ಅದ್ದೂರಿಯಾಗಿ ಪ್ರೇಯಸಿ ಜನ್ಮದಿನ ಆಚರಿಸಿದ ಹೃತಿಕ್; ಗೆಳೆಯನಿಗೆ ಪ್ರೀತಿಯ ಸಾಲು ಬರೆದ ಸಬಾ

First Published | Nov 3, 2022, 2:57 PM IST

ನಟ ಹೃತಿಕ್ ರೋಷನ್ ತನ್ನ ಗರ್ಲ್‌ಫ್ರೆಂಡ್ ಸಬಾ ಅಜಾದ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.  

ಬಾಲಿವುಡ್ ಖ್ಯಾತ ನಟ, ಹ್ಯಾಂಡ್‌ಸಮ್ ಹಂಕ್ ಹೃತಿಕ್ ರೋಷನ್ ಮೊದಲ ಪತ್ನಿಗೆ ವಿಚ್ಛೇದನ ನೀಡಿ ಅನೇಕ ವರ್ಷಗಳೇ ಕಳೆಯಿತು. ಇದೀಗ ಹೃತಿಕ್ ಜೀವನಕ್ಕೆ ಹೊಸ ಗರ್ಲ್‌ಪ್ರೆಂಡ್ ಎಂಟ್ರಿಯಾಗಿದೆ. ಹೃತಿಕ್ ಪ್ರೀತಿಯಲ್ಲಿ ಬಿದ್ದು ಎರಡು-ಮೂರು ವರ್ಷಗಳಾಗಿದೆ. 

ಗಾಯಕಿ ಸಬಾ ಅಜಾದ್ ಜೊತೆ ಪ್ರೀತಿಯಲ್ಲಿರುವ ಹೃತಿಕ್ ಸದಾ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಇಂದು (ನವೆಂಬರ್ 3) ಸಬಾಗೆ ಹುಟ್ಟುಹಬ್ಬದ ಸಂಭ್ರಮ. 37ನೇ ವಸಂತಕ್ಕೆ ಕಾಲಿಟ್ಟ ನಟಿ ಸಬಾ ಹಟ್ಟುಹ್ಬಬವನ್ನು ಹೃತಿಕ್ ಅದ್ದೂರಿಯಾಗಿ ಆಚರಿಸಿದ್ದಾರೆ. 

Tap to resize

ಇಬ್ಬರೂ ಸೇರಿ ಅದ್ದೂರಿಯಾಗಿ ಜನ್ಮದಿನ ಸಂಭ್ರಮಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹೃತಿಕ್ ಜೊತೆ ಹುಟ್ಟುಹಬ್ಬ ಆಚರಿಸಿದ ಫೋಟೋ ಶೇರ್ ಮಾಡಿ ಸಬಾ ಸಂತಸ ಹೊರಹಾಕಿದ್ದಾರೆ. ಪ್ರಿಯತಮ ಹೃತಿಕ್ ಗೆ ಧನ್ಯವಾದ ತಿಳಿಸಿ ಪೋಸ್ಟ್ ಹಾಕಿದ್ದಾರೆ. 

ಇಬ್ಬರೂ ಒಟ್ಟಿಗೆ ಡಾನ್ಸ್ ಮಾಡುವ, ವರ್ಕೌಟ್ ಮಾಡುವ, ಪಾರ್ಟಿಯ ಫೋಟೋಗಳು, ಒಟ್ಟಿಗೆ ಸಮಯ ಕಳೆದ ಫೋಟೋಗಳನ್ನು ಸೇರಿಸಿ ಇನ್ಸ್ಟಾಗ್ರಾಮ್ 
ಶೇರ್ ಮಾಡಿದ್ದಾರೆ. ಜೊತೆಗೆ ಹೃತಿಕ್ ಬಗ್ಗೆ ದೀರ್ಘವಾಗಿ ಬರೆದುಕೊಂಡಿದ್ದಾರೆ. 

ಇನ್ನು ಹೃತಿಕ್ ಕೂಡ ಪ್ರೇಯಸಿ ಸಬಾ ಫೋಟೋ ಶೇರ್ ಮಾಡಿ ಪ್ರೀತಿಯಾ ಸಂದೇಶ ರವಾನಿಸಿದ್ದಾರೆ. 'ನಿನ್ನ ಧ್ವನಿ, ನಿನ್ನ ಲಯಾ, ನಿನ್ನ ಹೃದಯ ಅದ್ಭುತ ನೀನು. ಹುಟ್ಟುಹಬ್ಬ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಸಬಾ ಅವರ ಫೋಟೋವನ್ನು ಶೇರ್ ಮಾಡಿದ್ದಾರೆ. 

ಸಬಾ ಆಜಾದ್ ಗಾಯಕಿ, ಸಂಗೀತಗಾರರಾಗಿ ಖ್ಯಾತಿ ಗಳಿಸಿದ್ದಾರೆ. ಗಾಯನದ ಜೊತೆಗೆ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ.  ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ.  ಕೊನೆಯದಾಗಿ ಸಬಾ ರಾಕೆಟ್ ಬಾಯ್ಸ್ ಎಂಬ ವೆಬ್ ಸರಣಿಯಲ್ಲಿ ಮಿಂಚಿದ್ದರು. 
 

Latest Videos

click me!