದಾಗ ಎದುರಿಸಿದ ತೊಂದರೆಗಳನ್ನು  ನೆನಪಿಸಿಕೊಂಡರು . 

28

ನವ್ಯಾ ಅವರ ಪಾಡ್‌ಕ್ಯಾಸ್ಟ್‌ನ ಇತ್ತೀಚಿನ ಎಪಿಸೋಡ್‌ಗೆ 'ಬಯಾಲಜಿ: ಬ್ಲೆಸ್ಡ್ ಬಟ್‌ ಬಯಾಸ್ಡ್' ಎಂದು ಶೀರ್ಷಿಕೆ ನೀಡಲಾಗಿದೆ.ಈ ಸಮಯದಲ್ಲಿ ಮುಟ್ಟಿನ ಆರೋಗ್ಯದ ಬಗ್ಗೆ ಚರ್ಚಿಸಿದರು.

38

ಈ ಸಂದರ್ಭದಲ್ಲಿ ನವ್ಯಾ ತನ್ನ ಮೊದಲ ಪೀರಿಯಡ್ಸ್‌ ಅನುಭವವನ್ನು ಹಂಚಿಕೊಳ್ಳಲು ತನ್ನ ತಾಯಿ ಮತ್ತು ಅಜ್ಜಿಯನ್ನು ಕೇಳಿದರು. ನೀನು ಯಾವಾಗಲು ಹಾಸಿಗೆಯ ಮೇಲೆ ಮಲಗಲು ಬಯಸುತ್ತಿದ್ದೆ ಮತ್ತು ಚಾಕೊಲೇಟ್ ತಿಂದು ಒಬ್ಬಂಟಿಯಾಗಿರಲು ಬಯಸಿದೆ'ಎಂದು ಶ್ವೇತಾ ಹೇಳಿದರು. 

48

ಇದಾದ ನಂತರ ನವ್ಯಾ  ಚಿತ್ರೀಕರಣದ  ಸಮಯದಲ್ಲಿ ತಮ್ಮ ಪೀರಿಯಡ್ಸ್‌ ಅನುಭವವನ್ನು ಹಂಚಿಕೊಳ್ಳಲು ಅಜ್ಜಿ ಜಯಾ ಅವರನ್ನು ಕೇಳಿದರು,

58

'ನಾವು ಹೊರಾಂಗಣ ಚಿತ್ರೀಕರಣಕ್ಕೆ ಹೋಗುವಾಗ ನಮ್ಮಲ್ಲಿ ವ್ಯಾನಿಟಿ ವ್ಯಾನ್‌ಗಳು ಇರಲಿಲ್ಲ, ನಾವು ಪೊದೆಗಳ ಹಿಂದೆ ಬದಲಾಯಿಸಬೇಕಾಗಿತ್ತು, ಇದು ಭಯಾನಕವಾಗಿದೆ, ಇದು ವಿಚಿತ್ರವಾಗಿತ್ತು. ಮತ್ತು ಮುಜುಗರದ ಸಂಗತಿಯಾಗಿದೆ, ನಾವು ಪ್ಲಾಸ್ಟಿಕ್ ಚೀಲಗಳನ್ನು ಒಯ್ಯಬೇಕಾಗಿತ್ತು, ಇದರಿಂದ
ನಾವು ಅವುಗಳನ್ನು ಎಸೆಯಬಹುದು, ಬುಟ್ಟಿಯಲ್ಲಿ ಹಾಕಬಹುದು, ಮನೆಗೆ ತೆಗೆದುಕೊಂಡು ಹೋಗಬಹುದಾಗಿತ್ತು' ಎಂದು ಜಯಾ ಹೇಳಿದರು.

68

ಈ ವೇಳೆ ಜಯಾ ಅವರು ನವ್ಯಾಗೆ ಅಂದಿನ ಪರಿಸ್ಥಿತಿಯನ್ನು ಅಂದಾಜಿಸುವಂತೆ ಕೇಳಿಕೊಂಡರು.ಆಕೆಯ ಪ್ರಕಾರ, ಅವರು ಆಗ 4-5 ಸ್ಯಾನಿಟರಿ ಪ್ಯಾಡ್‌ಗಳನ್ನು ಒಯ್ಯುತ್ತಿದ್ದರು ಎಂದು ಜಯಾ ಹೇಳಿದರು.

78

 ಈ ಸಮಯದಲ್ಲಿ, ಜನರು ಪಿರಿಯಡ್ಸ್‌ಗಾಗಿ ಚಂಪ್ಸ್‌ನಂತಹ ತಮಾಷೆಯ ಪದಗಳನ್ನು ಬಳಸುತ್ತಾರೆ ಎಂಬುದರ ಕುರಿತು ನವ್ಯಾ ಮಾತನಾಡಿದರು. ನೇರವಾಗಿ ಪಿರಿಯಡ್ಸ್ ಎಂದು ಏಕೆ ಕರೆಯಬಾರದು ಎಂದರು. ಆದರೆ ಈಗ   ಜನರು ಮುಕ್ತವಾಗಿ ಪೀರಿಯಡ್ಸ್  ಎಂಬ ಪದವನ್ನು ಬಳಸುವಷ್ಟು ಪ್ರಬುದ್ಧರಾಗಿದ್ದಾರೆ ಎಂದರು  ನವ್ಯಾ

88

ವಾಟ್ ದಿ ಹೆಲ್ ನವ್ಯಾ' ಪಾಡ್‌ಕಾಸ್ಟ್ ಅನ್ನು ನವ್ಯಾ ನವೇಲಿ ನಂದಾ, ಅವರ ತಾಯಿ ಶ್ವೇತಾ ಬಚ್ಚನ್ ಮತ್ತು ಅಜ್ಜಿ ಜಯಾ ಬಚ್ಚನ್  ಹೋಸ್ಟ್ ಮಾಡಿದ್ದಾರೆ. ಈ ಸಮಯದಲ್ಲಿ, ಮೂವರೂ ತಮ್ಮ ವೈಯಕ್ತಿಕ ಜೀವನ ಮತ್ತು ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಇದರ ಹೊಸ ಸಂಚಿಕೆಯು ಪ್ರತಿ ಶನಿವಾರ ಬರುತ್ತದೆ, ಇದು ಪಾಡ್‌ಕ್ಯಾಸ್ಟ್ ಹೆಸರಿನ YouTube ಚಾನಲ್‌ನಲ್ಲಿ ಸ್ಟ್ರೀಮ್ ಆಗುತ್ತದೆ. ಇದನ್ನು IVM ಪಾಡ್‌ಕಾಸ್ಟ್ ಅಪ್ಲಿಕೇಶನ್‌ನಲ್ಲಿಯೂ ಕೇಳಬಹುದು.

Read more Photos on
click me!

Recommended Stories