ಕಂಗನಾರಿಂದ ದೀಪಿಕಾವರಗೆ ಬಾಲಿವುಡ್‌ನ ಮಹಿಳಾ ಪ್ರಧಾನ ಸಿನಿಮಾಗಳು

First Published | Mar 8, 2022, 4:57 PM IST

ಕೆಲವು ಸಿನಿಮಾಗಳನ್ನು ಹೊರತುಪಡಿಸಿ, ಭಾರತೀಯ ಚಲನಚಿತ್ರೋದ್ಯಮದಲ್ಲಿ ಪುರುಷ ಪ್ರಧಾನವಾದ ಚಿತ್ರಗಳೇ ಹೆಚ್ಚು ಎಂದು ಹೇಳುವುದು ತಪ್ಪಾಗುವುದಿಲ್ಲ. ಇಲ್ಲಿ ಪುರುಷರ ಪವರ್‌ ಅನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಹಿಂದಿ ಚಿತ್ರರಂಗ ಬದಲಾಗಿದೆ. ಇತ್ತೀಚಿನ ದಶಕದಲ್ಲಿ ಮಹಿಳೆಯರನ್ನು ಆಧರಿಸಿದ ಕೆಲವು ಚಲನಚಿತ್ರಗಳು ಇಲ್ಲಿವೆ. ಈ ಚಿತ್ರಗಳೂ ಪ್ರೇಕ್ಷಕರ ಮನ ಗೆದ್ದಿವೆ. ಇದರೊಂದಿಗೆ ನಟಿಯ ಬಗ್ಗೆಯೂ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು. ಅವರ ನಟನೆಯ ಮುಂದೆ ಹೀರೋ ಪೇಲವವಾಗಿ ಕಾಣುತ್ತಿದ್ದರು. ಕಂಗನಾ ರಣಾವತ್‌ನಿಂದ (Kangana Ranaut) ಹಿಡಿದು ದೀಪಿಕಾ ಪಡುಕೋಣೆವರೆಗೆ (Deepika Padukone) ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿದ  women centric ಸಿನಿಮಾಗಳು ಇಲ್ಲಿವೆ.

'ಪದ್ಮಾವತ್' ಚಿತ್ರ 2018 ರ ಸೂಪರ್‌ಹಿಟ್ ಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಇದ್ದರು. ಚಿತ್ರವು ಚಿತ್ತೋರ್‌ನ ರಾಣಿ ಪದ್ಮಾವತಿ ಅವರ ಜೀವನವನ್ನು ಆಧರಿಸಿದೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅವರು ಅದ್ಬುತವಾದ ನಟನೆ ಮಾಡಿದ್ದು, ಸಖತ್‌ ಮೆಚ್ಚುಗೆ ಗಳಿಸಿದರು. ಅದೇ ಸಮಯದಲ್ಲಿ, ದೀಪಿಕಾ ಅವರ ಮತ್ತೊಂದು ಚಲನಚಿತ್ರ ಪಿಕು'ವಿನಲ್ಲಿ ಸಹ ನಟಿಯ ಕೆಲಸವನ್ನು ಹೆಚ್ಚು ಪ್ರಶಂಸಿಸಲಾಯಿತು. ‘ಪಿಕು’ ಸಿನಿಮಾ ಅಪ್ಪ ಮಗಳ ಬಾಂಧವ್ಯವನ್ನು ಆಧರಿಸಿದೆ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ಇರ್ಫಾನ್ ಖಾನ್ ಕಾಣಿಸಿಕೊಂಡಿದ್ದರು.

ಒಂದಕ್ಕಿಂತ ಹೆಚ್ಚು ಹಿಟ್ ಚಿತ್ರಗಳನ್ನು ಕೊಟ್ಟಿರುವ ಮೀನಾಕ್ಷಿ ಶೇಷಾದ್ರಿ (Meenakshi Seshadri) ಹೆಸರು ಕೇಳಿದರೆ ಮೊದಲು ನೆನಪಾಗುವುದು ‘ದಾಮಿನಿ’ ಸಿನಿಮಾ. ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡುವ ಸಲಿವಾಗಿ ತನ್ನ ಕುಟುಂಬದೊಂದಿಗೆ ಹೋರಾಟ ನಡೆಸುವ ಪಾತ್ರವನ್ನು ನಟಿ ತುಂಬಾ ಅದ್ಭುತವಾಗಿ ನಟಿಸಿದ್ದಾರೆ.

Tap to resize

ದೊಡ್ಡ ತಾರೆಯರ ಜೊತೆ ಸಿನಿಮಾ ಮಾಡಲು ಇಷ್ಟಪಡದ ಬಾಲಿವುಡ್ ನಟಿಯರಲ್ಲಿ ಕಂಗನಾ ರಣಾವತ್ ಕೂಡ ಒಬ್ಬರು. ತನ್ನ ಪ್ರತಿ ಸಿನಿಮಾದಲ್ಲೂ ಆಕೆಯೇ ಮೇಲುಗೈ ಸಾಧಿಸುತ್ತಾರೆ. ಅವರು ಪುರುಷ ಪ್ರಧಾನ ಸಮಾಜದಿಂದ ಪ್ರತ್ಯೇಕವಾಗಿ ಕೆಲಸ ಮಾಡುತ್ತಾರೆ. 'ಕ್ವೀನ್' ನಿಂದ 'ಮಣಿಕರ್ಣಿಕಾ'ದವರೆಗೆ ಕಂಗನಾ ಪ್ರತಿ ಚಿತ್ರದಲ್ಲೂ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಸ್ವರಾ ಭಾಸ್ಕರ್ (Swara Bhaskar)  'ನಿಲ್ ಬಟ್ಟೆ ಸನ್ನಟ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. 2016ರಲ್ಲಿ ಬಿಡುಗಡೆಯಾದ ಅಶ್ವಿನಿ ಅಯ್ಯರ್ ತಿವಾರಿ ಅವರ ಈ ಚಿತ್ರ ಎಲ್ಲರ ಮನ ಗೆದ್ದಿತ್ತು.  ಒಂಟಿ ತಾಯಿ ಮತ್ತು ಅವರ ಮಗಳನ್ನು ಆಧರಿಸಿ ಚಿತ್ರದ ಕಥೆ ಇದೆ. ಸಿನಿಮಾದಲ್ಲಿ ಮಗಳಿಗೆ  ಗಣಿತ ಅಂದರೆ ಇಷ್ಟವಿರುವುದಿಲ್ಲ. ಮಗಳನ್ನು ಪ್ರೇರೇಪಿಸಲು, ತಾಯಿಯೇ ಶಾಲೆಗೆ ಸೇರಿಕೊಳ್ಳುತ್ತಾಳೆ. ಈ ಚಿತ್ರ ಭಾರೀ ಮೆಚ್ಚುಗೆ ಗಳಿಸಿತ್ತು.
 

(Alia Bhatt) ಅಭಿನಯದ ‘ರಾಝಿ’  ಅತಿ ಮೆಚ್ಚುಗೆ ಗಳಿಸಿದ ಸಿನಿಮಾಗಳಲ್ಲಿ ಒಂದಾಗಿದೆ. ಸಾಮಾನ್ಯ ಹುಡುಗಿಯೊಬ್ಬಳು ಭಾರತದ ಗೂಢಚಾರಿಯಾಗಿ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಹೇಗೆ ಹೋರಾಡುತ್ತಾಳೆ ಎಂಬುದು ಸಿನಿಮಾದ ಕಥಾ ಹಂದರ. ಈ ಚಿತ್ರದಲ್ಲಿ ಆಲಿಯಾ ಅವರ ಕೆಲಸವು ಬಾರೀ ಮೆಚ್ಚುಗೆ ಪಡೆದಿದೆ.

ನರ್ಗೀಸ್‌ (Nargis ) ಅಭಿನಯದ ‘ಮದರ್ ಇಂಡಿಯಾ’ ಇಂದಿಗೂ ಫೇಮಸ್‌.  ಈ ಸಿನಿಮಾದಲ್ಲಿನ ನರ್ಗೀಸ್ ಅಭಿನಯವನ್ನು ಇಂದಿಗೂ ನೆನಪು ಮಾಡಲಾಗುತ್ತದೆ. ಈ ಸಿನಿಮಾದಲ್ಲಿ ಹುಡುಗಿಯ ಹೆಸರು ಮತ್ತು  ಗೌರವ ಉಳಿಸಲು ನರ್ಗೀಸ್ ತನ್ನ ಮಗನನ್ನು ಕೊಲ್ಲುತ್ತಾರೆ.

‘ಫ್ಯಾಶನ್’ ಚಿತ್ರವೂ ಮಹಿಳಾ ಪ್ರಧಾನ ಚಿತ್ರವಾಗಿತ್ತು. ಆಧುನಿಕ ಯುಗದಲ್ಲಿ ಹುಡುಗಿಯರ ಕನಸುಗಳು ಮತ್ತು ಅವುಗಳನ್ನು ಈಡೇರಿಸುವ ಹೋರಾಟವನ್ನು ಅತ್ಯಂತ ನೈಜವ ಗಿ ತೋರಿಸಲಾಗಿದೆ. ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ, ಕಂಗನಾ ರಣಾವತ್ ಅತ್ಯುತ್ತಮ ನಟನೆ ಮಾಡಿದ್ದಾರೆ. ಈ ಚಿತ್ರವನ್ನು ಮಧುರ್ ಭಂಡಾರ್ಕರ್ ನಿರ್ದೇಶಿಸಿದ್ದಾರೆ.

ಸೀಮಾ ಬಿಸ್ವಾಸ್  (Seema Biswas) ಬ್ಯಾಂಡಿಟ್ ಕ್ವೀನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶೇಖರ್ ಕಪೂರ್ ಅವರ ಬ್ಯಾಂಡಿಟ್ ಕ್ವೀನ್ ಚಿತ್ರವು ಫೂಲನ್ ದೇವಿಯ ನಿಜ ಜೀವನವನ್ನು ಆಧರಿಸಿದೆ. ಸಾಮಾನ್ಯ ಹುಡುಗಿಯಾದ ಫೂಲನ್ ಎಷ್ಟೋ ದೌರ್ಜನ್ಯಗಳಿಗೆ ಒಳಗಾಗುತ್ತಾಳೆ, ಸೇಡು ತೀರಿಸಿಕೊಳ್ಳಲು ಡಕಾಯಿತಳಾಗುತ್ತಾಳೆ. ಸೀಮಾ ಬಿಸ್ವಾಸ್ ಈ ಪಾತ್ರದಲ್ಲಿ ಸಂಪೂರ್ಣವಾಗಿ ತಲ್ಲೀನರಾಗಿದ್ದರು. ಅವರ ಈ ಪಾತ್ರ ಇಂದಿಗೂ ಜನರ ಮನಸ್ಸಿನಲ್ಲಿ ಉಳಿದಿದೆ


.

ಆಮೀರ್ ಖಾನ್ ಮತ್ತು 'ದಂಗಲ್ ಗರ್ಲ್' ಝೈರಾ ವಾಸಿಮ್  (zaira wasim) ಅಭಿನಯದ 'ಸೀಕ್ರೆಟ್ ಸೂಪರ್ ಸ್ಟಾರ್' 2017 ರ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿದೆ. ಈ ಸಿನಿಮಾದಲ್ಲಿ ಹುಡುಗಿಯೊಬ್ಬಳು ಗಾಯಕಿಯಾಗಬೇಕೆಂದು ಬಯಸುತ್ತಾಳೆ. ಮಗಳ ಕನಸ ನನಸು ಮಾಡಲು ಸಫೋರ್ಟ್‌ ಮಾಡುವ ತಾಯಿ ತಂದೆಯಿಂದ ಮುಚ್ಚಿಟ್ಟು ಮಗಳು ತನ್ನ ಕನಸನ್ನು  ನನಸಾಗಿಸಿಕೊಳ್ಳುತ್ತಾಳೆ ಎಂಬುದೇ ಈ ಚಿತ್ರ.

Latest Videos

click me!