ಊಹಿಸಲಾರದ Plot Twist ಇರೋ ಸಿನಿಮಾಗಳಿವು… ಯೋಚಿಸೋದು ಒಂದು, ಅಲ್ಲಿ ಆಗೋದು ಇನ್ನೊಂದು

Published : Nov 03, 2025, 05:22 PM IST

ನೀವು ಊಹಿಸಲಾರದ Plot Twist ಇರುವಂತಹ ಸಿನಿಮಾಗಳನ್ನು ನೋಡಲು ಇಷ್ಟಪಟ್ಟರೆ ಇಲ್ಲಿವೆ ಒಂದಷ್ಟು ಸಿನಿಮಾಗಳ ಲಿಸ್ಟ್. ಸಿನಿಮಾ ಆರಂಭವಾದಾಗ ನೀವು ಅಂದುಕೊಳ್ಳೋದು ಒಂದು ಇಲ್ಲಿ ಆಗೋದು ಇನ್ನೊಂದು. ಸಖತ್ ಥ್ರಿಲ್ಲಿಂಗ್ ಆಗಿರುವ ಸಿನಿಮಾಗಳನ್ನ ನೀವು ಮಿಸ್ ಮಾಡದೆ ನೋಡಬೇಕು. 

PREV
110
ಯೂ ಟರ್ನ್

ಫ್ಲೈ ಓವರ್ ಮೇಲಿರುವ ಯೂಟರ್ನ್ ಬಗ್ಗೆ ವರದಿ ಮಾಡಲು ಹೋಗುವ ರಿಪೋರ್ಟರ್ ಒಬ್ಬಳು, ತಾನೇ ಯೂಟರ್ನ್ ತೆಗೆದುಕೊಂಡು ತನ್ನ ಜೀವನಕ್ಕೆ ಸಾವನ್ನು ಬರಮಾಡಿಕೊಳ್ಳುವ ರೋಚಕ ಕಥೆ ಇದು.

210
ಗೇಮ್ ಓವರ್

ಗೇಮ್ ಡಿಸೈನರ್ ಸ್ವಪ್ನಾ, ಪಿಟಿಎಸ್‌ಡಿಯಿಂದ ಬಳಲುತ್ತಿದ್ದು, ತನ್ನ ಮನೆಕೆಲಸದಾಕೆಯೊಂದಿಗೆ ಏಕಾಂಗಿಯಾಗಿ ವಾಸಿಸುತ್ತಾಳೆ. ಆದರೆ, ಸೀರಿಯಲ್ ಕಿಲ್ಲರ್ ಆಕೆಯ ಮನೆಗೆ ಪ್ರವೇಶಿಸಿದ ನಂತರ ಅವಳ ಜೀವನವೇ ತಲೆಕೆಳಗಾಗುತ್ತೆ. ಮತ್ತೆನಾಗುತ್ತೆ ನೀವೇ ನೋಡಬೇಕು.

310
ತಲಾಶ್

ಇನ್ಸ್‌ಪೆಕ್ಟರ್ ಶೇಖಾವತ್ ಮತ್ತು ಅವರ ಪತ್ನಿ ತಮ್ಮ ಮಗ ಸತ್ತ ಶಾಕ್ ನಲ್ಲಿರುತ್ತಾರೆ.ಪತ್ನಿ ತನ್ನ ನೋವನ್ನು ಓಪನ್ ಆಗಿ ತೋರಿಸಿದ್ರೆ, ಆತ ಕೊಲೆಯೊಂದರ ಹಿಂದೆ ಓಡುತ್ತಾನೆ. ಮತ್ತೆ ಇರೋದು ಟ್ವಿಸ್ಟ್.

410
ಕಹಾನಿ

ವಿದ್ಯಾ ಬಾಗ್ಚಿ ಎನ್ನುವ ಗರ್ಭಿಣಿ ಮಹಿಳೆ, ಕಾಣೆಯಾದ ತನ್ನ ಗಂಡನನ್ನು ಹುಡುಕಲು ಲಂಡನ್‌ನಿಂದ ಕೋಲ್ಕತ್ತಾಗೆ ಪ್ರಯಾಣ ಬೆಳೆಸುತ್ತಾಳೆ. ಆದರೆ ಆಕೆ ಡೆಡ್ ಎಂಡ್ ಗೆ ಮುಟ್ಟುತ್ತಾಳೆ ಎನ್ನುವಾಗ ಹೊಸ ಟ್ವಿಸ್ಟ್ ತೆರೆದುಕೊಳ್ಳುತ್ತೆ.

510
ಲೂಸಿಯಾ

ಥಿಯೇಟರ್ ನ ಒಬ್ಬ ದ್ವಾರಪಾಲಕ ನಿದ್ರಾಹೀನತೆಯನ್ನು ನಿಭಾಯಿಸಲು ಹೆಣಗಾಡುತ್ತಾನೆ. ಆದರೆ ಆತ ಒಂದು ದಿನ ಔಷಧಿ ಒಂದನ್ನು ತೆಗೆದುಕೊಳ್ಳಲು ಆರಂಭಿಸುತ್ತಾನೆ. ಇದರಿಂದ ಆತ ಹಗಲು ಕನಸು ಕಾಣಲು ಶುರುಮಾಡುತ್ತಾನೆ. ಇದರಿಂದ ಆತನ ಜೀವನವೇ ಬದಲಾಗುತ್ತೆ.

610
ಪಿಜ್ಜಾ

ಪಿಜ್ಜಾ ಡೆಲಿವರಿ ಬಾಯ್ ಮೈಕೆಲ್, ಹಾರರ್ ಕಾದಂಬರಿ ರೈಟರ್ ಅನು ಜೊತೆ ವಾಸಿಸುತ್ತಾನೆ. ಒಂದು ದಿನ, ಪುಡ್ ಡೆಲಿವರಿ ಮಾಡಲು ಒಂದು ಬಂಗಲೆಗೆ ಹೋದಾಗ ಅಲ್ಲಿ, ಭಯಾನಕ ಘಟನೆಗಳು ನಡೆಯುತ್ತೆ. ಮತ್ತೇನಾಗುತ್ತೆ. ಸಿನಿಮಾ ನೋಡಿ.

710
ಕಾರ್ತಿಕ್ ಕಾಲಿಂಗ್ ಕಾರ್ತಿಕ್

ಇಂಟ್ರೋವರ್ಟ್ ಕಾರ್ತಿಕ್ ತನ್ನ ಬಾಸ್ ನಿಂದ ಯಾವಾಗಲೂ ಅಪಹಾಸ್ಯಕ್ಕೊಳಗಾಗುತ್ತಾನೆ ಮತ್ತು ಜೀವನದುದ್ದಕ್ಕೂ ಅನೇಕ ಹಿನ್ನಡೆಗಳನ್ನು ಎದುರಿಸಿರುವ ವ್ಯಕ್ತಿ. ಆದರೆ, ಒಂದು ದಿನ, ಅವನಿಗೆ ಅಪರಿಚಿತರಿಂದ ಫೋನ್ ಕರೆ ಬರುತ್ತದೆ, ಇದರಿಂದ ಅವರ ಜೀವನವೇ ಬದಲಾಗುತ್ತದೆ.

810
ಎ ಥರ್ಸ್ ಡೇ

ಮುಂಬೈ ನಗರದಲ್ಲಿ ಒಂದು ಗುರುವಾರ, ನರ್ಸರಿ ಶಾಲಾ ಶಿಕ್ಷಕಿ ನೈನಾ 16 ಮಕ್ಕಳನ್ನು ಒತ್ತೆಯಾಳಾಗಿಟ್ಟುಕೊಂಡು, ಊಹಿಸದ ಬೇಡಿಕೆಗಳ ಪಟ್ಟಿಯನ್ನಿಟ್ಟು, ಪ್ರಧಾನಿವರೆಗೂ ತನ್ನ ಮಾತು ತಲುಪುವಂತೆ ಮಾಡುತ್ತಾಳೆ. ಕೊನೆಗೆ ಏನಾಗುತ್ತೆ ಅನ್ನೋದನ್ನು ನೀವೇ ನೋಡಬೇಕು.

910
ಮಾನಾಡು

ಮುಖ್ಯಮಂತ್ರಿಯವರ ಸಾರ್ವಜನಿಕ ಸಮ್ಮೇಳನದ ದಿನದಂದು ಒಬ್ಬ ವ್ಯಕ್ತಿ ಮತ್ತು ಪೊಲೀಸ್ ಅಧಿಕಾರಿ ಸಮಯದ ಲೂಪ್‌ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ, ಅವರು ಒಂದೇ ದಿನವನ್ನು ಮತ್ತೆ ಮತ್ತೆ ಬದುಕಬೇಕಾಗುತ್ತದೆ. ಮತ್ತೆ ನಡೆಯೋದೆ ಇಂಟ್ರೆಸ್ಟಿಂಗ್ ಎಪಿಸೋಡ್. 

1010
ಎವರು

ಸಮೀರಾಳ ಮೇಲೆ ಅ*ತ್ಯಾಚಾರ ಎಸಗಿದ ಹಿರಿಯ ಅಧಿಕಾರಿಯ ಕೊಲೆಗಾರನನ್ನು ಹಿಡಿಯುವ ಕೆಲಸವನ್ನು ಪೊಲೀಸ್ ಇನ್ಸ್‌ಪೆಕ್ಟರ್ ವಿಕ್ರಮ್ ವಹಿಸಿಕೊಳ್ಳುತ್ತಾನೆ. ಅವನು ತನಿಖೆ ಪ್ರಾರಂಭಿಸಿದಾಗ, ಅವನ ಭೂತಕಾಲಕ್ಕೆ ಸಂಬಂಧಿಸಿದ ಕರಾಳ ರಹಸ್ಯಗಳು ಅವನಿಗೆ ಎದುರಾಗುತ್ತವೆ. ಆಮೇಲೆ ಏನಾಗುತ್ತೆ ಅನ್ನೋದು ಸಿನಿಮಾ.

Read more Photos on
click me!

Recommended Stories