ಬಾಲಿವುಡ್ ಸೀರೆ ಸಂಸ್ಕೃತಿ ಹಾಳು ಮಾಡ್ತಿದೆ; ಸೀರೆಗೆ ಬಿಕಿನಿ ಬ್ಲೌಸ್ ಧರಿಸಿದ ಕೃತಿ ವಿರುದ್ಧ ನೆಟ್ಟಿಗರ ಆಕ್ರೋಶ

First Published | Nov 13, 2022, 1:11 PM IST

ಬಾಲಿವುಡ್ ಖ್ಯಾತ ನಟಿ ಕೃತಿ ಸನೊನ್ ಸದ್ಯ ಭೇಡಿಯಾ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ರೆಯಲ್ಲಿ ಮಿಂಚುತ್ತಿರುವ ಕೃತಿ ಟ್ರೋಲ್ ಆಗುತ್ತಿದ್ದಾರೆ.

ಬಾಲಿವುಡ್ ಖ್ಯಾತ ನಟಿ ಕೃತಿ ಸನೊನ್ ಸದ್ಯ ಭೇಡಿಯಾ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ವರುಣ್ ಧವನ್ ಮತ್ತು ಕೃತಿ ನಟನೆಯ ಭೇಡಿಯಾ ಸಿನಿಮಾದ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಇಬ್ಬರೂ ಉತ್ತರ ಭಾರತದ ಬೇರೆ ಬೇರೆ ಪ್ರದೇಶಗಳಿಗೆ ತೆರಳಿ ಪ್ರಮೋಷನ್ ಮಾಡುತ್ತಿದ್ದಾರೆ. 

ಅಂದಹಾಗೆ ನಟಿ ಕೃತಿ ಸಿನಿಮಾ ಪ್ರಚಾರದ ಜೊತೆಗೆ ತನ್ನ ಉಡುಗೆ ಮೂಲಕವೂ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಪ್ರಮುಖವಾಗಿ ಕೃತಿ ಸೀರೆಯಲ್ಲಿ ಮಿಂಚುತ್ತಿದ್ದಾರೆ. ಕೃತಿಯ ಸೀರೆ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. 

Tap to resize

ಕೃತಿ ಸೀರೆ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಸೀರೆಯಲ್ಲಿ ಮಿಂಚಿದ್ರು ಕೃತಿಯನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ. ಕೃತಿ ಸೀರೆಗೆ ಬಿಕಿನಿ ಬ್ಲೌಸ್ ಧರಿಸಿದ್ದಾರೆ. ಪ್ರಮೋಷನ್ ನಲ್ಲಿ ಕೃತಿ ಎಲ್ಲಾ ಕಡೆ ಬಿಕಿನಿ ಬ್ಲೌಸ್‌ಗೆ ಸೀರೆ ಧರಿಸಿದ್ದಾರೆ ಹಾಗಾಗಿ ನೆಟ್ಟಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ. 

ಬಾಲಿವುಡ್ ಸೀರೆ ಸಂಸ್ಕೃತಿಯನ್ನು ಹಾಳುಮಾಡುತ್ತಿದ್ದಾರೆ ಎಂದು ನೆಟ್ಟಿಗರು ಗರಂ ಆಗಿದ್ದಾರೆ. ಅನೇಕರು ಕೃತಿ ಸೀರೆ ಫೋಟೋಗೆ ಕಾಮೆಂಟ್ ಮಾಡಿ ಆಕ್ರೋಶ ಹೊರಹಾಕುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ ಉರ್ಫಿ ಜಾವೇದ್ ಅವರ ದೊಡ್ಡ ಅಕ್ಕ ಎಂದು ಕಾಮೆಂಟ್ ಮಾಡಿದ್ದಾರೆ. 

ಆದರೆ ಕೃತಿ ಅಭಿಮಾನಿಗಳು ಲೈಕ್ಸ್ ಒತ್ತುತ್ತಿದ್ದಾರೆ. ಹಾರ್ಟ್ ಇಮೋಜಿ ಹಾಕಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ ಕೃತಿ ಕಳೆದ ಕೆಲವು ದಿನಗಳಲ್ಲಿ ತರಹೇವಾರಿ ಸೀರೆಗಳಲ್ಲಿ ಮಿಂಚಿದ್ದಾರೆ. 

ಇನ್ನು ಕೃತಿ ಸಿನಿಮಾಗಳ ಬಗ್ಗೆ ಹೇಲುವುದಾರೇ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಭೇಡಿಯಾ ರಿಲೀಸ್‌ಗೆ ಕಾಯುತ್ತಿರುವ ಕೃತಿ, ಗಣಪತ್, ಶೆಹಜಾದ ಮತ್ತು ಪ್ರಭಾಸ್ ಜೊತೆ ಆದಿಪುರುಷ್ ಸಿನಿಮಾದಲ್ಲಿ ನಟಿಸಿದ್ದಾರೆ.  

Latest Videos

click me!