ಭಾರತದ ಅತ್ಯಂತ ಕುಳ್ಳ ನಟ, ಅಭಿನಯಿಸಿದ ಮೂರು ಸಿನ್ಮಾನೂ ಸೂಪರ್‌ ಹಿಟ್‌; ಶಾರೂಕ್‌, ರಜಿನಿಗಿಂತ ಹೆಚ್ಚು ಗಳಿಕೆ!

Published : Oct 12, 2023, 12:02 PM IST

ಭಾರತದ ಅತ್ಯಂತ ಕುಳ್ಳ ನಟ ಅಭಿನಯಿಸಿದ ಈ ಮೂರು ಸಿನಿಮಾಗಳು ಸೂಪರ್‌ಹಿಟ್‌. ಅಷ್ಟೇ ಅಲ್ಲ ಬರೋಬ್ಬರಿ 2200 ಕೋಟಿ ಗಳಿಸಿವೆ. ಇದು ರಜನಿಕಾಂತ್, ಶಾರುಖ್, ಸಲ್ಮಾನ್‌ ಗಳಿಸಿರುವುದರಿಗಿಂತಲೂ ಹೆಚ್ಚು ಮೊತ್ತವಾಗಿದೆ.

PREV
18
ಭಾರತದ ಅತ್ಯಂತ ಕುಳ್ಳ ನಟ, ಅಭಿನಯಿಸಿದ ಮೂರು ಸಿನ್ಮಾನೂ ಸೂಪರ್‌ ಹಿಟ್‌; ಶಾರೂಕ್‌, ರಜಿನಿಗಿಂತ ಹೆಚ್ಚು ಗಳಿಕೆ!

ಕಳೆದ ಎರಡು ವರ್ಷಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಅತ್ಯಂತ ಸಕ್ಸಸ್‌ಫುಲ್‌ ನಟ ಯಾರೆಂದು ಕೇಳಿದರೆ, ಬಹುತೇಕರು ಶಾರೂಕ್ ಖಾನ್‌, ರಜನೀಕಾಂತ್‌, ಯಶ್‌, ಪ್ರಭಾಸ್‌, ರಾಮ್‌ಚರಣ್‌ ಮೊದಲಾದವರ ಹೆಸರು ಹೇಳಬಹುದು. ಆದ್ರೆ ಇವರ್ಯಾರು ಅಲ್ಲ. ಕಳೆದ ಎರಡು ವರ್ಷದಲ್ಲಿ ಈ ನಟ ನಟಿಸಿದ ಮೂರು ಚಿತ್ರಗಳು ಬ್ಯಾಕ್‌ ಟು ಬ್ಯಾಕ್ ಸೂಪರ್‌ ಹಿಟ್ ಆಗಿವೆ. 

28

ಈ ನಟ ನಟಿಸಿದ ಮೂರು ಚಿತ್ರಗಳು ಭರ್ತಿ 2200 ಕೋಟಿ ರೂ. ಗಳಿಸಿವೆ. ಅಂದರೆ ಇದು ರಜನಿಕಾಂತ್, ಶಾರೂಕ್‌, ಸಲ್ಮಾನ್‌ಗಿಂತ ಹೆಚ್ಚು. ಆದರೆ ಈ ನಟ ಸೂಪರ್‌ಸ್ಟಾರ್‌ ಅಲ್ಲ. ಸಿನಿಮಾಗಳಲ್ಲಿ ವಿಲನ್‌, ಪೋಷಕ ಪಾತ್ರಗಳಲ್ಲಿ ನಟಿಸುತ್ತಿರೋ ಆಕ್ಟರ್‌. ನೋಡೋಕೆ ಸಖತ್‌ ಹೈಟ್‌ ವೈಟ್‌ ಇರೋ ನಟ ಸಹ ಅಲ್ಲ. ಕೇವಲ 4 ಅಡಿ 8 ಇಂಚು ಹೈಟ್ ಇದ್ದಾರೆ. 

38

27 ವರ್ಷದ ನಟ ಜಾಫರ್ ಸಾದಿಕ್ ಕಳೆದ ಕೆಲವು ವರ್ಷಗಳಿಂದ ತಮಿಳು ಚಿತ್ರರಂಗದ ಅನೇಕ ಯುವ ನಿರ್ದೇಶಕರ ಮೊದಲ ಆಯ್ಕೆಯಾಗಿದ್ದಾರೆ. 2022ರಿಂದ, ಅವರು ಕೆಲವು ದೊಡ್ಡ ಚಲನಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟನ ಕೊನೆಯ ಮೂರು ಚಿತ್ರಗಳು ವಿಕ್ರಮ್, ಜೈಲರ್ ಮತ್ತು ಜವಾನ್. ಈ ಮೂರೂ ಭಾರಿ ಸಿನಿಮಾಗಳು ಬ್ಲಾಕ್‌ಬಸ್ಟರ್ ಆಗಿವೆ. ಈ ಸಿನಿಮಾಗಳ ಒಟ್ಟು ಗಳಿಕೆ 2200 ಕೋಟಿ ರೂ. ಮೀರಿದೆ

48

ಜಾಫರ್ ಸಾದಿಕ್ ಯಾರು?
1995ರಲ್ಲಿ ಜನಿಸಿದ ಜಾಫರ್ ಸಾದಿಕ್ ತನ್ನ 20ರ ದಶಕದ ಆರಂಭದಲ್ಲಿ ಆಕ್ಟಿಂಗ್‌ ಕೆರಿಯರ್ ಆರಂಭಿಸಿದರು. ಅದಕ್ಕೂ ಮೊದಲು ಅವರು ಕೊರಿಯೋಗ್ರಾಫರ್‌ ಆಗಿ ಕೆಲಸ ಮಾಡಿದ್ದರು. 

58

ಇಲ್ಲಿಯವರೆಗಿನ ತಮ್ಮ ಸಿನಿಮಾಗಳಲ್ಲಿ ಜಾಫರ್, ಖಳನಾಯಕನ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ. 2020ರಲ್ಲಿ ತಮಿಳು ವೆಬ್‌ ಸಿರೀಸ್‌ 'ಪಾವ ಕಡೈಗಲ್‌'ನಲ್ಲಿ ಅವರ ಅಭಿನಯ ಮೊದಲ ಬಾರಿಗೆ ಎಲ್ಲರ ಗಮನ ಸೆಳೆಯಿತು. 

68

2022ರಲ್ಲಿ, ಅವರು ಕಮಲ್ ಹಾಸನ್ ನಟಿಸಿದ ವಿಕ್ರಮ್‌ ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡಿದರು. ವಿಜಯ್ ಸೇತುಪತಿಯ ಪಾತ್ರದ ಸಹಾಯಕನಾಗಿ ನಟಿಸಿದರು. ಚಿತ್ರ ಬಾಕ್ಸಾಫೀಸಿನಲ್ಲಿ ಬರೋಬ್ಬರಿ 414 ಕೋಟಿ ರೂ. ಗಳಿಸಿತು.

78

ಆ ನಂತರ ಜಾಫರ್‌, 2023ರಲ್ಲಿ ರಜನಿಕಾಂತ್ ಅವರ ಜೈಲರ್ ಮತ್ತು ಶಾರುಖ್ ಖಾನ್ ಅವರ ಜವಾನ್ ನಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಇವೆರಡೂ ವರ್ಷದ ಬ್ಲಾಕ್‌ಬಸ್ಟರ್ ಸಿನಿಮಾಗಳಾಗಿವೆ.

88

ಜಾಫರ್ ಸಾದಿಕ್ ಅವರ ಬಾಕ್ಸ್ ಆಫೀಸ್ ರನ್ 2023ರ ನಂತರವೂ ಮುಂದುವರಿಯುವ ಸಾಧ್ಯತೆಯಿದೆ. ಈ ತಿಂಗಳ ಕೊನೆಯಲ್ಲಿ, ಲೋಕೇಶ್ ಕನಕರಾಜ್ ನಿರ್ದೇಶನದ, ವಿಜಯ್ ಅಭಿನಯದ ಲಿಯೋ ಚಿತ್ರದಲ್ಲಿ ಜಾಫರ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಹಣವನ್ನು ಗಳಿಸುವ ನಿರೀಕ್ಷೆಯಿದೆ. 2024ರಲ್ಲಿ, ನಟ ಸೂರ್ಯ ಅವರ ಹೆಸರಿಡದ ಸಿನಿಮಾದಲ್ಲಿ ಅಭಿನಯಿಸಲು ಸಹ ಜಾಫರ್ ಆಯ್ಕೆಯಾಗಿದ್ದಾರೆ.

Read more Photos on
click me!

Recommended Stories