Urfi Javed ಚಿನ್ನದ ಬಳೆ ಅಲ್ಲ ಗುರು ಮಾರ್ಕೆಟ್ನಲ್ಲಿ ಸಿಗೋ 200 ರೂ. ಬಳೆ ಎಂದ ನಟಿ!

First Published | Nov 3, 2022, 10:59 AM IST

ಕಾಸ್ಟ್ಲಿ ಹಾಕೊಂಡ್ರೆ ಮಾತ್ರ ಫ್ಯಾಷನಾ? ಚೀಪ್‌ ಹಾಕೊಂಡು ಸ್ಟಾರ್ ಪಾರ್ಟಿ ಮಾಡಬಹುದು ಎಂದು ತೋರಿಸಿಕೊಟ್ಟ ಉರ್ಫಿ... 

 ಬಿಗ್ ಬಾಸ್ ಓಟಿಟಿ ಸ್ಪರ್ಧಿ, ಫ್ಯಾಷನ್ ಕಂಟೆಂಟ್‌ ಕ್ರಿಯೇಟರ್‌ ಕಮ್ ಬಾಲಿವುಡ್ ನಟಿ ಉರ್ಫಿ ಜಾವೇದ್ ಅಂಜಲಿ ಅರೋರಾ ಬರ್ತಡೇ ಪಾರ್ಟಿಗೆ ಧರಿಸಿರುವ ಔಟ್‌ಫಿಟ್‌ ಸಖತ್ ವೈರಲ್ ಆಗುತ್ತಿದೆ. 

ಲಾಕ್‌ಕಪ್ ಸ್ಪರ್ಧಿ, ಸೋಷಿಯಲ್ ಮೀಡಿಯಾ influencer ಅಂಜಲಿ ಅರೋರಾ ಬರ್ತಡೇ ಪಾರ್ಟಿಗೆ ಉರ್ಫಿ ಸಖತ್ ಸ್ಟೈಲಿಷ್ ಆಗಿ ರೆಡಿಯಾಗಿದ್ದರು.

Tap to resize

ಇನ್‌ಸ್ಟಾಬಾಲಿವುಡ್ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ಉರ್ಫಿ ಗ್ರೀನ್‌ ಸೀ-ಥ್ರೂ ಬಟ್ಟೆಗೆ ಗೋಲ್ಡ್‌ ಶೈನಿ ಬಳೆಗಳನ್ನು ಧರಿಸಿದ್ದಾರೆ. ಈ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. 

ವಾವ್! ಏನ್ ಮೇಡಂ ಮಾಡ್ರನ್ ಡ್ರೆಸ್‌ಗೆ ಬಳೆ ಧರಿಸಿರುವುದು ಇದೇ ಮೊದಲು ನಿಮ್ಮ ಡಿಸೈನರ್ ಯಾವ ಆಭರಣದ ಅಂಗಡಿಯಿಂದ ತಂದಿರುವುದು ಎಂದು ಪ್ಯಾಪರಾಜಿಗಳು ಪ್ರಶ್ನೆ ಮಾಡಿದ್ದರು. ಆಗ ಕೂಲ್ ಅಗಿ ಸ್ವೀಕರಿಸಿ ಉತ್ತರ ಕೊಟ್ಟಿದ್ದಾರೆ ಉರ್ಫಿ. 

ಏನ್ ಅಣ್ಣ ಯಾವಾಗಲ್ಲೂ ದುಬಾರಿನೇ ಧರಿಸಬೇಕಾ? ಇದು ಚಿನ್ನದ ಬೆಳೆ ಅಲ್ಲ ಇದು ಮಾರ್ಕೆಟ್ನಲ್ಲಿ ಸಿಕ್ಕಿರುವ 200 ರೂಪಾಯಿ ಗೋಲ್ಡ್‌ ಪ್ಲೇಟ್ ಆಗಿರುವ ಬಳೆ. 

ಉರ್ಫಿ ಪ್ರಾಮಾಣಿಕತೆ ಒಪ್ಪಿಕೊಂಡು ನೆಟ್ಟಿಗರ ಗಮನ ಸೆಳೆದಿದ್ದಾರೆ. ಹಾಗೇ ಯಾರೂ ಪ್ರಯೋಗ ಮಾಡದನ್ನು ಪ್ರಯತ್ನ ಮಾಡುತ್ತಿರುವುದಕ್ಕೆ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಉರ್ಫು ಸದಾ ಲೈಮ್ ಲೈಟ್‌ನಲ್ಲಿರುತ್ತಾರೆ. 

 2020 - 20201ರಲ್ಲಿ ಲಾಕ್‌ಡೌನ್‌ ಸಮಯದಲ್ಲಿ ಉರ್ಫಿ ಸ್ಕಿನ್‌ ಕೇರ್ ಮತ್ತು ಹೇರ್‌ ಕೇರ್ ವಿಡಿಯೋಗಳನ್ನು ಹಂಚಿಕೊಂಡಿದ್ದರು, ಈಗ ಆ ವಿಡಿಯೋಗಳನ್ನು ಸಖತ್ ವೈರಲ್ ಆಗುತ್ತಿದೆ. 

Latest Videos

click me!