ದಕ್ಷಿಣ ಭಾರತದ ಸಂಸ್ಕೃತಿಗೆ ಕಾಂಜೀವರಂ ಸೀರೆಯೊಂದಿಗೆ ಗೌರವ ಸಲ್ಲಿಸಿದ ಜಾನ್ವಿ ಕಪೂರ್

Published : Nov 03, 2022, 05:25 PM IST

ಜಾನ್ವಿ ಕಪೂರ್ (Janhvi Kapoor) ತಮ್ಮ ಮುಂಬರುವ ಸರ್ವೈವಲ್ ಥ್ರಿಲ್ಲರ್ ಚಿತ್ರ 'ಮಿಲಿ' (Mili) ಪ್ರಚಾರಕ್ಕಾಗಿ ಪ್ರಯಾಣ ಮಾಡುತ್ತಿದ್ದಾರೆ. ಮುಂಬೈನಲ್ಲಿ ಪ್ರಚಾರ ಮಾಡುವುದರಿಂದ ಹಿಡಿದು, ಜೈಪುರ ಸೇರಿ ಇತರೆ ನಗರಗಳಿಗೂ ಟ್ರಾವೆಲ್‌ ಮಾಡುತ್ತಿರುವ ಜಾನ್ವಿ  ಜಾಮ್-ಪ್ಯಾಕ್ಡ್ ವೇಳಾಪಟ್ಟಿಯನ್ನು ಹೊಂದಿದ್ದಾರೆ. ಹೈದರಾಬಾದ್‌ನಲ್ಲಿ ಸಿನಿಮಾದ ಪ್ರಚಾರಕ್ಕಾಗಿ ಆಗಮಿಸಿದ್ದ ಶ್ರಿದೇವಿ ಮಗಳು  ಸುಂದರವಾದ ಕಾಂಜೀವರಂ ಸೀರೆಯನ್ನು  ಹೊರತುಪಡಿಸಿ ಬೇರೆ ಯಾವುದನ್ನೂ ಆಯ್ಕೆ ಮಾಡಿಕೊಳ್ಳುತ್ತಿಲ್ಲ ಮತ್ತು ಜಾನ್ವಿ ಅವರ ಈ ಫೋಟೋಗಳು ಸಖತ್‌ ವೈರಲ್‌ ಆಗಿವೆ.

PREV
18
ದಕ್ಷಿಣ ಭಾರತದ ಸಂಸ್ಕೃತಿಗೆ ಕಾಂಜೀವರಂ ಸೀರೆಯೊಂದಿಗೆ ಗೌರವ ಸಲ್ಲಿಸಿದ ಜಾನ್ವಿ ಕಪೂರ್
Janhvi Kapoor

ಜಾನ್ವಿ ಕಪೂರ್ ಅವರು ತಮ್ಮ ಮುಂದಿನ ಚಿತ್ರ 'ಮಿಲಿ' ಪ್ರಚಾರಕ್ಕಾಗಿ ಈ ಬಾರಿ ರಾಯಲ್ ಬ್ಲೂ ಕಾಂಜೀವರಂ ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರದ ಪ್ರಚಾರಕ್ಕಾಗಿ ನಟಿ ಹೈದರಾಬಾದ್‌ನಲ್ಲಿದ್ದರು.


 

28

ಬಹು ಕಾಂತೀಯ ರಾಯಲ್ ನೀಲಿ ಕಾಂಜೀವರಂ ಸೀರೆಯಲ್ಲಿ ಬೆಳ್ಳಿಯ ಝರಿ ವರ್ಕ್‌ ಹೊಂದಿದ ಸೀರೆ ಧರಿಸಿ ಜಾನ್ವಿ ಕಪೂರ್ ತನ್ನ ದಕ್ಷಿಣ ಭಾರತದ ಬೇರುಗಳನ್ನು ಪ್ರತಿಬಿಂಬಿಸಿದರು. ಅವರು ಸೀರೆಯನ್ನು ಡೀಪ್‌ ನೀಲಿ ಟೈ-ಅಪ್ ಸ್ಟ್ರಾಪಿ ಬ್ಲೌಸ್‌ನೊಂದಿಗೆ  ಮ್ಯಾಚ್‌ ಮಾಡಿಕೊಂಡಿದ್ದರು.

38

ಹೈದರಾಬಾದ್‌ನಲ್ಲಿ ನಡೆದ ಈವೆಂಟ್‌ಗಾಗಿ ತಮ್ಮ ಲುಕ್‌ ಪೂರ್ಣಗೊಳಿಸಲು, ಜಾನ್ವಿ ಕಪೂರ್ ಬಿಂದಿಯೊಂದಿಗೆ ಕುಂದನ್ ಜುಮ್ಕಾಗಳನ್ನು ಧರಿಸಿದ್ದರು. ಕೂದಲನ್ನು ತುರುಬು ಕಟ್ಟಿ ಮಲ್ಲಿಗೆ ಮುಡಿದಿದ್ದರು 

48

ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡ ಜಾನ್ವಿ ಕಪೂರ್ ತೆಲುಗಿನಲ್ಲಿ, 'ಹೈದರಾಬಾದ್‌ನಲ್ಲಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ, ನಿಮ್ಮ ಪ್ರೀತಿಗೆ ಧನ್ಯವಾದಗಳು #ಮಿಲಿ' ಎಂದು ಬರೆದಿದ್ದಾರೆ.

58

ಬೆರಗುಗೊಳಿಸುವ ಔಟ್‌ಫೀಟ್‌ ಆಯ್ಕೆಗಳಿಗೆ ಹೆಸರುವಾಸಿಯಾಗಿರುವ ಜಾಹ್ನವಿ ಕಪೂರ್, 'ಮಿಲಿ' ಪ್ರಚಾರಕ್ಕಾಗಿ ತಮ್ಮ ಡ್ರೆಸ್‌ ಸೆಲೆಕ್ಷನ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸೀರೆ  ಧರಿಸುವುದರಿಂದ ಹಿಡಿದು ಬಾಡಿಕಾನ್ ಡ್ರೆಸ್‌ಗಳ ವರೆಗೆ ಎಲ್ಲ ಅರೀತಿಯ ಲುಕ್‌ನಲ್ಲಿ ತಮ್ಮ ಪರ್ಫೇಕ್ಟ್‌ ಫಿಗರ್‌ ತೋರಿಸಿದ್ದಾರೆ.

68

ಇತ್ತೀಚಿಗೆ ಜಾನ್ವಿ ಮಲ್ಟಿ ಕಲರ್‌ ಲೆಹೆಂಗಾ ಮತ್ತು ಸ್ಟ್ರಾಪಿ ಬ್ಲೌಸ್ ಧರಿಸಿದ್ದರು. ಕರ್ಲ್‌ಗಳ ಮೂಲಕ  ತನ್ನ ಕೂದಲನ್ನು ಸ್ಟೈಲ್‌ ಮಾಡಿ  ದಪ್ಪನಾದ ನೀಲಿ ನೆಕ್‌ಪೀಸ್‌ನೊಂದಿಗೆ ತಮ್ಮ ಡ್ರೆಸ್‌ ಅನ್ನು ಪೇರ್‌ ಮಾಡಿದ್ದರು.

78

ವಿಶೇಷವೆಂದರೆ ಮಿಲಿಯ ಪ್ರಚಾರಕ್ಕಾಗಿ ಜಾನ್ವಿ ಕಪೂರ್ ಧರಿಸಿದ್ದ ಹೆಚ್ಚಿನ ಬಟ್ಟೆಗಳು ಸಾಂಪ್ರದಾಯಿಕವಾಗಿವೆ. ಅವರು ಸಿಕ್ವಿನ್ಡ್‌ ಬಾರ್ಡರ್‌ ಹೊಂದಿರುವ ದಂತದ ಬಿಳಿ ಸೀರೆಯನ್ನು ಧರಿಸಿ ಅದಕ್ಕೆ  ಹೆಚ್ಚು ಅಲಂಕರಿಸಿದ ಬೆಳ್ಳಿಯ ಸ್ಟ್ರಾಪ್‌ಲೆಸ್ ಬ್ಲೌಸ್‌ ಮ್ಯಾಚ್‌ ಮಾಡಿದ್ದರು 
 

88

ಜಾನ್ವಿ ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಮಿಲಿ' ಸಿನಿಮಾದಲ್ಲಿ , ನಟರಾದ ಸನ್ನಿ ಕೌಶಲ್ ಮತ್ತು ಮನೋಜ್ ಪಹ್ವಾ ಕೂಡ ಇದ್ದಾರೆ. ಈ ಚಿತ್ರವು ಮಲಯಾಳಂನ ‘ಹೆಲೆನ್’ ಚಿತ್ರದ ಹಿಂದಿ ರಿಮೇಕ್ ಆಗಿದ್ದು, ಶುಕ್ರವಾರ ಅಂದರೆ ನವೆಂಬರ್‌ 4ರಂದು  ತೆರೆಗೆ ಬರಲಿದೆ. ಇದನ್ನು ಜಾನ್ವಿಯ ತಂದೆ ಬೋನಿ ಕಪೂರ್ ನಿರ್ಮಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories