Arjun Kapoor ಬಳಿಕ 33 ವರ್ಷದ ಕೋಟ್ಯಾಧಿಪತಿ ಜೊತೆ 52ರ Malaika Arora ಡೇಟಿಂಗ್!

Published : Nov 03, 2025, 03:53 PM IST

ಮುಂಬೈನಲ್ಲಿ ನಡೆದ ಎನ್ರಿಕ್ ಇಗ್ಲೇಷಿಯಸ್ ಕನ್ಸರ್ಟ್ ನಲ್ಲಿ ಮಲೈಕಾ ಅರೋರಾ ಹ್ಯಾಂಡ್ಸಮ್ ಹಂಕ್ ಜೊತೆ ಕಾಣಿಸಿಕೊಂಡಿತ್ತು, ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಆ ವ್ಯಕ್ತಿ ಯಾರು? ನಿಜಕ್ಕೂ ಇವರಿಬ್ಬರು ಲವ್ ಮಾಡ್ತಿದ್ದಾರೆಯೇ? ಇಲ್ಲಿದೆ ಮಾಹಿತಿ.

PREV
18
ಮತ್ತೆ ಲವ್ವಲ್ಲಿ ಬಿದ್ದ ಮಲೈಕಾ ಅರೋರಾ

ಬಾಲಿವುಡ್ ನಟಿ ಮಲೈಕ ಅರೋರಾ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುವ ಮೂಲಕ ಸುದ್ದಿಯಲ್ಲಿದ್ದರು. ಇದೀಗ ತನಗಿಂತ 19 ವರ್ಷಕ್ಕಿಂತ ಕಿರಿಯ ಕೋಟ್ಯಾಧಿಪತಿ ಜೊತೆ ಮಲೈಕಾ ಡೇಟಿಂಗ್ ಮಾಡುತ್ತಿರುವುದಾಗಿ ಸುದ್ದಿ ಹರಡಿದೆ.

28
ಎನ್ರಿಕ್ ಮ್ಯೂಸಿಕ್ ಕಾನ್ಸರ್ಟ್ ನಲ್ಲಿ ಮಲೈಕಾ

ಮುಂಬೈನಲ್ಲಿ ನಡೆದ ಎನ್ರಿಕ್ ಇಗ್ಲೇಷಿಯಸ್ ಅವರ ಕನ್ಸರ್ಟ್ ನಲ್ಲಿ ಮಲೈಕಾ ಅರೋರಾ ಬಿಳಿ ಟ್ಯಾಂಕ್ ಟಾಪ್ ಮತ್ತು ನೀಲಿ ಶಾರ್ಟ್ಸ್‌ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ಅದರ ಜೊತೆಗೆ ಮಲೈಕಾ ಜೊತೆಗಿದ್ದ ಬಿಳಿ ಶರ್ಟ್ ಧರಿಸಿದ ವ್ಯಕ್ತಿ ಎಲ್ಲರ ಗಮನ ಸೆಳೆದರು, ಅವರು ಮಲೈಕಾ ಜೊತೆ ಮಾತನಾಡುತ್ತಾ, ಅವರ ಜೊತೆ ಆತ್ಮೀಯವಾಗಿರೋದು ಕಂಡು ಬಂದಿದೆ.

38
ಜೊತೆಯಾಗಿ ಕಾಣಿಸಿಕೊಂಡ ಜೋಡಿ

ಮಲೈಕಾ ಅರೋರಾ ಮತ್ತು ಈ ವ್ಯಕ್ತಿ ಇಡೀ ಕಾರ್ಯಕ್ರಮವನ್ನು ಒಟ್ಟಿಗೆ ವೀಕ್ಷಿಸಿದ್ದು ಮಾತ್ರವಲ್ಲದೆ, ಕಾರ್ಯಕ್ರಮ ಮುಗಿದ ನಂತರವೂ ಒಟ್ಟಿಗೆ ಕಾಣಿಸಿಕೊಂಡರು. ಹಾಗಾಗಿ ಇವರು ಮಲೈಕಾ ಅರೋರಾ ಹೊಸ ಬಾಯ್ ಫ್ರೆಂಡ್ ಎನ್ನುವ ರೂಮರ್ಸ್ ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿದೆ.

48
ಯಾರು ಈ ಹೊಸ ಮಿಸ್ಟ್ರಿ ಮ್ಯಾನ್

ಇದೀಗ ಎಲ್ಲೆಡೆ ಹರಿದಾಡುತ್ತಿರುವ ಸುದ್ದಿಯಂತೆ ಮಲೈಕಾ ಅರೋರ ಇದೀಗ ತಮ್ಮ ಬ್ರೇಕ್ ಅಪ್ ನಿಂದ ಹೊರ ಬಂದಿದ್ದು, ಹೊಸ ಬಾಯ್ ಫ್ರೆಂಡ್ ಸಿಕ್ಕಿದ್ದಾರೆ ಎನ್ನುತ್ತಿದ್ದಾರೆ. ಕೆಲವು ಇನ್‌ಸ್ಟಾಗ್ರಾಮ್ ಖಾತೆಗಳು ಆ ವ್ಯಕ್ತಿ 33 ವರ್ಷದ ವಜ್ರ ವ್ಯಾಪಾರಿ ಹರ್ಷ್ ಮೆಹ್ತಾ ಎಂದು ಹೇಳಿಕೊಂಡಿವೆ. ಆದರೆ ನಿಜವಾಗಿಯೂ ಆ ವ್ಯಕ್ತಿ ಯಾರು ಅನ್ನೋದು ದೃಢವಾಗಿಲ್ಲ.

58
ಮತ್ತೆ ಪ್ರೀತಿ ಕಂಡುಕೊಂಡ ಮಲೈಕಾ

ವೈರಲ್ ಪೋಸ್ಟ್‌ಗಳ ಕಾಮೆಂಟ್‌ಗಳ ಸೆಕ್ಷನ್ ನಲ್ಲಿ ಈ ಹೊಸ ಜೋಡಿಯ ಕುರಿತು ಹಲವಾರು ಪ್ರಶ್ನೆಗಳೇ ತುಂಬಿಕೊಂಡಿವೆ. ಮಲೈಕಾ ಮತ್ತೆ ಡೇಟಿಂಗ್ ಮಾಡುತ್ತಿದ್ದಾರಾ? ಮತ್ತು ಹೊಸ ಜೋಡಿ ನಿಜವಾಗಲೂ ಲವ್ ಮಾಡ್ತಿದ್ದಾರೆ? ಎನ್ನುವ ಪ್ರಶ್ನೆಗಳನ್ನು ಜನ ಕೇಳಿದ್ದಾರೆ.

68
ಯಾರು ಈ ಹರ್ಷ್ ಮೆಹ್ತಾ

ಹರ್ಷ್ ವಜ್ರದ ಕಂಪನಿ ಹೊಂದಿದ್ದಾರೆ. ಮಲೈಕಾ ಹರ್ಷ್ ಗಿಂತ 19 ವರ್ಷ ದೊಡ್ಡವರು, ಮತ್ತು ಮಾಧ್ಯಮ ವರದಿಗಳ ಪ್ರಕಾರ, ಹರ್ಷ್ ಬೆಲ್ಜಿಯಂನಲ್ಲಿ ವಜ್ರದ ಕಂಪನಿಯನ್ನು ಹೊಂದಿದ್ದಾರೆ. ಇಬ್ಬರೂ ಕೆಲವು ತಿಂಗಳುಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಆದರೆ, ಅವರಿಬ್ಬರೂ ತಮ್ಮ ಸಂಬಂಧವನ್ನು ರಹಸ್ಯವಾಗಿಡಲು ಬಯಸಿದ್ದಾರೆ ಎನ್ನಲಾಗುತ್ತಿದೆ.

78
ಇಬ್ಬರ ನಡುವೆ 19 ವರ್ಷಗಳ ವಯಸ್ಸಿನ ಅಂತರವಿದೆಯೇ?

ವರದಿಗಳ ಪ್ರಕಾರ, ಮಲೈಕಾ ಈ ಬಾರಿ ಪ್ರೀತಿಸುತ್ತಿರುವ ವ್ಯಕ್ತಿ ಅರ್ಜುನ್ ಕಪೂರ್ ಗಿಂತ ಹಲವಾರು ವರ್ಷ ಚಿಕ್ಕವನು. ಸೋಶಿಯಲ್ ಮೀಡಿಯಾ ವರದಿಗಳ ಪ್ರಕಾರ ಹರ್ಷ ಮೆಹ್ತಾಗೆ ಈಗ ಕೇವಲ 33 ವರ್ಷ, ಆದರೆ ಮಲೈಕಾಗೆ ಈಗ 52 ವರ್ಷ.

88
ಐದು ವರ್ಷಗಳ ಕಾಲ ಅರ್ಜುನ್ ಕಪೂರ್ ಜೊತೆ ಡೇಟಿಂಗ್

ಮಲೈಕಾ ಈ ಹಿಂದೆ ನಟ ಅರ್ಜುನ್ ಕಪೂರ್ ಜೊತೆ ಐದು ವರ್ಷ ಡೇಟಿಂಗ್ ಮಾಡಿದ್ದರು. ಇಬ್ಬರೂ ತಮ್ಮ ಸಂಬಂಧವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತವಾಗಿ ಘೋಷಿಸಿದರು ಮತ್ತು ಕಾರ್ಯಕ್ರಮಗಳಲ್ಲಿ ಮತ್ತು ವೆಕೇಶನ್ ಗಳಲ್ಲಿ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಹಲವಾರು ವರ್ಷಗಳ ಡೇಟಿಂಗ್ ನಂತರ, ಅವರು ಇತ್ತೀಚೆಗೆ ಬ್ರೇಕ್ ಅಪ್ ಮಾಡಿಕೊಂಡಿದ್ದರು.

Read more Photos on
click me!

Recommended Stories