ಟ್ರೆಡಿಷನಲ್​ ಲುಕ್​ನಲ್ಲಿ ವಜ್ರಕಾಯ ಬೆಡಗಿ: ನಭಾ ಸೌಂದರ್ಯ ನೋಡಿ ದೇವಕನ್ಯೆ ಎಂದ ಫ್ಯಾನ್ಸ್‌!

Published : Oct 12, 2023, 01:00 AM IST

ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟಿ ನಭಾ ನಟೇಶ್‌. ಇವರು ವಜ್ರಕಾಯ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಸದ್ಯ ಸಿನಿಮಾ ಅವಕಾಶಕ್ಕಾಗಿ ಕಾಯುತ್ತಿರುವ ಇವರು ಸೋಷಿಯಲ್‌ ಮೀಡಿಯಾದಲ್ಲಿ ಒಂದಲ್ಲಾ ಒಂದು ರೀತಿಯ ಪೋಟೋ ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ.

PREV
17
ಟ್ರೆಡಿಷನಲ್​ ಲುಕ್​ನಲ್ಲಿ ವಜ್ರಕಾಯ ಬೆಡಗಿ: ನಭಾ ಸೌಂದರ್ಯ ನೋಡಿ ದೇವಕನ್ಯೆ ಎಂದ ಫ್ಯಾನ್ಸ್‌!

ಕನ್ನಡತಿ ನಭಾ ನಟೇಶ್‌ ಸದ್ಯ ಟಾಲಿವುಡ್‌ನಲ್ಲಿಯೇ ನೆಲೆಕಂಡುಕೊಂಡಿದ್ದಾರೆ. ಕನ್ನಡ ಸಿನಿಮಾಗಳಿಗಿಂತ ತೆಲುಗು ಚಿತ್ರಗಳಲ್ಲಿಯೇ ಹೆಚ್ಚು ಬಿಜಿಯಾಗಿದ್ದಾರೆ. ಇವರು ಸಿನಿಮಾಗಿಂತ ಹೆಚ್ಚು ಫೋಟೋಶೂಟ್​ ಮೂಲಕವೇ ಗಮನ ಸೆಳೆಯುತ್ತಾರೆ. 

27

ನಭಾ ನಟೇಶ್ ಹೊಸ ಫ್ಯಾಷನ್​ ವೇರ್​ಗಳನ್ನು ಧರಿಸಿ ಕ್ಯಾಮರಾದಲ್ಲಿ ಸೆರೆಯಾಗುತ್ತಾರೆ. ಇವರ ಸ್ಟೈಲಿಶ್​ ಅವತಾರ ಕಾಣಲೆಂದೇ ಅಭಿಮಾನಿಗಳು ಕೂಡ ಬಕಪಕ್ಷಿಯಂತೆ ಕಾದು ಕುಳಿತಿರುತ್ತಾರೆ. 

37

ಇದೀಗ ನಭಾ ಹಂಚಿಕೊಂಡಿರುವ ಫೋಟೋಗಳು ಫ್ಯಾನ್ಸ್​ ಎದೆಗೆ ಕಿಚ್ಚು ಹಚ್ಚಿವೆ. ಟ್ರೆಡಿಷನಲ್​ ಲುಕ್​ನಲ್ಲಿ ನಟಿ ಸಖತ್​ ಫೋಟೋಶೂಟ್ ಮಾಡಿಸಿದ್ದಾರೆ. ನಟಿಯ ಚೆಂದದ ಫೋಟೋಗಳಿಗೆ ಲೈಕ್​ಗಳ ಸುರಿಮಳೆಯಾಗಿದ್ದು, ಇವರ ಚೆಲುವನ್ನು ಅಭಿಮಾನಿಗಳು ಹಾಡಿ ಹೊಗಳಿದ್ದಾರೆ. 

47

ನಟಿ ನಭಾ ನಟೇಶ್ ಅವರು 2015ರಲ್ಲಿ ರಿಲೀಸ್ ಆದ ಕನ್ನಡದ ‘ವಜ್ರಕಾಯ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. 2019ರಲ್ಲಿ ರಿಲೀಸ್ ಆದ ತೆಲುಗಿನ ‘ಇಸ್ಮಾರ್ಟ್ ಶಂಕರ್’ ಚಿತ್ರದ ಮತ್ತಷ್ಟು ಜನಪ್ರಿಯತೆ ಪಡೆದರು. 

57

2017ರಲ್ಲಿ ನಭಾ ಅವರು ಸುಮಂತ್ ಶೈಲೇಂದ್ರ ಅವರೊಂದಿಗೆ ಲೀ ಚಿತ್ರದಲ್ಲಿ ನಟಿಸಿದರು. ಅದೇ ವರ್ಷದಲ್ಲಿ ಅವರು ಸಾಹೇಬ ಚಿತ್ರದಲ್ಲಿ ವಿಶೇಷ ಗೀತೆಯಲ್ಲಿ ಕಾಣಿಸಿಕೊಂಡರು. ವಜ್ರಕಾಯದಲ್ಲಿ ನಭಾ ಅಭಿನಯ ಕನ್ನಡಿಗರ ಮನಸ್ಸು ಗೆದ್ದಿತ್ತು. ಅತ್ಯುತ್ತಮ ಮಹಿಳಾ ಚೊಚ್ಚಲ ಕನ್ನಡಕ್ಕಾಗಿ ಫಿಲ್ಮ್ ಫೇರ್ ಪ್ರಶಸ್ತಿಗೆ ನಾಮಿನೇಟ್​ ಆಗಿದ್ದರು.

67

ಇಸ್ಮಾರ್ಟ್ ಶಂಕರ್ ಚಿತ್ರದ ನಂತರ ಟಾಲಿವುಡ್​ನಲ್ಲಿ ನಭಾ ಮಿಂಚಿದ್ರು. ನಿರ್ಮಾಪಕರು ಕೂಡ ನಭಾ ಡೇಟ್​ಗಾಗಿ ಕಾಯುತ್ತಿದ್ದರು. ನಭಾ ನಟೇಶ್ ಈಗಾಗಲೇ ರವಿತೇಜ, ಬೆಲ್ಲಂಕೊಂಡ ಶ್ರೀನಿವಾಸ್ ಸೇರಿದಂತೆ ಹಲವು ನಾಯಕರಿಗೆ ಜೋಡಿಯಾಗಿದ್ದಾರೆ.

77

ಮೂಲತಃ ಶೃಂಗೇರಿಯವರಾದ ನಭಾ ನಟೇಶ್‌, 2015ರಲ್ಲಿ ವಜ್ರಕಾಯ ಸಿನಿಮಾ ಮೂಲಕ ಕನ್ನಡದಲ್ಲಿ ನಟಿಸಿ, 2018ರಲ್ಲಿ ತೆಲುಗಿನತ್ತ ಪ್ರಯಾಣ ಬೆಳೆಸಿದ್ದರು. ಅಲ್ಲಿಯೂ ಹಲವು ಸಿನಿಮಾಗಳಲ್ಲಿ ನಟಿಸಿ ಇದೀಗ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿಯೂ ಬಿಜಿಯಾಗಿದ್ದಾರೆ.

Read more Photos on
click me!

Recommended Stories